ETV Bharat / science-and-technology

ವಿಫಲವಾಗುತ್ತಿದೆ ಪ್ಲಾಸ್ಟಿಕ್​ ಮರುಬಳಕೆ: ಜಗತ್ತು ಈ ಬಗ್ಗೆ ಯೋಚಿಸಲೇಬೇಕು!

ಪ್ಲಾಸ್ಟಿಕ್​ ಮರು ಬಳಕೆಯಾಗುವುದಕ್ಕಿಂತ ವ್ಯರ್ಥವಾಗುವುದು ಹೆಚ್ಚಾಗಿದೆ. ಇದರಿಂದ ಪರಿಸರಕ್ಕೆ ವಿಷಾನಿಲ ಸೇರುತ್ತಿದೆ. ಈ ನಿಟ್ಟಿನಲ್ಲಿ ಜಗತ್ತು ಕ್ರಮಕ್ಕೆ ಮುಂದಾಬೇಕಿದೆ.

Plastic recycling is failing; The world needs to think about this

author img

By

Published : May 31, 2023, 1:10 PM IST

ಪ್ರತಿ ವರ್ಷ ಶೇಖರಣೆಯಾಗುವ ಹೊಸ ಪ್ಲಾಸ್ಟಿಕ್​ಗಳ ನಿವಾರಣೆಗೆ ಮರುಬಳಕೆಯೊಂದೇ ಪರಿಹಾರ ಎನ್ನಲಾಗುತ್ತಿತ್ತು. ಆದರೆ, ಇದು ವಾಸ್ತವವಲ್ಲ. ಜಾಗತಿಕ ಮರುಬಳಕೆಯ ಸಾಮರ್ಥ್ಯ ಎಂದರೆ ಸುಮ್ಮನೆ ತೆಗೆದುಕೊಳ್ಳುವುದು, ಬಳಸುವುದು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ವ್ಯರ್ಥ ಮಾಡುವುದಲ್ಲ. ಪ್ಲಾಸ್ಟಿಕ್​ ಮರುಬಳಕೆ ಮಾಡುವುದಾಗಿ ಬ್ರಿಟನ್​ನಂತಹ ದೇಶಗಳು ಬಡ ರಾಷ್ಟ್ರಗಳಿಂದ ಪ್ಲಾಸ್ಟಿಕ್​ ಅನ್ನು ಸಂಗ್ರಹಿಸಿ, ಗುಡ್ಡೆ ಹಾಕಿ ಕುಳಿತುಕೊಂಡಿದೆ. ಇಲ್ಲಿ ಪ್ಲಾಸ್ಟಿಕ್​ ಮರುಬಳಕೆಗಿಂತ ಹೆಚ್ಚಾಗಿ ವ್ಯರ್ಥವಾಗುತ್ತಿದೆ.

ಮರುಬಳಕೆಯ ಪ್ರಕ್ರಿಯೆ ಇದೀಗ ದೊಡ್ಡ ಸಮಸ್ಯೆಯಾಗಿದೆ. ಗ್ರೀನ್​ಪೀಸ್​ ಮತ್ತು ದಿ ಇಂಟರ್​ನ್ಯಾಷನಲ್​ ಪೊಲುಟ್ಯಂಟ್ಸ್​ ಎಲಿಮಿನೇಷನ್​ ನೆಟ್​ವರ್ಕ್​ ಹೊಸ ವರದಿ ಅನುಸಾರ, ಮರು ಬಳಕೆಗಿಂತ ಹೆಚ್ಚಾಗಿ ಹಾಗೆಯೇ ಸಂಗ್ರಹಕೊಂಡು ಕೊಳೆಯುತ್ತಿರುವ ಪ್ಲಾಸ್ಟಿಕ್​ಗಳು ಪರಿಸರಕ್ಕೆ ಹೆಚ್ಚು ವಿಷ ರಾಸಾಯನಿಕ ಬಿಡುಗಡೆ ಮಾಡುತ್ತಿದೆ.

