ETV Bharat / science-and-technology

ಪ್ರಥಮ ಆ್ಯಪಲ್ ರಿಟೇಲ್ ಮಳಿಗೆ ಆರಂಭ: ಸ್ವತಃ ಗ್ರಾಹಕರನ್ನು ಸ್ವಾಗತಿಸಿದ ಸಿಇಒ ಟಿಮ್ ಕುಕ್

ಆ್ಯಪಲ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ರಿಟೇಲ್ ಮಳಿಗೆಯನ್ನು ಆರಂಭಿಸಿದೆ. ಮುಂಬೈನಲ್ಲಿ ಇಂದು ಆರಂಭವಾದ ರಿಟೇಲ್​ ಮಳಿಗೆ ಆ್ಯಪಲ್ ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಥಮ ಆ್ಯಪಲ್ ರಿಟೇಲ್ ಮಳಿಗೆ ಆರಂಭ: ಸ್ವತಃ ಗ್ರಾಹಕರನ್ನು ಸ್ವಾಗತಿಸಿದ ಸಿಇಓ ಟಿಮ್ ಕುಕ್
Opening of the first Apple retail store: CEO Tim Cook himself welcomed
author img

By

Published : Apr 18, 2023, 5:42 PM IST

ಮುಂಬೈ : ಐಪೋನ್ ತಯಾರಕ ಕಂಪನಿ ಆ್ಯಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಸ್ಟೋರ್​ ಅನ್ನು ಇಂದು (ಮಂಗಳವಾರ) ಮುಂಬೈನಲ್ಲಿ ಆರಂಭಿಸಿದೆ. ಪಾರ್ಟನರ್ ಕಂಪನಿಗಳ ಮೂಲಕ ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡುವ ಮೂಲಕ ಭಾರತಕ್ಕೆ ಪ್ರವೇಶಿಸಿದ ಇಪ್ಪತ್ತೈದು ವರ್ಷಗಳ ನಂತರ ಆ್ಯಪಲ್ ಭಾರತದಲ್ಲಿ ತನ್ನ ಸ್ವಂತ ಮಳಿಗೆಯನ್ನು ಆರಂಭಿಸಿದೆ.

  • #WATCH | Apple CEO Tim Cook surprised at seeing a customer bring his old Macintosh Classic machine at the opening of India's first Apple store at Mumbai's BKC pic.twitter.com/MOY1PDk5Ug

    — ANI (@ANI) April 18, 2023 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಸರಿಯಾಗಿ 11 ಗಂಟೆಗೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಆ್ಯಪಲ್ ಮಳಿಗೆಯ ಬಾಗಿಲು ತೆರೆದ ಆ್ಯಪಲ್ ಸಿಇಓ ಟಿಮ್ ಕುಕ್, ಮೊದಲ ಗ್ರಾಹಕರನ್ನು ಸ್ವತಃ ತಾವೇ ಸ್ವಾಗತಿಸಿ ಒಳಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಕಪ್ಪು ಟೀ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದ ಟಿಮ್ ಕುಕ್, ಕಂಪನಿಯ ರಿಟೇಲ್​​ ವ್ಯಾಪಾರ ವಿಭಾಗದ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ'ಬ್ರಿಯನ್ ಜೊತೆಗೂಡಿ ಮಾಧ್ಯಮಗಳಿಗೆ ಪೋಸ್ ನೀಡಿದರು. ನಂತರ ಸ್ಟೋರ್​ ಒಳಗಡೆ ಗ್ರಾಹಕರನ್ನು ಸ್ವಾಗತಿಸಲಾರಂಭಿಸಿದರು.

ಸ್ಟೋರ್​ನಲ್ಲಿದ್ದ 100 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಪ್ರಪಂಚದ ಇತರ ಭಾಗಗಳಿಂದ ಆಗಮಿಸಿದ್ದ ಕಂಪನಿಯ ಕಾರ್ಯನಿರ್ವಾಹಕರು ಟಿಮ್ ಕುಕ್ ಅವರನ್ನು ಹುರಿದುಂಬಿಸಿದರು. ಕುಕ್ ಮಳಿಗೆಯೊಳಗೆ ಹೋಗುವ ಮುನ್ನ ಸುಮಾರು ಏಳು ನಿಮಿಷಗಳ ಕಾಲ ಗ್ರಾಹಕರನ್ನು ಸ್ವಾಗತಿಸಿದರು. ಆ್ಯಪಲ್ ತನ್ನ ಮಳಿಗೆಯನ್ನು ಆರಂಭಿಸುವುದಾಗಿ ಘೋಷಿಸಿದಾಗಿನಿಂದ ಕಳೆದ ಹದಿನೈದು ದಿನಗಳಿಂದ ಆ್ಯಪಲ್ ಗ್ರಾಹಕರಲ್ಲಿ ಉತ್ಸಾಹ ಮೂಡಿದೆ.

