ನವದೆಹಲಿ: ಟೆಕ್ ದೈತ್ಯ ಕಂಪನಿಗಳಲ್ಲಿ ಉದ್ಯೋಗ ಕಡಿತ ಮುಂದುವರೆದಿದ್ದು, ಅನೇಕರಿಗೆ ಹೊಸ ವರ್ಷ ಕಹಿ ಅನುಭವ ನೀಡಿದೆ. ವರ್ಷ ಆರಂಭವಾದ 15 ದಿನದಲ್ಲಿ 91 ಕಂಪನಿಯ 24,000 ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಬೇಡಿಕೆ ಕುಸಿತ, ಜಾಗತಿಕ ಹಣದುಬ್ಬರ, ಬೆಳವಣಿಗೆ ದರ ನಿರ್ವಹಣೆ ಹಿನ್ನಲೆ ಈ ಉದ್ಯೋಗ ಕಡಿತ ಅನುವಾರ್ಯವಾಗಿದೆ ಎಂಬ ಉತ್ತರಗಳನ್ನು ಈ ಟೆಕ್ ಸಂಸ್ಥೆಗಳು ನೀಡಿದೆ. ಈ ಉದ್ಯೋಗ ಕಡಿತ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 2023ರಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ದಿನವೊಂದಕ್ಕೆ 1600 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಎಷ್ಟು ಕಂಪನಿಗಳು ಮತ್ತು ಯಾವ ಕಂಪನಿಗಳು ಈ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಮಾಹಿತಿ ಇಲ್ಲಿದೆ.
ಅಲ್ಫಾಬೆಟ್ : ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಜಾಗತಿಕವಾಗಿ ತನ್ನ ಸಂಸ್ಥೆಯ 12000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಸಂಸ್ಥೆಯ ಒಟ್ಟಾರೆ ಕಾರ್ಯ ಸಿಬ್ಬಂದಿಯಲ್ಲಿ ಶೇ 6ರಷ್ಟನ್ನು ಕಡಿತ ಮಾಡಲಾಗಿದೆ. ಇನ್ನು ಕಂಪನಿಯಿಂದ ತೆಗೆದು ಹಾಕಿರುವ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ಹುಡುಕುವುದು. ಸಂಸ್ಥೆಯ 60 ದಿನಗಳ ನೋಟಿಸ್ ಪಿರಿಯಡ್ ಅವಧಿ ಮೊತ್ತವನ್ನು ನೀಡುವುದು ಸೇರಿದಂತೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದಾರೆ.
ಮೈಕ್ರೋಸಾಫ್ಟ್ : ಜಗತ್ತಿನ ನಂಬರ್ ಒನ್ ಸಾಫ್ಟ್ವೇರ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ 2023ರಲ್ಲಿ 11,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿದೆ. ಇದು ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಶೇ 5ರಷ್ಟಾಗಿದೆ. ಕಳೆದ ವರ್ಷ ಕೂಡ ಸಂಸ್ಥೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳ ವಜಾಗೊಳಿಸಿತ್ತು. ಸಂಸ್ಥೆಯ ಒಂದೂವರೆ ಲಕ್ಷ ಜನರನ್ನು ಕೆಲಸದಿಂದ ವಜಾ ಮಾಡುವ ಸಾಧ್ಯತೆ ಇದೆ
ಅಮೆಜಾನ್ : ಅಮೆಜಾನ್ ಕೂಡ ಜಾಗತಿಕವಾಗಿ 18,000 ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. ಇದರಲ್ಲಿ 1000 ಮಂದಿ ಭಾರತದಲ್ಲಿ ಕಳೆದುಕೊಳ್ಳಲಿದ್ದಾರೆ. ಐದು ತಿಂಗಳ ವೇತನವನ್ನು ಮುಖಂಡವಾಗಿ ಪಾವತಿಸುವ ಮೂಲಕ ಉದ್ಯೋಗಿಗಳಿಗೆ ಇಮೇಲ್ ಸಂದೇಶ ಕಳುಹಿಸಿ ವಜಾ ಮಾಡಲಾಗಿದೆ. ಇದಕ್ಕೆ ಮೊದಲ ಅಂದರೆ, 2022ರ ನವೆಂಬರ್ನಲ್ಲಿ ಸಂಸ್ಥೆ 10 ಸಾವಿರ ಉದ್ಯೋಗ ಕಡಿತ ಮಾಡಿತ್ತು. ಇನ್ನು ಸೆಪ್ಟೆಂಬರ್ನಲ್ಲಿ 15 ಲಕ್ಷ ಉದ್ಯೋಗಿಗಳು ಹೊರಗೆ ಹೋಗಿದ್ದರು. ಅಮೆಜಾನ್ನಲ್ಲಿ 1.5 ಮಿಲಿಯನ್ ಉದ್ಯೋಗಿಗಳಿದ್ದಾರೆ.
