ನವದೆಹಲಿ : ನಮ್ಮ ಅಮೂಲ್ಯ ಫೋಟೊಗಳು ಮತ್ತು ಪ್ರಮುಖ ಫೈಲ್‌ಗಳನ್ನು ಸಂಗ್ರಹಿಸಲು ನಾವು ಫೋಟೋ ಆಲ್ಬಮ್‌ಗಳು, ಡಾಕ್ಯುಮೆಂಟ್ ಫೈಲ್‌ಗಳು, ರೀಲ್ ಕ್ಯಾಮೆರಾಗಳು, ಸಿಡಿಗಳು ಮತ್ತು ಕ್ಯಾಸೆಟ್‌ಗಳಂತಹ ಭೌತಿಕ ಶೇಖರಣಾ ಮಾಧ್ಯಮವನ್ನೇ ಅವಲಂಬಿಸಿದ್ದೇವೆ. ಈ ಭೌತಿಕ ವಸ್ತುಗಳು ನಮ್ಮ ಹಿಂದಿನ ನೆನಪುಗಳನ್ನು ಸಂಗ್ರಹಿಸಿ ಇಡುತ್ತವೆ.
ಆದರೆ ಈಗ ಸ್ಮಾರ್ಟ್‌ಫೋನ್‌ಗಳ ಆಗಮನದಿಂದ ಡೇಟಾ ಸಂಗ್ರಹಿಸುವುದು ಮತ್ತು ಅದನ್ನು ಮತ್ತೆ ನೋಡುವುದು ಇದು ತುಂಬಾ ಸುಲಭವಾಗಿದೆ. ನಮ್ಮ ಕೈಯಲ್ಲಿರುವ ಸಾಧನಗಳೇ ಈಗ ನಮ್ಮ ಮುಖ್ಯ ಸ್ಟೋರೇಜ್ ಡಿವೈಸ್ಗಳಾಗುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿ ಕ್ಷಣದ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ.
ಹೊಸ ಸ್ಟೋರೇಜ್ ಕ್ರಾಂತಿ ತರಲು ಸಿದ್ಧ: ಹೀಗಾಗಿ ಸ್ಮಾರ್ಟ್‌ಫೋನ್‌ನ ಡೇಟಾ ಸ್ಟೋರೇಜ್ ಸಾಮರ್ಥ್ಯವು ಬಳಕೆದಾರರಿಗೆ, ವಿಶೇಷವಾಗಿ ಯುವ ಜನತೆಗೆ ಪ್ರಮುಖ ಆದ್ಯತೆಯಾಗಿದೆ. ತನ್ನ ಬಳಕೆದಾರರ ಈ ಬೇಡಿಕೆಯನ್ನು ಪೂರೈಸಲು, ಯುವ ಮತ್ತು ಡೈನಾಮಿಕ್ ಬ್ರ್ಯಾಂಡ್ ರಿಯಲ್‌ಮಿ ತನ್ನ ಇತ್ತೀಚಿನ ರಿಯಲ್‌ಮಿ ನಾರ್ಜೊ 60 ಸರಣಿ 5G ಯೊಂದಿಗೆ ಹೊಸ ಸ್ಟೋರೇಜ್ ಕ್ರಾಂತಿ ತರಲು ಸಿದ್ಧವಾಗಿದೆ.
ನಾರ್ಜೊ 60 ಸಿರೀಸ್ 5G ಯ ಪರಿಚಯದೊಂದಿಗೆ ರಿಯಲ್ ಮಿ ಮತ್ತೊಮ್ಮೆ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ ಎಂದು ಸಾಬೀತುಪಡಿಸಿದೆ. ರಿಯಲ್ ಮಿ ನಾರ್ಜೊ 60 ಸರಣಿ 5G ಸಮಗ್ರ ಶೇಖರಣಾ ಆಯ್ಕೆಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಈ ಸರಣಿಯ 1TB ರಿಯಲ್ ಮಿ ಸರಣಿಯು ಭಾರತೀಯ ಮಾರುಕಟ್ಟೆಗೆ ಬರುತ್ತಿರುವ ಪ್ರಥಮ ಸರಣಿಯಾಗಿದೆ.
