ETV Bharat / science-and-technology

Redmi 13C ಬಜೆಟ್ ಸ್ಮಾರ್ಟ್​ಫೋನ್ ಬಿಡುಗಡೆ; ಬೆಲೆ ರೂ. 7,999 ರಿಂದ ಆರಂಭ - 13C budget smartphone

ರೆಡ್ಮಿ 13 ಸಿ ಮತ್ತು ರೆಡ್ಮಿ 13 ಸಿ 5ಜಿ ಸ್ಮಾರ್ಟ್​ಫೋನ್​ಗಳು ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿವೆ.

Redmi 13C budget smartphone launched price Starting

author img

By ETV Bharat Karnataka Team

Published : Dec 7, 2023, 1:44 PM IST

ನವದೆಹಲಿ: ಚೀನಾ ಮೂಲದ ಸ್ಮಾರ್ಟ್​ಫೋನ್ ತಯಾರಕ ಕಂಪನಿ ಶಿಯೋಮಿಯ ಅಂಗಸಂಸ್ಥೆಯಾದ ರೆಡ್ಮಿ ಭಾರತದಲ್ಲಿ ತನ್ನ 'ಸಿ' ಸರಣಿಯ ಸ್ಮಾರ್ಟ್​ಫೋನ್​ಗಳ ಮುಂದಿನ ಸರಣಿಯ ರೆಡ್ಮಿ 13 ಸಿ (Redmi 13C) ಮತ್ತು ರೆಡ್ಮಿ 13 ಸಿ 5ಜಿ (Redmi 13C 5G) ಅನ್ನು ಬಿಡುಗಡೆ ಮಾಡಿದೆ. ರೆಡ್ಮಿ 13 ಸಿ ಡಿಸೆಂಬರ್ 12 ರಿಂದ ಮಾರಾಟವಾಗಲಿದ್ದು, ರೆಡ್ಮಿ 13 ಸಿ 5 ಜಿ ಯ ಮಾರಾಟ ಡಿಸೆಂಬರ್ 16 ರಂದು ಪ್ರಾರಂಭವಾಗಲಿದೆ.

4 ಜಿಬಿ ರ‍್ಯಾಮ್ + 128 ಜಿಬಿ ಇಂಟರ್ನಲ್ ಸ್ಟೋರೇಜ್, 6 ಜಿಬಿ + 128 ಜಿಬಿ ಮತ್ತು 8 ಜಿಬಿ + 256 ಜಿಬಿ ಹೀಗೆ ಮೂರು ಮಾದರಿಗಳಲ್ಲಿ ಫೋನ್ ಲಭ್ಯವಿದೆ. ರೆಡ್ಮಿ 13 ಸಿ ಬೆಲೆ 7999 ರೂ.ಗಳಿಂದ ಪ್ರಾರಂಭವಾಗುತ್ತದೆ. ಎರಡು ಮಾದರಿಗಳು ಕ್ರಮವಾಗಿ 8,999 ಮತ್ತು 10,499 ರೂ.ಗೆ ಲಭ್ಯವಿದೆ. ಹಾಗೆಯೇ ರೆಡ್​​​ಮೀ 13 ಸಿ 5 ಜಿ ಬೆಲೆ ಅನುಕ್ರಮವಾಗಿ 9,999, 11,499 ಮತ್ತು 13,499 ರೂ. ಆಗಿರಲಿದೆ.

ಆರಂಭಿಕ ಆಫರ್: ರೆಡ್ಮಿ 13ಸಿ ಸ್ಮಾರ್ಟ್​ಫೋನ್​ಗಳನ್ನು Mi ಡಾಟ್ com, ಶಿಯೋಮಿ ರಿಟೇಲ್ ಮಳಿಗೆಗಳು ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳ ಮೂಲಕ ಖರೀದಿಸುವವರಿಗೆ 1000 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಇರುತ್ತದೆ.

ರೆಡ್​​ಮಿ 13ಸಿ ವಿಶೇಷತೆಗಳು: ಇದು 6.74 ಇಂಚಿನ ಎಚ್​ಡಿ ಪ್ಲಸ್ ಡಿಸ್​ಪ್ಲೇ ಹೊಂದಿದ್ದು, 600 * 720 ಪಿಕ್ಸೆಲ್​ಗಳ ರೆಸಲ್ಯೂಶನ್, 90 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 450 ನಿಟ್ಸ್ ಪೀಕ್ ಬ್ರೈಟ್​ನೆಸ್ ಹೊಂದಿದೆ. ಬಜೆಟ್ ಬೆಲೆಯ ಸ್ಮಾರ್ಟ್​ಫೋನ್ ಆಗಿರುವ ಇದು ಗ್ರಾಫಿಕ್ಸ್ ಅವಶ್ಯಕತೆಗಳಿಗಾಗಿ Mali G-57 MP2 GPU ನೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೊ ಜಿ 85 ಚಿಪ್ ಸೆಟ್​ನಿಂದ ನಿಯಂತ್ರಿಸಲ್ಪಡುತ್ತದೆ.

ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50 ಎಂಪಿ ಕ್ಯಾಮೆರಾ ಇದೆ; ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್​ 50 ಎಂಪಿ ಪ್ರೈಮರಿ ಸೆನ್ಸರ್, 2 ಎಂಪಿ ಮ್ಯಾಕ್ರೋ ಲೆನ್ಸ್ ಮತ್ತು 2 ಎಂಪಿ ಲೆನ್ಸ್ ಅನ್ನು ಒಳಗೊಂಡಿದೆ. 18 ವ್ಯಾಟ್ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡಬಹುದು.

ರೆಡ್​​​ಮಿ 13ಸಿ 5ಜಿ ವಿಶೇಷತೆಗಳು: ಇದು 6.74-ಇಂಚಿನ ಎಚ್​ಡಿ ಪ್ಲಸ್ ಡಿಸ್​ಪ್ಲೇ ಹೊಂದಿದೆ. ಹೆಚ್ಚಿನ 600 ನಿಟ್ಸ್ ಪೀಕ್ ಬ್ರೈಟ್​ನೆಸ್ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6100 + ಎಸ್ಒಸಿ ಪ್ರೊಸೆಸರ್ ಇದರಲ್ಲಿದ್ದು, Mali-G57 M2 GPU ಗ್ರಾಫಿಕ್ಸ್ ಕೆಲಸಗಳನ್ನು ಮಾಡುತ್ತದೆ.

ಇದನ್ನೂ ಓದಿ : ಸಿಕ್ಕಾಪಟ್ಟೆ ಬಡ್ಡಿ ಪೀಕುವ 17 'ಸ್ಪೈ ಲೋನ್' ಆ್ಯಪ್​ ತೆಗೆದು ಹಾಕಿದ ಗೂಗಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.