ಮೆಟಾ : ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ ಕೂಡ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತ ನಡೆಸಿದೆ. ಸಂಸ್ಥೆ 11000 ಉದ್ಯೋಗಿಗಳನ್ನು ವಜಾ ಮಾಡಿದೆ. ಒಟ್ಟಾರೆ ಮೆಟಾದಲ್ಲಿ 87.000 ಮಂದಿ ಉದ್ಯೋಗ ನಿರ್ವಹಿಸುತ್ತಿದ್ದು, ಇದರಲ್ಲಿ ಶೇ 13ರಷ್ಟು ಉದ್ಯೋಗಿಗಳು ಕೆಲಸ ಕಳೆದಯೊಂಡಿದ್ದಾರೆ. ಕೆಲಸದಿಂದ ಹೊರ ಹೋದ ಉದ್ಯೋಗಿಗಳು ನಾಲ್ಕು ತಿಂಗಳ ವೇತನ ಪಡೆಯಲಿದ್ದಾರೆ. 2014ರ ಬಳಿಕ ಫೇಸ್ಬುಕ್ನಲ್ಲಿ ನಡೆದ ಅತಿ ದೊಡ್ಡ ಉದ್ಯೋಗ ಕಡಿತ ಇದಾಗಿದೆ
ಸೊಫೋಸ್ : ಸೈಬರ್ ಭದ್ರತಾ ಸಂಸ್ಥೆಯಾಗಿರುವ ಸೊಫೋಸ್ ಭಾರತ ಸೇರಿದಂತೆ ಜಾಗತಿಕವಾಗಿ 450 ಉದ್ಯೋಗಿಗಳನ್ನು ಕೆಲಸದಿಂದ ಹೊರ ಹಾಕಿದೆ. ಸಂಸ್ಥೆಯ ಶೇ 10 ಭಾಗದ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಆದಾಗ್ಯೂ ಸಂಸ್ಥೆ ಎಷ್ಟು ಮಂದಿಯನ್ನು ವಜಾ ಮಾಡಿದೆ ಎಂಬುದರ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲ.
ಇನ್ನು, ಇತರೆ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡವರ ಅಂಕಿ ಸಂಖ್ಯೆ ಹೀಗಿದೆ
ಸಂಸ್ಥೆ | ಸಂಖ್ಯೆ |
ಸೇಲ್ಸ್ಫೋರ್ಸ್ | 8,000 |
ಎಚ್ಪಿ | 6,000 |
ಸಿಸ್ಕೊ | ಶೇ 5ರಷ್ಟು |
ಚಿಮೆ | 160 |
ಕಾಯಿನ್ಬೆಸ್ | 60 |
ವಿಮಿಯೊ | ಶೇ 11ರಷ್ಟು |
ಸ್ಟ್ರೈಪ್ | ಶೇ 14ರಷ್ಟು |
ಕರ್ಕೆನ್ | ಶೇ 30ರಷ್ಟು |
ಇದನ್ನೂ ಓದಿ : ಗೂಗಲ್ ಮೀಟ್ ಹೊಸ ಅಪ್ಡೇಟ್: ಸ್ಪೀಕರ್ ನೋಟ್ಸ್ ಕಾಣಿಸುವ ಫೀಚರ್ ಅಳವಡಿಕೆ