ಹೊಸ ಮಳಿಗೆಯಲ್ಲಿ ಶಾಪಿಂಗ್ ಮಾಡಲು ಮೊದಲಿಗರಾಗಿ ಹಲವಾರು ಅಭಿಮಾನಿಗಳು ಬೆಳಗ್ಗೆಯಿಂದ ಮಾಲ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿರುವ ಮಳಿಗೆಗೆ ಅವರನ್ನು ಸ್ವಾಗತಿಸುವ ಮೊದಲು ಟಿಮ್ ಕುಕ್ ಗ್ರಾಹಕರೊಂದಿಗೆ ಸೆಲ್ಫಿಗಳಿಗೆ ಪೋಸ್ ನೀಡಿದರು ಮತ್ತು ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಬೈ ಸ್ಟೋರ್‌ನ ಪ್ರಾರಂಭದ ನಂತರ ಗುರುವಾರ ನವದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ಚಿಲ್ಲರೆ ಮಾರಾಟ ಮಳಿಗೆ ಆರಂಭವಾಗಲಿದೆ.

ಆ್ಯಪಲ್ ಇದು ಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್ ಮತ್ತು ರೊನಾಲ್ಡ್ ವೇಯ್ನ ಅವರಿಂದ ಸ್ಥಾಪಿಸಲ್ಪಟ್ಟ ಅಮೇರಿಕನ್ ತಂತ್ರಜ್ಞಾನ ಕಂಪನಿಯಾಗಿದೆ. 1977 ರಲ್ಲಿ ಸಂಘಟಿತವಾದ ಕಂಪನಿಯು ಬಳಕೆದಾರ ಇಂಟರ್​ಫೇಸ್​ನೊಂದಿಗೆ ವೈಯಕ್ತಿಕ ಕಂಪ್ಯೂಟಿಂಗ್ ಸಾಧನಗಳ ಆರಂಭಿಕ ತಯಾರಕರಲ್ಲಿ ಒಂದಾಗಿದೆ. ನಂತರದ ವರ್ಷಗಳಲ್ಲಿ ಕಂಪನಿಯು ಮೊಬೈಲ್ ಸಂವಹನ ಸಾಧನಗಳು, ಡಿಜಿಟಲ್ ಮ್ಯೂಸಿಕ್ ಪ್ಲೇಯರ್‌ಗಳು, ನೋಟ್‌ಬುಕ್‌ಗಳು ಮತ್ತು ಧರಿಸಬಹುದಾದಂತಹ ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗಗಳಿಗೆ ಕಾಲಿಟ್ಟಿತು. ಕಂಪನಿಯು ಸಂಬಂಧಿತ ಸಾಫ್ಟ್‌ವೇರ್ ಮತ್ತು ಸೇವೆಗಳು, ಪರಿಕರಗಳು ಮತ್ತು ನೆಟ್‌ವರ್ಕಿಂಗ್ ಪರಿಹಾರಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಾರುಕಟ್ಟೆ ಮಾಡುತ್ತದೆ. ಪ್ರಸ್ತುತ, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ತಿಮೋತಿ ಡೊನಾಲ್ಡ್ ಕುಕ್. ಇವರನ್ನು ಟಿಮ್ ಕುಕ್ ಎಂದು ಕರೆಯಲಾಗುತ್ತದೆ.

ಆ್ಯಪಲ್ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ಸ್ಮಾರ್ಟ್‌ಫೋನ್‌ಗಳಿಗಾಗಿ ಅಪ್ಲಿಕೇಶನ್ ಆಧಾರಿತ ಇಕೊ ಸಿಸ್ಟಮ್ ಅಭಿವೃದ್ಧಿಪಡಿಸಿದ ಮೊದಲ ಸಂಸ್ಥೆಗಳಲ್ಲಿ ಕಂಪನಿಯು ಒಂದಾಗಿದೆ. ಮೊಬೈಲ್ ಫೋನ್ ಅನ್ನು ಅನ್‌ಲಾಕ್ ಮಾಡಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮಾಡ್ಯೂಲ್ ಮತ್ತು 64-ಬಿಟ್ ಪ್ರೊಸೆಸರ್‌ಗಳನ್ನು ಬಳಸಿ ಟಚ್‌ಐಡಿ ಅನ್ನು ಪರಿಚಯಿಸಿದ ಮೊದಲ ಸ್ಮಾರ್ಟ್‌ಫೋನ್ ತಯಾರಕನಾಗಿದೆ ಆ್ಯಪಲ್.

ಇದನ್ನೂ ಓದಿ : ಬಜೆಟ್​ 5G ಸ್ಮಾರ್ಟ್​ಫೋನ್ Galaxy M14 ಲಾಂಚ್​: ಏ.21 ರಿಂದ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.