ETV Bharat / science-and-technology

2022ರಲ್ಲಿ ಐದು ಬಾಹ್ಯಾಕಾಶ ನೌಕೆಗಳ ಉಡಾವಣೆ ಮಾಡಲು ರಷ್ಯಾ BIG PLAN

ಈ ವರ್ಷ ನಾಲ್ಕು ಗಗನ ನೌಕೆಗಳನ್ನು ಉಡಾವಣೆ ಮಾಡಿರುವ ರಷ್ಯಾ, ಇನ್ನೂ ನಾಲ್ಕು ಗಗನನೌಕೆಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಉಡಾವಣೆ ಮಾಡಲಿದೆ. ಅದಲ್ಲದೇ ಮುಂದಿನ ವರ್ಷ ಐದು ನೌಕೆಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯೋಜನೆ ರೂಪಿಸುತ್ತಿದೆ.

Russia to launch 5 spacecraft to ISS in 2022
2022 ಐದು ಬಾಹ್ಯಾಕಾಶ ನೌಕೆಗಳ ಉಡಾವಣೆ ಮಾಡಲು ರಷ್ಯಾ ಯೋಜನೆ
author img

By

Published : Sep 29, 2021, 10:45 AM IST

ಮಾಸ್ಕೋ(ರಷ್ಯಾ) : ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಎರಡು ಸೋಯುಜ್ ಮಾನವಸಹಿತ ಬಾಹ್ಯಾಕಾಶ ನೌಕೆಗಳು ಮತ್ತು ಮೂರು ಪ್ರೊಗ್ರೆಸ್ ಕಾರ್ಗೋ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲು ರಷ್ಯಾ ಯೋಜನೆ ರೂಪಿಸುತ್ತಿದೆ.

2022ರ ಮಾರ್ಚ್ 18ರಲ್ಲಿ ಸೋಯುಜ್ ಎಂಎಸ್ -21 ಗಗನನೌಕೆಯಲ್ಲಿ ರಷ್ಯಾದ ಗಗನಯಾತ್ರಿಗಳಾದ ಒಲೆಗ್ ಆರ್ಟೆಮಿಯೆವ್, ಡೆನಿಸ್ ಮ್ಯಾಟ್ವೀವ್ ಮತ್ತು ಸೆರ್ಗೆ ಕೊರ್ಸಕೋವ್ ಅವರನ್ನು ಕಳುಹಿಸಲಾಗುತ್ತದೆ. ಸೆಪ್ಟೆಂಬರ್ 21ರಂದು ಸೋಯುಜ್ ಎಂಎಸ್ -22 ಬಾಹ್ಯಾಕಾಶ ನೌಕೆ ಮೂಲಕ ಸೆರ್ಗೆ ಪ್ರೊಕೊಪೀವ್, ಅನ್ನಾ ಕಿಕಿನಾ ಮತ್ತು ಡಿಮಿಟ್ರಿ ಪೆಟೆಲಿನ್ ಅವರನ್ನು ಕಳುಹಿಸಲಾಗುತ್ತದೆ.

ಇವೆಲ್ಲವೂ ಮಾನವ ಸಹಿತ ಗಗನನೌಕೆಗಳಾಗಿದ್ದು, ಇದರ ಜೊತೆಗೆ ಪ್ರೊಗ್ರೆಸ್ ಕಾರ್ಗೋ ನೌಕೆಗಳಾದ ಪ್ರೋಗ್ರೆಸ್ MS-19 (ಫೆಬ್ರವರಿ 15), ಪ್ರಗತಿ MS-20 (ಜೂನ್ 3) ಮತ್ತು ಪ್ರೋಗ್ರೆಸ್ MS-21 (ಅಕ್ಟೋಬರ್ 26) ರಂದು ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷ ರಷ್ಯಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ಕು ನೌಕೆಗಳನ್ನು ಕಳಿಸಿದೆ. ಇವುಗಳಲ್ಲಿ ಎರಡು ಪ್ರೊಗ್ರೆಸ್ ಕಾರ್ಗೋ ಆಗಿದ್ದು, ಒಂದು ಸೊಯುಜ್ ಬಾಹ್ಯಾಕಾಶ ನೌಕೆ ಮತ್ತು ನೌಕಾ ಮಾಡ್ಯೂಲ್ (Nauka module) ಆಗಿದೆ. ಈ ವರ್ಷದ ಅಂತ್ಯದ ವೇಳೆಗೆ ಇನ್ನೂ ನಾಲ್ಕು ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಲು ರಷ್ಯಾ ಈಗಾಗಲೇ ಸಜ್ಜಾಗಿದೆ.

ಇದನ್ನೂ ಓದಿ: SpaceX : ಬಾಹ್ಯಾಕಾಶ ಪ್ರವಾಸ ಮುಗಿಸಿ ಸುರಕ್ಷಿತವಾಗಿ ಹಿಂದಿರುಗಿದ ನಾಲ್ವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.