ಹೈದರಾಬಾದ್: ಹೈದರಾಬಾದ್ ಮೂಲದ ಸ್ಟಾರ್ಟಪ್ ಕಂಪನಿಯಾದ ಸ್ಕೈರೂಟ್ ಏರೋಸ್ಪೇಸ್ ರೂಪಿಸಿದ ಖಾಸಗಿ ರಾಕೆಟ್ ವಿಕ್ರಮ್ ಸಬಾರ್ಬಿಟಲ್ ನಭಕ್ಕೆ ಚಿಮ್ಮಿತು. ಬೆಳಗ್ಗೆ 11.30 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡ್ಡಯನ ಮಾಡಿತು.
ಭಾರತದ ಬಾಹ್ಯಾಕಾಶ ಪಿತಾಮಹ ವಿಕ್ರಮ್ ಸಾರಾಬಾಯಿ ಅವರ ಹೆಸರನ್ನು ಈ ರಾಕೆಟ್ ಇಡಲಾಗಿದೆ. ಇಸ್ರೋ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ನಿರ್ಮಿಸಿದ ಉಪಗ್ರಹವನ್ನು ಕಕ್ಷೆಗೆ ಹಾರಿಬಿಟ್ಟಿದೆ.
-
Mission Prarambh is successfully accomplished.
— ISRO (@isro) November 18, 2022 " class="align-text-top noRightClick twitterSection" data="
Congratulations @SkyrootA
Congratulations India! @INSPACeIND pic.twitter.com/PhRF9n5Mh4
">Mission Prarambh is successfully accomplished.
— ISRO (@isro) November 18, 2022
Congratulations @SkyrootA
Congratulations India! @INSPACeIND pic.twitter.com/PhRF9n5Mh4Mission Prarambh is successfully accomplished.
— ISRO (@isro) November 18, 2022
Congratulations @SkyrootA
Congratulations India! @INSPACeIND pic.twitter.com/PhRF9n5Mh4
ಮಿಷನ್ ಪ್ರಾರಂಭ್ ಯಶಸ್ವಿ: ಈ ಖಾಸಗಿ ರಾಕೆಟ್ಗೆ "ಪ್ರಾರಂಭ್" ಎಂದೂ ಕರೆಯಲಾಗಿದೆ. ರಾಕೆಟ್ ಉಡ್ಡಯನ ಬಳಿಕ ಮಾತನಾಡಿದ ಇನ್ಸ್ಪೇಸ್ ಅಧ್ಯಕ್ಷ ಪವನ್ಕುಮಾರ್ ಸ್ಕೈರೂಟ್ ಏರೋಸ್ಪೇಸ್ ಉತ್ತಮ ಪ್ರಾರಂಭ ಪಡೆದಿದೆ. ರಾಕೆಟ್ ಯಶಸ್ವಿಯಾಗಿ ಉಡ್ಡಯನ ಕಂಡಿದೆ ಎಂದು ಘೋಷಿಸಿದರು.
ಮೊದಲ ಖಾಸಗಿ ರಾಕೆಟ್ ಉಡಾಯಿಸಿದ ಇಸ್ರೋ ಈ ಬಗ್ಗೆ ಟ್ವೀಟ್ ಮಾಡಿ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯನ್ನು ಅಭಿನಂದಿಸಿದೆ. ರಾಕೆಟ್ ಉಡಾವಣೆ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಉಪಸ್ಥಿತರಿದ್ದರು.
ಓದಿ: ಇತಿಹಾಸ ನಿರ್ಮಿಸಲು ಸಿದ್ಧವಾದ ಇಸ್ರೋ: ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