ETV Bharat / science-and-technology

ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಬ್ರಾಂಕೈಟಿಸ್ ಕುರಿತು ಮಹತ್ವದ ಸಂಶೋಧನೆ.. ಏನು ಹೇಳುತ್ತೆ ವರದಿ! - a paper published today in the journal BMJ Open Respiratory Research

ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಅಲರ್ಜಿ ಮತ್ತು ಶ್ವಾಸಕೋಶ ಆರೋಗ್ಯ ಘಟಕ ಬಾಲ್ಯದಲ್ಲಿ ಬರುವ ಬ್ರಾಂಕೈಟಿಸ್ ಕಾಯಿಲೆ ಬಗ್ಗೆ ಮಹತ್ವದ ಅಧ್ಯಯನ ನಡೆಸಿದೆ. ಮಧ್ಯಮ ವಯಸ್ಸಿನಲ್ಲಿ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಿ, ನಂತರದ ಜೀವನದಲ್ಲಿ ಶ್ವಾಸಕೋಶದ ತೊಂದರೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಸಂಶೋಧನೆಯಲ್ಲಿ ಪ್ರಸ್ತಾಪಿಸಲಾಗಿದೆ.

bronchitis
bronchitis
author img

By

Published : Jun 22, 2022, 11:27 AM IST

Updated : Jun 22, 2022, 1:23 PM IST

ನವದೆಹಲಿ: ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಅಲರ್ಜಿ ಮತ್ತು ಶ್ವಾಸಕೋಶ ಆರೋಗ್ಯ ಘಟಕವು ಮಹತ್ವ ಸಂಶೋಧನೆಯೊಂದನ್ನು ನಡೆಸಿದೆ. ಬಾಲ್ಯದಲ್ಲಿ ಬರುವಂತಹ ಬ್ರಾಂಕೈಟಿಸ್ ಕಾಯಿಲೆ, ಮಧ್ಯಮ ವಯಸ್ಸಿನಲ್ಲಿ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಿ, ನಂತರದ ಜೀವನದಲ್ಲಿ ಶ್ವಾಸಕೋಶದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಸಂಶೋಧನೆ ಕಂಡುಕೊಂಡಿದೆ.

ದಿ ಬಿಎಂಜೆ ಜರ್ನಲ್​ನಲ್ಲಿ ಈ ಬಗ್ಗೆ ವಿವರವಾದ ವರದಿಯೊಂದನ್ನು ಪ್ರಕಟಿಸಲಾಗಿದ್ದು, ಮಕ್ಕಳು 53ನೇ ವಯಸ್ಸಿಗೆ ತಲುಪುವ ಹೊತ್ತಿಗೆ ಅಸ್ಥಮಾ, ನ್ಯುಮೋನಿಯಾ, ದೀರ್ಘಕಾಲದ ಬ್ರಾಂಕೈಟಿಸ್ ಅಥವಾ ದೀರ್ಘಕಾಲದ ಪ್ರತಿರೋಧಕದಂತಹ ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಬಿಎಂಜೆ ಓಪನ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಲೇಖನ ಪ್ರಕಟಗೊಂಡಿದ್ದು, ಡಾ ಜೆನ್ನಿಫರ್ ಪೆರೆಟ್ ನೇತೃತ್ವದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ. ಪ್ರಪಂಚದ ಅತ್ಯಂತ ಹಳೆಯ ಟ್ಯಾಸ್ಮೆನಿಯನ್ ಲಾಂಗಿಟ್ಯೂಡಿನಲ್ ಆರೋಗ್ಯ ಸಮೀಕ್ಷೆಗಳಿಂದ ಹುಟ್ಟಿಕೊಂಡಿರುವಂತಹ ಸಂಶೋಧನೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

1961 ರಲ್ಲಿ ಟ್ಯಾಸ್ಮೆನಿಯಾದಲ್ಲಿ ಜನಿಸಿದ 8,583 ಮಕ್ಕಳನ್ನು ಆಗ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಮೀಕ್ಷೆಯ ಆಧಾರದ ಮೇಲೆ ಈ ಸಂಶೋಧನೆಯನ್ನು ಮುಂದುವರಿಸಲಾಗಿತ್ತು. ಇದು ವಯಸ್ಕರ ಶ್ವಾಸಕೋಶದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು, ಬಾಲ್ಯದಲ್ಲಿ ಬ್ರಾಂಕೈಟಿಸ್ ಗೆ ತುತ್ತಾಗುವ ಮಕ್ಕಳಲ್ಲಿ ಕಂಡು ಬರುವ ರೋಗದ ಲಕ್ಷಣಗಳನ್ನು ಪರೀಕ್ಷಿಸಲು ಮಾಡಿದಂತಹ ಮೊದಲ ದೀರ್ಘಾವಧಿಯ ಸಂಶೋಧನೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೀರ್ಘಕಾಲದವರೆಗೆ ಬ್ರಾಂಕೈಟಿಸ್ ಸಮಸ್ಯೆಯಿಂದ ಬಳಲುವ ಮಕ್ಕಳು ಎರಡರಿಂದ ಐದು ವರ್ಷಗಳ ನಂತರ ಗಂಭೀರವಾದ ಶ್ವಾಸಕೋಶ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋದನೆಯಲ್ಲಿ ಕಂಡುಕೊಳ್ಳಲಾಗಿದೆ.

ಇದನ್ನೂ ಓದಿ: ಐದನೇ ದಿನವೂ ರಾಹುಲ್​ ವಿಚಾರಣೆ.. ಇಂದು ಯಾವುದೇ ಸಮನ್ಸ್​ ನೀಡದ ಇಡಿ

Last Updated : Jun 22, 2022, 1:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.