ನವದೆಹಲಿ : ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ತಯಾರಕ ಕಂಪನಿ ಶಿಯೋಮಿ (Xiaomi) ತನ್ನ ನಾಲ್ಕು ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಲೆ ಕಡಿತವನ್ನು ಘೋಷಿಸಿದೆ. ವಿಭಿನ್ನ ಬೆಲೆ ಶ್ರೇಣಿಗಳಲ್ಲಿರುವ ಈ ಸ್ಮಾರ್ಟ್ಫೋನ್ಗಳು Mi ಡಾಟ್ ಕಾಂ ಹಾಗೂ ಶಿಯೋಮಿಯ ಆನ್‌ಲೈನ್ ರಿಟೇಲ್ ಪ್ಲಾಟ್‌ಫಾರ್ಮ್ ಮತ್ತು ಅಮೆಜಾನ್ ಮತ್ತು ಶಿಯೋಮಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇನ್ನು ಮುಂದೆ ಮೊದಲಿಗಿಂತೆ ಕಡಿಮೆ ಬೆಲೆಗೆ ಲಭ್ಯವಾಗಲಿವೆ. ರೆಡ್ಮಿ ನೋಟ್ 12 5ಜಿ (Redmi Note 12 5G), ರೆಡ್ಮಿ K50i (Redmi K50i), ರೆಡ್ಮಿ (12C) Redmi 12C, ಮತ್ತು ಶಿಯೋಮಿ 12 Pro (Xiaomi 12 Pro) ಇವುಗಳ ಮೇಲೆ ಗಮನಾರ್ಹ ರಿಯಾಯಿತಿ ಸಿಗಲಿದೆ. ಈ ಫೋನ್ಗಳ ಹೊಸ ಬೆಲೆ ಎಷ್ಟು ಎಂಬುದನ್ನು ನೋಡೋಣ:
ರೆಡ್ಮಿ ನೋಟ್ 12 5G: 7,000 ರೂಪಾಯಿ ರಿಯಾಯಿತಿಯೊಂದಿಗೆ ಬೆಲೆ 14,999 ರೂ.: ಉತ್ತಮ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ಬ್ಯಾಟರಿ ಅವಧಿಯನ್ನು ಹೊಂದಿರುವ ರೆಡ್ಮಿ ನೋಟ್ 12 5G ಇದು ಸ್ನ್ಯಾಪ್ಡ್ರ್ಯಾಗನ್ 4 Gen 1 SoC ಪ್ರೊಸೆಸರ್ನಿಂದ ಶಕ್ತಿಶಾಲಿಯಾಗಿದೆ. ಇದು ತ್ವರಿತ ವೇಗ ಮತ್ತು ತಡೆರಹಿತ ಮಲ್ಟಿಟಾಸ್ಕಿಂಗ್ಗೆ ಉಪಯುಕ್ತವಾಗಿದೆ. ಗ್ಯಾಜೆಟ್ ಆಧುನಿಕ ಲುಕ್ ಅನ್ನು ಹೊಂದಿದೆ ಮತ್ತು ಸುಧಾರಿತ ವೀಕ್ಷಣೆಯ ಅನುಭವಕ್ಕಾಗಿ 120Hz ರಿಫ್ರೆಶ್ ದರದ ಡಿಸ್‌ಪ್ಲೇ. ರೆಡ್ಮಿ ನೋಟ್ 12 5G 48MP ಟ್ರಿಪಲ್ ಬ್ಯಾಕ್ ಕ್ಯಾಮೆರಾ ಕಾನ್ಫಿಗರೇಶನ್ ಮತ್ತು 5,000 mAh ಬ್ಯಾಟರಿಯನ್ನು ಹೊಂದಿದ್ದು ಕ್ಷಿಪ್ರ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಫೋನ್ ಬೆಲೆ ಆರಂಭದಲ್ಲಿ 21,999 ರೂ. ಆಗಿತ್ತು.
