ಸ್ಯಾನ್ ಪ್ರಾನ್ಸಿಸ್ಕೊ : ಹೊಸ ಸೆರಾಮಿಕ್ ಬ್ರೇಕ್‌ಗಳನ್ನು ಹೊಂದಿರುವ ಟೆಸ್ಲಾದ S ಪ್ಲೇಡ್ ಮಾಡೆಲ್ ಕಾರು ಪ್ರತಿ ಗಂಟೆಗೆ 322 ಕಿಲೋಮೀಟರ್ ವೇಗದಲ್ಲಿ ಚಲಿಸಿ ಗರಿಷ್ಠ ವೇಗದ ಗುರಿಯನ್ನು ಸಾಧಿಸಿದೆ. ಎಲೋನ್ ಮಸ್ಕ್ ಒಡೆತನದ ಕಂಪನಿ ಟೆಸ್ಲಾದ ಉನ್ನತ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಕಾರ್ ಆಗಿರುವ S ಪ್ಲೇಡ್ ಪ್ರತಿ ಗಂಟೆಗೆ 322 ಕಿಲೋಮೀಟರ್ ವೇಗದಲ್ಲಿ ಓಡಲಿದೆ ಎಂದು ಕಾರು ಬಿಡುಗಡೆ ಮಾಡುವ ಸಂದರ್ಭದಲ್ಲಿ ಟೆಸ್ಲಾ ಹೇಳಿಕೊಂಡಿತ್ತು. ಈಗ ಟೆಸ್ಲಾ ಅದನ್ನು ಸಾಕಾರಗೊಳಿಸಿದೆ.
ಟೆಸ್ಲಾ ಬೆಲ್ಜಿಯಂ ಸಹಯೋಗದಲ್ಲಿ ರೇಸ್ ಕಾರ್ ಡ್ರೈವರ್ ಒಬ್ಬರು ವೀಡಿಯೊ ಒಂದನ್ನು ಪಬ್ಲಿಷ್ ಮಾಡಿದ್ದಾರೆ. ಸೆರಾಮಿಕ್ ಬ್ರೇಕ್‌ಗಳನ್ನು ಹೊಂದಿರುವ S ಪ್ಲೇಡ್ ಮಾಡೆಲ್ ಕಾರನ್ನು ಸರ್ಕಿಟ್ ಡೆ ಬ್ರೆಸ್ಸೆ (Circuit de Bresse) ನಲ್ಲಿ ಟೆಸ್ಟ್ ಲ್ಯಾಪ್ ಮಾಡಲು ಇವರಿಗೆ ನೀಡಲಾಗಿತ್ತು. ಟೆಸ್ಲಾ ಈ ಕಾರಿನ ಬ್ರೇಕ್‌ಗಳನ್ನು ತಾನಾಗಿಯೇ ಬದಲಾಯಿಸಲು ನಿರ್ಧರಿಸಿದಂತಿದೆ. ಕಾರನ್ನು ಟೆಸ್ಟ್ ಮಾಡಿದ ಡ್ರೈವರ್ ಮಾತನಾಡಿ, ಹಳೆಯ ಕಾರಿಗೆ ಹೋಲಿಸಿದರೆ ಇದೊಂದು ಸಂಪೂರ್ಣ ವಿಭಿನ್ನವಾದ ಕಾರ್ ಆಗಿದೆ ಎಂದು ಹೇಳಿದ್ದಾರೆ.
ವಾಹನವು ವೇಗ ನಿಯಂತ್ರಕ ಹೊಂದಿರಲಿಲ್ಲ ಎಂಬುದನ್ನು ಡ್ರೈವರ್ ಉಲ್ಲೇಖಿಸಿದ್ದಾರೆ ಮತ್ತು ಆತ ಹಲವಾರು ಬಾರಿ ಪ್ರತಿ ಗಂಟೆಗೆ 350 ಕಿಲೊಮೀಟರ್ ವೇಗವನ್ನು ತಲಪುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ನವೀಕರಿಸಿದ ಎಸ್ ಪ್ಲೈಡ್‌ನೊಂದಿಗೆ ರೇಸ್ ಟ್ರ್ಯಾಕ್‌ನಲ್ಲಿ ಸ್ಟ್ರೀಟ್ ಲೀಗಲ್ ಕಾರ್ ವಿಚಾರದಲ್ಲಿ ಲ್ಯಾಪ್ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಡ್ರೈವರ್ ಹೇಳಿಕೊಂಡಿದ್ದಾನೆ. ಮಾಡೆಲ್ ಎಸ್ ಪ್ಲಾಯಿಡ್‌ಗಾಗಿ, ವಾಹನ ತಯಾರಕ ಟೆಸ್ಲಾ ಕಳೆದ ವರ್ಷ ಜನವರಿಯಲ್ಲಿ ಹೊಸ ಟ್ರ್ಯಾಕ್ ಮೋಡ್ ಕೂಡಾ ಅಳವಡಿಸಿದೆ. ಇದು ಗರಿಷ್ಠ ವೇಗವನ್ನು ಪ್ರತಿ ಗಂಟೆಗೆ 282 ಕಿಲೋ ಮೀಟರ್ಗಳಿಗೆ ಹೆಚ್ಚಿಸಿಕೊಂಡಿದೆ.
