ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾದ ಸೈಬರ್‌ಟ್ರಕ್ ಹೊಸ ಗಾಢವಾದ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಸೈಬರ್‌ಟ್ರಕ್ ಮಾಲೀಕರ ಕ್ಲಬ್ ಫೋರಮ್‌ನ ಸದಸ್ಯರೊಬ್ಬರು ಹೊಸ ಸೈಬರ್‌ಟ್ರಕ್ ಹೊದಿಕೆಯ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾರಿನ ಹೊದಿಕೆಯ ಬಣ್ಣ ಮತ್ತು ಎಲೆಕ್ಟ್ರಿಕ್ ಪಿಕಪ್ ಟ್ರಕ್‌ನ ವಿನ್ಯಾಸ ವೈಶಿಷ್ಟ್ಯಗಳನ್ನು ಮರೆಮಾಡಲು ಉತ್ತಮವಾಗಿದೆ.
ಈ ತಿಂಗಳ ಆರಂಭದಲ್ಲಿ, ಆಟೋ ತಯಾರಕ ಟೆಸ್ಲಾ ತನ್ನ ಮೊದಲ ಸೈಬರ್‌ಟ್ರಕ್ ತಯಾರಿಕೆಯನ್ನು ಘೋಷಿಸಿತ್ತು. ಆದಾಗ್ಯೂ ಅದರ ಎರಡು ತ್ರೈಮಾಸಿಕ ಆದಾಯಗಳ (Q2) ವರದಿ ಬಿಡುಗಡೆ ಮಾಡಿದ್ದು, ಸದ್ಯ ಕೇವಲ ಪ್ರಾಯೋಗಿಕವಾಗಿ ಮಾತ್ರ ಈ ವಾಹನಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ದೃಢಪಡಿಸಿದೆ.
ಹೊಸ ಹೊದಿಕೆಯು "ಸೈಬರ್‌ಟ್ರಕ್‌ನ ಅಂತಿಮ ವಿನ್ಯಾಸವನ್ನು ಮರೆಮಾಡಲು ಸಹಾಯ ಮಾಡುತ್ತದೆ ಅಥವಾ ಟೆಸ್ಲಾ ಎಲೆಕ್ಟ್ರಿಕ್ ಟ್ರಕ್‌ನಲ್ಲಿ ಹೊದಿಕೆಗಳನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇದು ವಾಹನವು ಪ್ರಮಾಣಿತ ಸ್ಟೇನ್‌ಲೆಸ್ ಸ್ಟೀಲ್ ಬಣ್ಣಕ್ಕಿಂತ ವಿಭಿನ್ನವಾಗಿ ಕಾಣುವಂತೆ ಮಾಡುವ ಏಕೈಕ ಮಾರ್ಗವಾಗಿದೆ" ಎಂದು ವರದಿ ಹೇಳಿದೆ.
ಅಂತಿಮ ಪ್ರಮಾಣೀಕರಣ ಮತ್ತು ಮೌಲ್ಯೀಕರಣಕ್ಕಾಗಿ ಪ್ರಪಂಚದಾದ್ಯಂತ ಸೈಬರ್ ಟ್ರಕ್ ವಾಹನಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಕಂಪನಿ ಇತ್ತೀಚೆಗೆ ಹೇಳಿದೆ. ಕಳೆದ ತಿಂಗಳು, ಎಲೆಕ್ಟ್ರಿಕ್ ಪಿಕಪ್ ಟ್ರಕ್‌ನ ಮೂಲಮಾದರಿಯು ನ್ಯೂಜಿಲ್ಯಾಂಡ್ ವಿಮಾನದ ಮೂಲಕ ಆಗಮಿಸುತ್ತಿರುವುದು ಕಂಡು ಬಂದಿತ್ತು. ಆಗಸ್ಟ್ ಅಂತ್ಯದಲ್ಲಿ ಸೈಬರ್‌ಟ್ರಕ್ ಬಿಡುಗಡೆಗೆ ಸಿದ್ಧರಾಗಿರುವಂತೆ ಟೆಸ್ಲಾ ತನ್ನ ಸರಬರಾಜುದಾರರಿಗೆ ತಿಳಿಸಿತ್ತು.
