ನವದೆಹಲಿ: ನೋಕಿಯೋ ಪೇಟೆಂಟ್ ಉಲ್ಲಂಘನೆ ಪ್ರಕರಣದಲ್ಲಿ ಶೇ 23 ರಷ್ಟು ರಾಯಲ್ಟಿ ಠೇವಣಿ ಮಾಡಲು ನಿರ್ದೇಶಿಸಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಚೀನಾ ಸ್ಮಾರ್ಟ್ ಫೋನ್ ಒಪ್ಪೋ (oppo) ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕಳೆದ ತಿಂಗಳು ಜುಲೈನಲ್ಲಿ ದೆಹಲಿ ಹೈ ಕೋರ್ಟ್ನ ವಿಭಾಗೀಯ ಪೀಠ, ನೋಕಿಯಾ ಪರ ಆದೇಶ ನೀಡಿತ್ತು.
ಚೀನಾದ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ಒಪ್ಪೋ ನೋಕಿಯೋ ತಂತ್ರಜ್ಞಾನವನ್ನು ಅದರ ಪರವಾನಗಿ ಇಲ್ಲದೇ ಬಳಕೆ ಮಾಡುತ್ತಿದೆ ಎಂಬುದು ಪತ್ತೆಯಾಗಿತ್ತು. ಭಾರತದಲ್ಲಿ ಒಪ್ಪೋ ಮಾರಾಟ ವಹಿವಾಟಿನ ಹಿನ್ನಲೆ ಜಾಗತಿಕ ಮಾರಾಟದಲ್ಲಿ ಶೇ 23ರಷ್ಟು ದಂಡವನ್ನು ವಿಧಿಸುವಂತೆ ದೆಹಲಿ ಹೈ ಕೋರ್ಟ್ ನಿರ್ದೇಶನ ನೀಡಿತ್ತು.
ಸುಪ್ರೀಂ ಆದೇಶ ಸ್ವಾಗತಿಸಿದ ನೋಕಿಯಾ: ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಾತನಾಡಿರುವ ನೋಕಿಯಾ ತಂತ್ರಜ್ಞಾನದ ವಕ್ತಾರರು, ನಾವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಒಪ್ಪೊ ಕಳೆದೆರಡು ವರ್ಷಗಳಿಂದ ಯಾವುದೇ ರಾಯಲ್ಟಿಯನ್ನು ನೀಡದೇ ಮತ್ತು ನೋಕಿಯಾದ ಜೊತೆಗಿನ ಲೈಸೆನ್ಸ್ ಅನ್ನು ಮರು ನವೀಕರಿಸದೇ ನಮ್ಮ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ವಿಷಯವನ್ನು ಸಂಸ್ಥೆ ಸೌಹರ್ದಯುತವಾಗಿ ಪರಿಹರಿಸುತ್ತಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಒಪ್ಪೊ ಈ ರೀತಿ ಅಕ್ರಮವಾಗಿ ನೋಕಿಯಾ ಪೆಟೆಂಟ್ ಉಲ್ಲಂಘನೆ ಮಾಡುತ್ತಿದ್ದು, ಈ ಸಂಬಂಧ ಭಾರತ, ಜರ್ಮನಿ, ಅಮೆರಿಕ, ನೆದರಲ್ಯಾಂಡ್ ಮತ್ತು ಬ್ರೆಸಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದ್ದು, ಈ ಎಲ್ಲಾ ನ್ಯಾಯಾಲಯದಲ್ಲಿ ನೋಕಿಯಾ ಪರವಾಗಿ ತೀರ್ಪು ಬಂದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೋಕಿಯಾ, ಒಪ್ಪೋಗೆ ನಿಯಮ ಬದ್ಧವಾಗಿರುವಂತೆ ನಾವು ಉತ್ತೇಜಿಸುತ್ತೇವೆ. ನಮ್ಮ ಪ್ರತಿಸ್ಪರ್ಧಿಯಾಗಿ ಕಾರ್ಯ ನಿರ್ವಹಿಸುವ ಬದಲಿ ನ್ಯಾಯಯತ ನಿಯಮದ ಮೇಲೆ ಪರವಾನಗಿಯನ್ನು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದೆ.
ಮೂರು ವರ್ಷದಿಂದ ನಿಯಮ ಉಲ್ಲಂಘನೆ: 2018ರಿಂದ ಒಪ್ಪೊ- ನೋಕಿಯಾ ಲೈಸೆನ್ಸ್ ಮುಕ್ತಾಯವಾಗಿದೆ. ಆದರೂ, ಅದು ಮೂರು ವರ್ಷಗಳ ಕಾಲ ಫಿನಿಷ್ ಟೆಲಿಕಾಂ ಗೇರ್ ಕಂಪನಿ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ವರದಿ ಪ್ರಕಾರ ನೋಕಿಯಾ ಒಪ್ಪಂದ ಅವಧಿ ಮುಗಿದ ಬಳಿಕ ಒಪ್ಪೋ ಒಂದು ನಯಾ ಪೈಸೆ ರಾಯಲ್ಟಿಯನ್ನು ನೀಡದೇ ಭಾರತದಲ್ಲಿ 77 ಮಿಲಿಯನ್ ಹ್ಯಾಂಡ್ಸೆಟ್ ಮಾರಾಟ ಮಾಡಿದೆ.
ಕಳೆದ ಜುಲೈ 2022ರಲ್ಲಿ ಜರ್ಮನ್ ನ್ಯಾಯಾಲಯ ಕೂಡ 4ಜಿ/5ಜಿ ಪೆಟೆಂಟ್ ಕುರಿತು ನೋಕಿಯಾ ಒಪ್ಪೊ ಜೊತೆಗಿನ ವ್ಯಾಜ್ಯದಲ್ಲಿ ನೋಕಿಯಾ ಪರವಾಗಿ ತೀರ್ಪು ನೀಡಿತ್ತು. ಜಿಸ್ಮೊಚೀನಾ ಪ್ರಕಾರ, ಈ ಮೊಕದ್ದಮೆಯಲ್ಲಿ ಒಪ್ಪೋ 9 ಸ್ಟಾಂಡರ್ಡ್ ಎಸೆನ್ಷಿಯಲ್ ಪೆಟೆಂಟ್ (ಎಸ್ಇಪಿ) ಮತ್ತು ಐದು ಅಳವಡಿಸಬಹುದಾದ ಪೇಟೆಂಟ್ ನಿಯಮವನ್ನು ಉಲ್ಲಂಘಿಸಿತು. ಭಾರತದಲ್ಲೂ ಕೂಡ ಟೆಲಿಕಾಂ ಮಾನದಂಡಗಳಾ ಸ್ಟಾಂಡರ್ಡ್ ಎಸೆನ್ಷಿಯಲ್ ಪೆಟೆಂಟ್ (ಎಸ್ಇಪಿ) ಸೇರಿದಂತೆ ಮೂರು ಲೈಸೆನ್ಸ್ ಅನ್ನು ಆಧಾರಿಸಿ, ನೋಕಿಯಾ ಒಪ್ಪೊ ಮೇಲೆ ಪ್ರಕರಣ ಹೂಡಿತ್ತು.
ಇದನ್ನೂ ಓದಿ: ಕೈಗೆಟುಕುವ ದರದ Lava 'Yuva-2' ಬಿಡುಗಡೆ; ಬೆಲೆ 6,999ರಿಂದ ಆರಂಭ