ನವದೆಹಲಿ: ಕೆಲವು ವಾರಗಳ ಹಿಂದೆ ಬಿಡುಗಡೆಗೊಂಡ Realme GT Neo 3T, ಸ್ಮಾರ್ಟ್ಫೋನ್ ಜೂನ್ ಅಂತ್ಯದ ವೇಳೆ ಅಥವಾ ಜುಲೈ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು GSM Arena ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಏನೀ ಸ್ಮಾರ್ಟ್ಫೋನಿನ ವಿಶೇಷತೆಗಳು: ಈ ಸ್ಮಾರ್ಟ್ಫೋನ್ ಆಕರ್ಷಕ ಬಣ್ಣಗಳಾದ ಡ್ಯಾಶ್ ಹಳದಿ, ಡ್ರಿಫ್ಟಿಂಗ್ ವೈಟ್ ಮತ್ತು ಶೇಡ್ ಕಪ್ಪು ಬಣ್ಣಗಳನ್ನು ಹೊಂದಿದ್ದು, ಆ ಬಣ್ಣಗಳಲ್ಲಿ ಲಭ್ಯವಿರಲಿದೆ. ಮೂರು ರೀತಿಯ ಮೆಮೋರಿ ಸಾಮರ್ಥ್ಯದ ಆಯ್ಕೆಗಳನ್ನೊಳಗೊಂಡಿರುವುದು ಈ ಮೊಬೈಲ್ನ ವಿಶೇಷತೆ. , 6GB/128GB, 8GB/128GB, ಮತ್ತು 8GB/256GB ಯ ಆಯ್ಕೆಗಳಿರಲಿವೆ.
Snapdragon 870 SoC, ನೊಂದಿಗೆ 6.62" 120Hz FullHD+ AMOLED ಡಿಸ್‌ಪ್ಲೇಯನ್ನು ಈ ಫೋನ್ ಹೊಂದಿದೆ. 5,000 mAh ಬ್ಯಾಟರಿ, 80W ಚಾರ್ಜಿಂಗ್, ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಮೊಬೈಲ್ ಒಳಗೊಂಡಿರಲಿದೆ ಎಂದು GSM Arena ವರದಿ ಮಾಡಿದೆ.
Realme GT Neo 3T ಸ್ಮಾರ್ಟ್‌ಫೋನಿನಲ್ಲಿ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಲಾಗಿದ್ದು, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ಗಳನ್ನೊಳಗೊಂಡಿದೆ. ಇನ್ನು ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಇದನ್ನೂ ಓದಿ: ನೇಪಥ್ಯಕ್ಕೆ ಸರಿದ ಇಂಟರ್ನೆಟ್ ಎಕ್ಸ್‌ಪ್ಲೋರರ್ : 27 ವರ್ಷದ ಸುದೀರ್ಘ ಪಯಣ ಅಂತ್ಯ