ETV Bharat / science-and-technology

5000 ಉಪಗ್ರಹ ಹಾರಿಸಿದ SpaceX: ಈಗ ಭಾರತದತ್ತ Starlink ಚಿತ್ತ - SpaceX Launched 5000 Satellites

ಪ್ರಸ್ತುತ ಎಲೋನ್ ಮಸ್ಕ್ ಒಡೆತನದ ಸ್ಪೇಸ್​ ಎಕ್ಸ್​ ಕಂಪನಿಯು ಜಾಗತಿಕ ಉಪಗ್ರಹ ಉಡಾವಣಾ ವಹಿವಾಟಿನಲ್ಲಿ ಶೇ 60ರಷ್ಟು ಪಾಲು ಪಡೆದುಕೊಂಡಿದೆ.

Musk's SpaceX controls 60% share
Musk's SpaceX controls 60% share
author img

By

Published : Jul 17, 2023, 7:53 PM IST

ನವದೆಹಲಿ : ಎಲೋನ್ ಮಸ್ಕ್ ನೇತೃತ್ವದ SpaceX ಸದ್ಯ ಜಾಗತಿಕ ಉಪಗ್ರಹ ಉಡಾವಣಾ ವ್ಯವಹಾರದಲ್ಲಿ ಶೇ 60 ರಷ್ಟು ಪಾಲು ಪಡೆದುಕೊಂಡಿದೆ. ಏತನ್ಮಧ್ಯೆ ಕಡಿಮೆ ಕಕ್ಷೆಯ ಉಪಗ್ರಹಗಳ ಮೂಲಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳನ್ನು ಒದಗಿಸುವ ತಮ್ಮ ಸ್ಟಾರ್‌ಲಿಂಕ್ ಕಾರ್ಯಾಚರಣೆಯನ್ನು ಭಾರತಕ್ಕೆ ವಿಸ್ತರಿಸಲು ಮಸ್ಕ್ ಬಯಸುತ್ತಿದ್ದಾರೆ. ಈ ವರ್ಷ ಕಂಪನಿಯು ಈಗಾಗಲೇ ಜೂನ್‌ವರೆಗೆ 1,000 ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಪೇಸ್​ ಎಕ್ಸ್​ ಈಗ ವಿಶ್ವದಾದ್ಯಂತ ಉಡಾವಣೆಯಾದ ಶೇಕಡಾ 60 ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ ಎಂದು ಹಾರ್ವರ್ಡ್ ಸ್ಮಿತ್​ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳ ಭೌತಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಹೇಳಿದ್ದಾರೆ. ಸ್ಪೇಸ್‌ಎಕ್ಸ್ 2019 ರಿಂದ ಈವರೆಗೆ ಸುಮಾರು 5,000 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ ಮತ್ತು ಒಟ್ಟು 42,000 ಕಾರ್ಯಾಚರಣೆಗಳ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಒಂದು ಸ್ಪೇಸ್​ ಎಕ್ಸ್​ ರಾಕೆಟ್ ಒಂದೇ ಬಾರಿಗೆ 60 ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು.

ಕಳೆದ ತಿಂಗಳು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮಸ್ಕ್, ಸೌರಶಕ್ತಿ ವಲಯದಲ್ಲಿ ಹೂಡಿಕೆಗೆ ಭಾರತ ಉತ್ತಮ ದೇಶವಾಗಿದೆ ಎಂದು ಹೇಳಿದ್ದರು. “ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮವಾಗಿದೆ. ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ನಾವು ಆಶಿಸುತ್ತಿದ್ದೇವೆ. ನಾನು ಭಾರತದ ಭವಿಷ್ಯದ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚು ಭರವಸೆದಾಯಕ ದೇಶವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.

ಕಳಪೆ ಬ್ರಾಡ್‌ಬ್ಯಾಂಡ್ ಸಂಪರ್ಕವಿರುವ ದೇಶದ ದೂರದ ಹಳ್ಳಿಗಳಲ್ಲಿ ಸುಧಾರಿತ ಇಂಟರ್ನೆಟ್ ಸಂಪರ್ಕವು ಅಗಾಧ ಬದಲಾವಣೆಗಳನ್ನು ತರಬಲ್ಲದು ಎಂದು ಮಸ್ಕ್ ಹೇಳಿದ್ದರು. ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್ ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹ ಎಬಿಎ ಫಸ್ಟ್ ರನ್ನರ್ (ಎಎಫ್‌ಆರ್) ಅನ್ನು ಕಳೆದ ತಿಂಗಳು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೀಸಲಾದ ರೈಡ್‌ಶೇರ್ ಮಿಷನ್‌ನಲ್ಲಿರುವ ರಾಕೆಟ್ 72 ಬಾಹ್ಯಾಕಾಶ ನೌಕೆಗಳನ್ನು ಕೊಂಡೊಯ್ದಿದೆ. ಇದರಲ್ಲಿ ಕ್ಯೂಬ್‌ಸ್ಯಾಟ್‌ಗಳು, ಮೈಕ್ರೋಸ್ಯಾಟ್‌ಗಳು ಮತ್ತು ಇತರವುಗಳು ಸೇರಿವೆ. ಅವುಗಳಲ್ಲಿ ಒಂದು ಅಹಮದಾಬಾದ್ ಮೂಲದ ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್‌ನ 80 ಕೆಜಿ ಉಪಗ್ರಹ AFR ಕೂಡ ಇತ್ತು.

ಅಜಿಸ್ಟಾ ಬಿಎಸ್‌ಟಿ ಏರೋಸ್ಪೇಸ್ ಭಾರತದ ಅಜಿಸ್ಟಾ ಇಂಡಸ್ಟ್ರೀಸ್ ಪ್ರೈವೇಟ್‌ ಲಿಮಿಟೆಡ್ (70 ಪ್ರತಿಶತ ಪಾಲು) ಮತ್ತು ಬರ್ಲಿನ್ ಸ್ಪೇಸ್ ಟೆಕ್ನಾಲಜೀಸ್ GmbH (30 ಪ್ರತಿಶತ ಪಾಲು) ಗಳು ಆರಂಭಿಸಿದ ಇಂಡೋ-ಜರ್ಮನ್ ಉಪಗ್ರಹ ಉತ್ಪಾದನಾ ಜಂಟಿ ಉದ್ಯಮವಾಗಿದೆ. ಕಳೆದ ತಿಂಗಳು ಸ್ಪೇಸ್‌ ಎಕ್ಸ್ ಇಂಡೋನೇಷ್ಯಾದ ಹೊಸ ಸಂವಹನ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ನಿಯೋಜಿಸಿದೆ.

ಇದನ್ನೂ ಓದಿ : ಮೆಟಾದ ಚಾಟ್​ಬಾಟ್​ CM3leon; ಪಠ್ಯ, ಚಿತ್ರ ವಿನ್ಯಾಸಕ್ಕೆ ಬಂದಿದೆ 'ಊಸರವಳ್ಳಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.