ವ್ಯರ್ಥವಾಗಿ ಸಂಗ್ರಹಣೆ: ಇತ್ತೀಚಿನ ಮತ್ತೊಂದು ವರದಿಯಲ್ಲಿ, ಮರುಬಳಕೆ ಸೌಲಭ್ಯವೂ ಪ್ರತಿವರ್ಷ ಪರಿಸರಕ್ಕೆ ನೂರಾರು ಟನ್​ ಮೈಕ್ರೋಪ್ಲಾಸ್ಟಿಕ್ಸ್​ ಬಿಡುಗಡೆ ಮಾಡುತ್ತಿದೆ. ಕೇವಲ 6-9 ರಷ್ಟು ಎಲ್ಲ ಪ್ಲಾಸ್ಟಿಕ್​ಗಳನ್ನು ಜಾಗತಿಕವಾಗಿ ಮರು ಬಳಕೆ ಮಾಡಲಾಗುತ್ತಿದೆ. ಆದಾಗ್ಯೂ, ಮರುಬಳಕೆಗೆ ಅನೇಕ ದೇಶಗಳು ಪ್ಲಾಸ್ಟಿಕ್​ ಮತ್ತು ಅದರ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದೆ. ಈ ಮರುಬಳಕೆಯಿಂದ ಮಾಡುತ್ತಿರುವ ಉತ್ಪನ್ನಗಳು ಗಣನೀಯ ಮಟ್ಟದಲ್ಲಿ ಕಡಿಮೆ ಇದೆ.

ಕೇವಲ ಶೇ 2ರಷ್ಟು ಪ್ಲಾಸ್ಟಿಕ್​ ತ್ಯಾಜ್ಯವನ್ನು ಕ್ಲೋಸ್ಡ್​​ ಲೂಪ್​ನಲ್ಲಿ ಮರುಬಳಕೆ ಮಾಡಲಾಗುತ್ತಿದೆ. ಅಲ್ಲದೇ, ಇದು ಕಡಿಮೆ ಗುಣಮಟ್ಟಕ್ಕೆ ತಿರುಗದಂತೆ ನೋಡಿಕೊಳ್ಳಲಾಗುತ್ತಿದೆ. ಮರು ಬಳಕೆಯಲ್ಲಿ ವರ್ಜಿನ್​ ಉತ್ಪನ್ನಗಳನ್ನು ಸಂಪೂರ್ಣವಾಗಿ ಮರುಬದಲಾವಣೆ ಮಾಡುವುದಿಲ್ಲ. ಏಕೆಂದರೆ ಅಗತ್ಯ ಗುಣಲಕ್ಷಣಗಳನ್ನು ಕಳೆದುಕೊಳ್ಳುವ ಮೊದಲು ಅದನ್ನು ಎರಡು ಬಾರಿ ಮರುಬಳಕೆ ಮಾಡಬಹುದು ಮತ್ತು ಆದ್ದರಿಂದ ಹೆಚ್ಚಿನ ಮರುಬಳಕೆಯು ಅದೇ ಉದ್ದೇಶಕ್ಕಾಗಿ ಬಳಸಲಾಗದ ಡೌನ್‌ಗ್ರೇಡ್ ವಸ್ತುವಿಗೆ ಕಾರಣವಾಗುತ್ತದೆ. ಇದಕ್ಕೆ ಸುಸ್ಥಿರ ಮಾರ್ಗ ಎಂದರೆ..,

ಕಡಿಮೆ ಮಾಡುವುದು: ಉತ್ಪಾದಕರು ಅನಗತ್ಯ ಪ್ಲಾಸ್ಟಿಕ್​ಗಳು ಮಾರುಕಟ್ಟೆ ಪ್ರವೇಶಿಸಿದಂತೆ ತಡೆಯಬೇಕಿದೆ. ಪ್ಲಾಸ್ಟಿಕ್​ಗಳ ಉತ್ಪಾದನೆ ಆಗದಿದ್ದರೆ, ಅವುಗಳನ್ನು ಸಂಗ್ರಹಿಸುವುದು, ಮರುಬಳಕೆ ಮಾಡುವುದು ತಪ್ಪುತ್ತದೆ. ಇದರ ಬದಲಾಗಿ ಮಲ್ಟಿ ಲೇಯರ್​ ಸ್ಯಾಚೆಟ್​, ತೇಳುವಾದ ಫಿಲ್ಮ್​​ ಮತ್ತು ರ್ಯಾಪರ್​ಗಳನ್ನು ಬಳಕೆ ಮಾಡಬಹುದು. ಇದನ್ನು ಮೊದಲ ಪ್ರಾಶಸ್ತ್ಯವಾಗಿ ಕೂಡ ಆಯ್ಕೆ ಮಾಡಬಹುದು. ಪ್ಲಾಸ್ಟಿಕ್​ ಉತ್ಪನ್ನಗಳಿಗೆ ನಿರ್ಬಂದ ವಿಧಿಸುವ ಮೂಲಕ ಅದರ ಮರುಬಳಕೆ ಮತ್ತು ಪ್ಯಾಕೇಜ್​ ಅನ್ನು ತಡೆಯಬಹುದು. ಏಕ ಬಳಕೆ ತ್ಯಾಜ್ಯಗಳನ್ನು ಪ್ಯಾಕೇಜ್​ನಲ್ಲಿ ತಿರಸ್ಕರಿಸಬಹುದು.