ಭಾರತೀಯ ಬಳಕೆದಾರರಿಗಾಗಿಯೇ ವಿಶೇಷ ವಿನ್ಯಾಸ: ರಿಯಲ್‌ಮಿ ಯ 'ಗೋ ಪ್ರೀಮಿಯಂ' ಕಾರ್ಯತಂತ್ರದ ಭಾಗವಾಗಿ ರಿಯಲ್ ಮಿ ನಾರ್ಜೊ 60 ಪ್ರೊ 5G ಅನ್ನು ನಿರ್ದಿಷ್ಟವಾಗಿ ಅತ್ಯಧಿಕ ಸ್ಟೋರೇಜ್ ಸಾಮರ್ಥ್ಯ ಬಯಸುವ ಭಾರತೀಯ Gen-Z ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ಫೋನ್ 1 ಟಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಭಾರತೀಯ ಮಾರುಕಟ್ಟೆಗಾಗಿ ತಯಾರಿಸಲಾದ ವಿಶೇಷ ಫೋನ್ ಆಗಿದೆ. ನಿಮ್ಮ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಸಂಗ್ರಹಿಸಲು ಇದರಲ್ಲಿ ನಿಮಗೆ ಸಾಕಷ್ಟು ಸ್ಥಳಾವಕಾಶ ಸಿಗಲಿದೆ.
ರಿಯಲ್‌ಮಿ ಭವಿಷ್ಯವನ್ನು ಸೃಷ್ಟಿಸಲು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನದ ಪ್ರವರ್ತಕರಾಗುವ ಗುರಿಯನ್ನು ಹೊಂದಿದೆ. ಶೇಖರಣಾ ಮಿತಿಗಳ ಭಯವಿಲ್ಲದೆ ಪ್ರತಿ ಸ್ಮರಣೀಯ ಕ್ಷಣವನ್ನು ಈಗ ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಸೆರೆಹಿಡಿದು ಅದನ್ನು ಪೋನ್ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. 1 ಟಿಬಿ ಸ್ಟೋರೇಜ್ ಸ್ಪೇಸ್ನೊಂದಿಗೆ ರಿಯಲ್ ಮಿ ನಾರ್ಜೊ 60 ಪ್ರೊ 5G ನಿಮ್ಮ ನೆನಪುಗಳನ್ನು ಬಹುಕಾಲ ಫೋನ್ನಲ್ಲಿ ಇಟ್ಟುಕೊಳ್ಳಲು ಅವಕಾಶ ನೀಡುತ್ತದೆ.
ರಿಯಲ್ ಮಿ ನಾರ್ಜೊ ಸರಣಿಯು ಭಾರತದಲ್ಲಿ ರಿಯಲ್ ಮಿ ಮೊಬೈಲ್‌ನಿಂದ ತಯಾರಿಸಲ್ಪಟ್ಟ ಮೊಬೈಲ್‌ಗಳ ಸರಣಿಯಾಗಿದೆ. 2023 ರಲ್ಲಿರುವಂತೆ ರಿಯಲ್‌ಮಿ ಮೊಬೈಲ್ ಭಾರತದಲ್ಲಿ 17 Realme Narzo ಮಾದರಿಯ ಫೋನ್ಗಳನ್ನು ಪರಿಚಯಿಸಿದೆ.
ಇದನ್ನೂ ಓದಿ : ಕಂಪನಿ ವಿಳಾಸಗಳ ಜಿಯೋಟ್ಯಾಗಿಂಗ್ ಕಡ್ಡಾಯ: ನಕಲಿ ನೋಂದಣಿ ತಡೆಗೆ ಕ್ರಮ