ವಾಹನವನ್ನು ಹೊದಿಕೆಯಿಂದ ಮುಚ್ಚಿದಾಗ ಕೂಡ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಅನ್ನು ಗುರುತಿಸುವುದು ಸುಲಭವಾಗಿದೆ. ಈ ಹಿಂದೆ, ಕ್ಯಾಲಿಫೋರ್ನಿಯಾದಲ್ಲಿ ಟ್ರಕ್‌ನ ಮೂಲಮಾದರಿಯನ್ನು ಹೊದಿಕೆ ಹೊದಿಸಿ ಡ್ರೈವ್-ಥ್ರೂ ಮೂಲಕ ಸಾಗಿಸುತ್ತಿರುವಾಗ ಅದನ್ನು ಗುರುತಿಸಲಾಗಿತ್ತು. ಅಲ್ಲದೆ, ಸೈಬರ್‌ಟ್ರಕ್ ಮೂಲಮಾದರಿಯು ಈ ವರ್ಷದ ಮೇ ತಿಂಗಳಲ್ಲಿ ಗ್ರಾಮೀಣ ಟೆಕ್ಸಾಸ್‌ನ ಹೊಲವೊಂದರಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೆಕ್ಸಾಸ್‌ನಲ್ಲಿ ಎಲೆಕ್ಟ್ರಿಕ್ ಟ್ರಕ್ ಕೆಲಸ ಮಾಡುತ್ತಿರುವುದನ್ನು ಗುರುತಿಸಲಾಗಿತ್ತು. 2019 ರಲ್ಲಿ ಸೈಬರ್‌ಟ್ರಕ್ ಅನ್ನು ಮೊದಲು ಘೋಷಿಸಿದಾಗ 2021 ರ ಅಂತ್ಯದ ವೇಳೆಗೆ ಎಲೆಕ್ಟ್ರಿಕ್ ಪಿಕಪ್ ಟ್ರಕ್ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿತ್ತು.
ಸೈಬರ್‌ಟ್ರಕ್ ವೆಬ್‌ಸೈಟ್‌ನ ಪ್ರಕಾರ, ವಾಹನವು 2.9 ಸೆಕೆಂಡುಗಳಲ್ಲಿ ಶೂನ್ಯದಿಂದ 60 mph ವರೆಗೆ ವೇಗವಾಗಿ ಚಲಿಸಲು ಪ್ರಾರಂಭಿಸಬಹುದು. ಆದಾಗ್ಯೂ, ಕ್ವಾಡ್-ಮೋಟರ್ ಸೈಬರ್‌ಟ್ರಕ್ ಅದೇ ವೇಗವನ್ನು ಎಷ್ಟು ಬೇಗನೆ ಸಾಧಿಸಬಹುದು ಎಂಬುದನ್ನು ಟೆಸ್ಲಾ ಬಹಿರಂಗಪಡಿಸಿಲ್ಲ. ಸೈಬರ್‌ಟ್ರಕ್‌ನ ಬಗ್ಗೆ ಮಾಹಿತಿ ನೀಡುವಾಗ, ಸಿಂಗಲ್ ಮೋಟರ್ ಆವೃತ್ತಿಯ ಟ್ರಕ್ 6.5 ಸೆಕೆಂಡುಗಳಲ್ಲಿ ಶೂನ್ಯದಿಂದ 60 mph ಗೆ ಹೋಗಲು ಸಾಧ್ಯವಾಗುತ್ತದೆ ಎಂದು ಮಸ್ಕ್ ಘೋಷಿಸಿದ್ದರು. ವೆಬ್‌ಸೈಟ್‌ನ ಪ್ರಕಾರ ಸೈಬರ್‌ಟ್ರಕ್ ಒಂದೇ ಚಾರ್ಜ್‌ನಲ್ಲಿ 500 ಮೈಲಿಗಳವರೆಗೆ ಸಾಗಬಲ್ಲದು. ಟೆಸ್ಲಾ ಸೈಬರ್‌ಟ್ರಕ್ ಅನ್ನು ಲೆವೆಲ್ 1 ಗೃಹಬಳಕೆಯ ಔಟ್‌ಲೆಟ್‌ಗಳಿಂದ ಲೆವೆಲ್ 3 ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳವರೆಗೆ ಬಹು ಮೂಲಗಳಿಂದ ಚಾರ್ಜ್ ಮಾಡಬಹುದು.
ಇದನ್ನೂ ಓದಿ : iPhoneನ 5ನೇ ಅತಿದೊಡ್ಡ ಮಾರುಕಟ್ಟೆ ಭಾರತ: ಶೇ 68ರಷ್ಟು ಮಾರಾಟ ವೃದ್ಧಿ