ETV Bharat / science-and-technology

ಚಂದ್ರನ ಮೇಲೆ ಅಪ್ಪಳಿಸಿ ಕುಳಿ ಸೃಷ್ಟಿಸಿತಾ ಚೀನಾ ರಾಕೆಟ್​ನ ಅವಶೇಷ? - ಚೀನಾದ ಚಾಂಗ್​ ಇ 5-ಟಿ1 ಮಿಷನ್​

ಚಂದ್ರನ ಮೇಲೆ ಸಂಶೋಧನೆಗಾಗಿ ಚೀನಾ ಕಳುಹಿಸಿದ್ದ ಲಾಂಗ್ ಮಾರ್ಚ್-3ಸಿ ರಾಕೆಟ್​ನ ಅವಶೇಷಗಳು ಚಂದ್ರನ ಮೇಲೆ ಅಪ್ಪಳಿಸಿ, ಕುಳಿ ಉಂಟುಮಾಡಿವೆ ಎಂದು ವರದಿಯಾಗಿದ್ದು, ಇದನ್ನು ಚೀನಾ ವಿದೇಶಾಂಗ ಇಲಾಖೆ ನಿರಾಕರಿಸಿದೆ.

Rogue 3-tonne piece rocket debris collides with Moon, creates crater
ಚಂದ್ರನ ಮೇಲೆ ಅಪ್ಪಳಿಸಿ ಕುಳಿ ಸೃಷ್ಟಿಸಿದ ಚೀನಾದ ರಾಕೆಟ್​ನ ಅವಶೇಷ
author img

By

Published : Mar 5, 2022, 6:17 PM IST

ವಾಷಿಂಗ್ಟನ್(ಅಮೆರಿಕ): ಏಳು ವರ್ಷಗಳ ಸತತ ಕಾರ್ಯಾಚರಣೆಯ ನಂತರ ಮೂರು ಟನ್ ತೂಕದ ಚೀನಾದ ರಾಕೆಟ್​ನ ಅವಶೇಷಗಳು ಚಂದ್ರನ ಮೇಲೆ ಅಪ್ಪಳಿಸಿ, 65 ಅಡಿ ಅಗಲದ ಕುಳಿಯನ್ನು ಸೃಷ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಜ್ಞರ ಪ್ರಕಾರ, ಶುಕ್ರವಾರದಂದು ಬೆಳಗ್ಗೆ 7.25ರ ವೇಳೆಗೆ ಚಂದ್ರನಲ್ಲಿ ರಾಕೆಟ್ ತುಣುಕು ಅಪ್ಪಳಿಸಿದೆ ಎಂದು Space.com ವರದಿ ಮಾಡಿದೆ. ಆದರೆ ನಾಸಾದ ಲೂನಾರ್​​ ರಿಕಾನೈಸೆನ್ಸ್ ಆರ್ಬಿಟರ್ ಈ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

ರಾಕೆಟ್​ನಿಂದ ಉಂಟಾಗಿರುವ ಕುಳಿಯನ್ನು ಕಂಡುಹಿಡಿಯುವಲ್ಲಿ ಆಸಕ್ತಿ ಹೊಂದಿದ್ದೇವೆ. ಮುಂಬರುವ ದಿನಗಳಲ್ಲಿ ಆ ಕುಳಿಯನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತೇವೆ. ಒಂದು ವಾರ ಅಥವಾ ತಿಂಗಳಲ್ಲಿ ಕುಳಿಯನ್ನು ಪತ್ತೆ ಹಚ್ಚಬಹುದು ಎಂದು ನಂಬಿದ್ದೇವೆ ಎಂದು ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಮಿಷನ್‌ನ ವಿಜ್ಞಾನಿಯಾದ ಜಾನ್ ಕೆಲ್ಲರ್ ಹೇಳಿದ್ದಾರೆಂದು ದಿ ವರ್ಜ್​ ವರದಿ ಮಾಡಿದೆ.

ರಾಕೆಟ್ ಅಪ್ಪಳಿಸಿದಾಗ ನಮ್ಮ ಮಿಷನ್ ಸ್ಥಳದ ಸಮೀಪದಲ್ಲಿ ಇರಲಿಲ್ಲ. ಆದ್ದರಿಂದ ನಾವು ಅದನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಿಲ್ಲ. ಮಿಷನ್​ನ ವಿವಿಧ ಕ್ಯಾಮೆರಾಗಳು ಕುಳಿಯನ್ನು ಪತ್ತೆಹಚ್ಚಲು ಸಾಕಷ್ಟು ರೆಸಲ್ಯೂಶನ್ ಹೊಂದಿವೆ. ಆದರೆ ಈಗಾಗಲೇ ಸಾಕಷ್ಟು ಕುಳಿಗಳನ್ನು ಚಂದ್ರ ಹೊಂದಿರುವ ಕಾರಣದ ಅದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ನಿಷೇಧಿತ ಅಸ್ತ್ರ ಬಳಸುತ್ತಿದೆಯೇ ರಷ್ಯಾ? ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರ ಎಂದರೇನು?

ರಾಕೆಟ್​ನ ಅವಶೇಷಗಳು ಚಂದ್ರನಲ್ಲಿ ಅಪ್ಪಳಿಸಿವೆ ಎಂದು ಮೊದಲ ಬಾರಿಗೆ ಖಗೋಳ ಶಾಸ್ತ್ರಜ್ಞರಾದ ಬಿಲ್​ ಗ್ರೇ ವರದಿ ಮಾಡಿದ್ದರು. ತನ್ನ ಬ್ಲಾಗ್​ನಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ರಾಕೆಟ್​ ಚಂದ್ರನ ಮೇಲೆ ಅಪ್ಪಳಿಸಿದೆ ಎಂದು ಗ್ರೇ ಮೊದಲು ಹೇಳಿಕೊಂಡಿದ್ದರು.

ಆದರೆ ನಂತರ ಈ ರಾಕೆಟ್ ಚೀನಾಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದು, ಚೀನಾದ ಚಾಂಗ್​ ಇ 5-ಟಿ1 ಮಿಷನ್​ನಿಂದ ಚಂದ್ರನ ಮೇಲೆ ಸಂಶೋಧನೆಗಾಗಿ ಕಳುಹಿಸಲಾದ ಲಾಂಗ್ ಮಾರ್ಚ್ 3ಸಿ ರಾಕೆಟ್​ ಅವಶೇಷಗಳು ಚಂದ್ರನ ಮೇಲೆ ಅಪ್ಪಳಿಸಿವೆ ಎಂದು ಬಿಲ್ ಗ್ರೇ ಹೇಳಿದ್ದಾರೆ.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಂದ್ರನ ಮೇಲೆ ತಮ್ಮ ರಾಕೆಟ್​ನ ಅವಶೇಷ ಅಪ್ಪಳಿಸಿರುವುದು ಸುಳ್ಳು ಎಂದಿದೆ ಎಂದು ಸ್ಪೇಸ್ ನ್ಯೂಸ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.