ಮರು ಬಳಕೆ: ಈಗಾಗಲೇ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್​ ಅನ್ನು ಹೆಚ್ಚು ಬಾರಿ ಪುನರ್‌ಬಳಕೆ ಮಾಡುವುದರಿಂದ ಅನಗತ್ಯವಾಗಿ ಮತ್ತೆ ಹೊಸ ಉತ್ಪನ್ನ ಮತ್ತು ಪ್ಯಾಕೇಜಿಂಗ್​ನಲ್ಲಿ ನಿರಾಕರಿಸಬಹುದು. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 250 ಬಿಲಿಯನ್​ ಏಕ ಬಳಕೆ ಕಾಫಿ ಕಪ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಸರ್ಕಾರಗಳು ಮರು ಬಳಕೆ ಮಾಡುವ ನಿರ್ಣಯಿಸುವ ಮೂಲಕ ಇವುಗಳನ್ನು ವ್ಯರ್ಥವಾಗದಂತೆ ತಡೆಯಬಹುದು. ಅಂಗಡಿ, ಕೆಫೆ ಮತ್ತು ಇತರೆ ಕಡೆ ಮರು ಬಳಕೆ ಪ್ಯಾಕೇಜಿಂಗ್​ ಅನ್ನು ಉಪಯೋಗಿಸುವ ಅದನ್ನು ಗ್ರಾಹಕರ ಚಕ್ರವಾಗಿ ಬಳಕೆ ಮಾಡಬೇಕಿದೆ.

ಬದಲಿ: ಪ್ಲಾಸ್ಟಿಕ್​ ಬದಲಾಗಿ ಲೋಹ, ಗ್ಲಾಸ್​​, ಅಥವಾ ಪೇಪರ್​ ಬಳಕೆ ಮಾಡಬಹುದು. ಆದರೆ, ಇದಕ್ಕೆ ಸಾರ್ವತ್ರಿಕ ಸಮರ್ಥನಿಯ ಬದಲಿ ಇಲ್ಲ. ಯಾವುದೇ ವಸ್ತುವಿನ ಪರಿಸರ ಪರಿಣಾಮಗಳನ್ನು ಉತ್ಪಾದನೆಯಿಂದ ಬಳಕೆ ಮತ್ತು ವಿಲೇವಾರಿ ಮಾಡುವವರೆಗೆ ಅದರ ಸಂಪೂರ್ಣ ಜೀವನ ಚಕ್ರದಲ್ಲಿ ಕಟ್ಟುನಿಟ್ಟಾಗಿ ನಿರ್ಣಯಿಸಬೇಕು, ಅದು ಹಾನಿಗಿಂತ ಹೆಚ್ಚು ಒಳ್ಳೆಯದನ್ನು ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಮೌಲ್ಯಮಾಪನಗಳು ಎಲ್ಲಾ ಸಾಮಾಜಿಕ, ಪರಿಸರ ಮತ್ತು ಆರ್ಥಿಕ ವೆಚ್ಚಗಳನ್ನು ಪರಿಗಣಿಸಬೇಕು.

ಇದನ್ನೂ ಓದಿ: ಕಡಿಮೆ ತಾಪಮಾನದಲ್ಲಿ ಪ್ಲಾಸ್ಟಿಕ್ ಜೀರ್ಣಿಸುವ ಸೂಕ್ಷ್ಮಾಣುಜೀವಿ ಪತ್ತೆ ಮಾಡಿದ ವಿಜ್ಞಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.