ETV Bharat / science-and-technology

51 ಸ್ಟಾರ್​​​​​ಲಿಂಕ್​ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿದ ಸ್ಪೇಸ್​​​​​​ಎಕ್ಸ್​​!

author img

By

Published : Sep 5, 2022, 3:41 PM IST

ಇತ್ತೀಚೆಗೆ ಉಡ್ಡಯನ ಮಾಡಲಾಗಿರುವ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಅದರ ಕಕ್ಷೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಈ ವರ್ಷ ಇಲ್ಲಿಯವರೆಗೆ ಸ್ಪೇಸ್‌ಎಕ್ಸ್‌ನ 40 ಕಾರ್ಯಾಚರಣೆಗಳನ್ನು ಕೈಗೊಂಡಿದ್ದು, ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

SpaceX launches 51 more Starlink satellites in its 40th mission
51 ಸ್ಟಾರ್​​​​​ಲಿಂಕ್​ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿದ ಸ್ಪೇಸ್​​​​​​ಎಕ್ಸ್​​

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಎಲೋನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಲ್ಲಿ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ. ಈ ವರ್ಷ ಇದುವರೆಗೆ 40 ಮಿಷನ್​ಗಳನ್ನು ಪೂರ್ಣಗೊಳಿಸಿ ಬಾಹ್ಯಾಕಾಶದಲ್ಲಿ ಪ್ರಭುತ್ಬ ಮೆರೆದಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಫಾಲ್ಕನ್ 9 ರಾಕೆಟ್ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಇತ್ತೀಚೆಗೆ ಉಡ್ಡಯನ ಮಾಡಲಾಗಿರುವ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಅದರ ಕಕ್ಷೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಈ ವರ್ಷ ಇಲ್ಲಿಯವರೆಗೆ ಸ್ಪೇಸ್‌ಎಕ್ಸ್‌ನ 40 ಕಾರ್ಯಾಚರಣೆಗಳನ್ನು ಕೈಗೊಂಡಿದ್ದು, ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ಭೂಮಿಯಿಂದ 310 ಕಿಲೋಮೀಟರ್ ಎತ್ತರದಲ್ಲಿ ಶೆರ್ಪಾ-ಎಲ್‌ಟಿಸಿಗೆ ನಿಯೋಜನೆ ಗೊಳಿಸಲಾಗುತ್ತದೆ.ನಂತರ, ಶೆರ್ಪಾ-ಎಲ್‌ಟಿಸಿ ತನ್ನ ಗೊತ್ತುಪಡಿಸಿದ 1,000-ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಿಸಲು ಆನ್‌ಬೋರ್ಡ್ ಹೈ-ಥ್ರಸ್ಟ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಬಳಸುತ್ತದೆ. ಅಲ್ಲಿ ಅದನ್ನು 2 ವರ್ಷಗಳವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ವಾರ, ಸ್ಪೇಸ್‌ಎಕ್ಸ್ ಪ್ರತಿ ಐದು ದಿನಗಳಿಗೊಮ್ಮೆಯಂತೆ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. 2023 ರಲ್ಲಿ 100 ಉಪಗ್ರಹಗಳನ್ನು ಉಡ್ಡಯನ ಮಾಡಲು ಸ್ಪೇಸ್​ ಎಕ್ಸ್​​​​ ಉದ್ದೇಶಿಸಿದೆ ಎಂದು ಎಲೋನ್​ ಮಸ್ಕ್​​ ತಿಳಿಸಿದ್ದಾರೆ.

SpaceX ಈಗಾಗಲೇ ಅತಿ ಹೆಚ್ಚು ಉಪ್ರಗ್ರಹಗಳನ್ನು ಉಡ್ಡಯನ ಮಾಡಿ ದಾಖಲೆ ಬರೆದಿದೆ. ಅದು ವಾರ್ಷಿಕ 31 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದಿದೆ. ಮತ್ತು ಈಗ ಆ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಕಳೆದ ತಿಂಗಳ ಕೊನೆಯಲ್ಲಿ, ಸ್ಪೇಸ್‌ಎಕ್ಸ್ ತನ್ನ 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ:ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್​​ ಉಡ್ಡಯನ ಮುಂದೂಡಿಕೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.