ರೆಡ್ಮಿ K50i: 7,000 ರೂಪಾಯಿ ರಿಯಾಯಿತಿಯೊಂದಿಗೆ ಬೆಲೆ 18,999 ರೂ.: ರೆಡ್ಮಿ K50i 5G 6.6-ಇಂಚಿನ ಡಿಸ್‌ಪ್ಲೇ ಹೊಂದಿದ್ದು ಅದು 144Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ ಮತ್ತು MediaTek ನ ಡೈಮೆನ್ಸಿಟಿ 8100 SoC ಪ್ರೊಸೆಸರ್ ಇದರಲ್ಲಿದೆ. 5,080mAh ಬ್ಯಾಟರಿ ಜೊತೆಗೆ, ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ: 64MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ. ರೆಡ್ಮಿ K50i ಪ್ರೀಮಿಯಂ ವಿನ್ಯಾಸ ಹೊಂದಿದ್ದು ಮತ್ತು ಸುದೀರ್ಘ ಬ್ಯಾಟರಿ ಅವಧಿಯನ್ನು ನೀಡುತ್ತದೆ. Redmi K50i ನ ಆರಂಭಿಕ ಬೆಲೆ 25,999 ರೂ. ಆಗಿತ್ತು.
ರೆಡ್ಮಿ 12C: Rs 2,000 ರಿಯಾಯಿತಿಯೊಂದಿಗೆ ಬೆಲೆ 8,499 ರೂ. : MediaTek Helio G85 ಚಿಪ್‌ಸೆಟ್ ರೆಡ್ಮಿ 12C ನ 6.71-ಇಂಚಿನ HD+ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ ಲ್ಯಾವೆಂಡರ್ ಪರ್ಪಲ್, ಮಿಂಟ್ ಗ್ರೀನ್, ರಾಯಲ್ ಬ್ಲೂ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಮಾದರಿಗಳಲ್ಲಿ ಸಿಗುತ್ತದೆ. 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ರೆಡ್ಮಿ 12C ನಲ್ಲಿ ಎರಡು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳು ಲಭ್ಯವಿವೆ: 4GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್. ಈ ಫೋನ್ ಬಿಡುಗಡೆಯಾದಾಗ ಇದರ ಬೆಲೆ 6GB + 128GB ಮಾಡೆಲ್ಗೆ ಬೆಲೆ 10,499 ರೂ. ಆಗಿತ್ತು.
ಶಿಯೋಮಿ 12 Pro: 20,000 ರೂಪಾಯಿ ರಿಯಾಯಿತಿಯೊಂದಿಗೆ ಬೆಲೆ 42,999 ರೂ.: Snapdragon 8 Gen 1 ಚಿಪ್‌ಸೆಟ್ ಇರುವುದು Xiaomi 12 Pro ದ ಅತ್ಯಂತ ಪ್ರಮುಖ ವೈಶಿಷ್ಟಯವಾಗಿದೆ. ಇದು AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಗಾಢವಾದ ವರ್ಣಗಳನ್ನು ಬಿಂಬಿಸುತ್ತದೆ ಮತ್ತು ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಎಡಿಟಿಂಗ್‌ಗೆ ಪರಿಪೂರ್ಣವಾಗಿದೆ. 120W ಶಿಯೋಮಿ ಹೈಪರ್‌ಚಾರ್ಜ್ ಮತ್ತು ಟ್ರಿಪಲ್ 50MP + 50MP + 50MP ಹಿಂಬದಿಯ ಕ್ಯಾಮೆರಾಗಳೊಂದಿಗೆ, ಶಿಯೋಮಿ 12 Pro 18 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆದಾಗ ಇದರ ಬೆಲೆ 62,999 ರೂ. ಆಗಿತ್ತು.
ಇದನ್ನೂ ಓದಿ : ಏಪ್ರಿಲ್ನಲ್ಲಿ 74 ಲಕ್ಷ ಅಕೌಂಟ್ಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಆ್ಯಪ್