ಬ್ರೇಕ್‌ಗಳು ವೇಗವನ್ನು ಸೀಮಿತಗೊಳಿಸುವ ಅಂಶವಾಗಿದ್ದವು ಎಂದು ತೋರುತ್ತದೆ. ಕಾರು ಈಗ ಹೊಸ ಗರಿಷ್ಠ ವೇಗದಲ್ಲಿ ಸಾಗಬಹುದಾಗಿದೆ. ಆದರೆ ಇಂಥ ಗರಿಷ್ಠ ವೇಗವನ್ನು ನಿಯಂತ್ರಿಸಲು ಸಾಧ್ಯವಾಗುವ ದೊಡ್ಡ ಬ್ರೇಕ್‌ಗಳನ್ನು ಅಳವಡಿಸದೇ ಟೆಸ್ಲಾ ಇದಕ್ಕೂ ಹೆಚ್ಚಿನ ವೇಗವನ್ನು ತಲುಪಲು ಬಯಸುವುದಿಲ್ಲ ಎಂದು ವರದಿ ಹೇಳಿದೆ. ಕಳೆದ ವರ್ಷ ಜೂನ್‌ನಲ್ಲಿ, ವಾಹನವನ್ನು ತಯಾರಿಸಿದ ಕಂಪನಿ ಅಳವಡಿಸಿದ್ದ ವೇಗ ನಿಯಂತ್ರಕವನ್ನು ತೆಗೆದು ಹಾಕಲು ಸಾಧ್ಯವಾದ ನಂತರ ಮಾಡೆಲ್ ಎಸ್ ಪ್ಲೈಡ್ ಮೊದಲ ಬಾರಿಗೆ ಪ್ರತಿ ಗಂಟೆಗೆ 322 ಕಿಲೋ ಮೀಟರ್ ಗರಿಷ್ಠ ವೇಗವನ್ನು ದಾಟಿದೆ.
ಎಲೋನ್ ಮಸ್ಕ್ ಟಾಪ್ ಸೀಕ್ರೆಟ್: ಟ್ವಿಟರ್ ಸಿಇಒ ಮಂಗಳ ಗ್ರಹದಲ್ಲಿ ನಗರವೊಂದನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಉಲ್ಲೇಖಿಸಿರುವ ಪೋಸ್ಟ್‌ಗೆ ಎಲೋನ್ ಮಸ್ಕ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಅದೊಂದು ಟಾಪ್ ಸೀಕ್ರೆಟ್ ಎಂದು ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಮಸ್ಕ್ ಅವರು 20 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಸ್ವಾವಲಂಬಿ ನಗರವನ್ನು ಸ್ಥಾಪಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದರು. ನಿಮ್ಮ ಜೀವಿತಾವಧಿಯಲ್ಲಿ ಮಾನವರು ಮಂಗಳವನ್ನು ತಲುಪಲಿದ್ದಾರೆ ಎಂದು ಮಸ್ಕ್ ಹೇಳಿದ್ದರು.
ಇದನ್ನೂ ಓದಿ : ಮೇಡ್ ಇನ್ ಚೀನಾ ಕಾರುಗಳ ಮಾರಾಟಕ್ಕೆ ಭಾರತದಲ್ಲಿ ಸಮ್ಮತಿಯಿಲ್ಲ: ಟೆಸ್ಲಾಗೆ ಗಡ್ಕರಿ ಕಿವಿಮಾತು