ETV Bharat / science-and-technology

ತಾನಾಗಿಯೇ ಇಂಟರ್ನೆಟ್​ ಬ್ರೌಸ್​ ಮಾಡುತ್ತೆ ಚಾಟ್​ಜಿಪಿಟಿ: ಹೊಸ ಪ್ಲಗಿನ್ ಕೈಚಳಕ!

ಮೈಕ್ರೊಸಾಫ್ಟ್​ ತಯಾರಿಸಿರುವ ಚಾಟ್​ಜಿಪಿಟಿಗೆ ಹೊಸ ಪ್ಲಗಿನ್​ಗಳನ್ನು ನೀಡಲಾಗಿದೆ. ಈ ಹೊಸ ಪ್ಲಗಿನ್​ಗಳು ಚಾಟ್​ಬಾಟ್​ಗೆ ಇಂಟರ್ನೆಟ್​ ಬ್ರೌಸ್ ಮಾಡಲು ಅವಕಾಶ ನೀಡುತ್ತವೆ.

OpenAI rolls out ChatGPT plugins that let chatbot browse internet

author img

By

Published : Mar 24, 2023, 5:13 PM IST

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಒಡೆತನದ OpenAI ತನ್ನ ಚಾಟ್‌ಜಿಪಿಟಿಗಾಗಿ ಹೊಸ ಪ್ಲಗಿನ್‌ಗಳನ್ನು ಅಳವಡಿಸಿದೆ. ಈ ಹೊಸ ಪ್ಲಗಿನ್​ಗಳು ವೆಬ್ ಸೇರಿದಂತೆ ಯಾವುದೇ ಥರ್ಡ್​ ಪಾರ್ಟಿ ಮಾಹಿತಿ ತಾಣಗಳು ಮತ್ತು ಡೇಟಾಬೇಸ್‌ಗಳನ್ನು ಬ್ರೌಸ್ ಮಾಡಲು ಚಾಟ್‌ಬಾಟ್​ಗೆ ಅವಕಾಶ ಮಾಡಿಕೊಡುತ್ತವೆ. ಆರಂಭದಲ್ಲಿ ಸಣ್ಣ ಗುಂಪಿನ ಬಳಕೆದಾರರಿಗೆ ಈ ಪ್ಲಗಿನ್​ಗಳನ್ನು ಬಳಸಲು ಅವಕಾಶ ನೀಡಲಾಗುವುದು ಮತ್ತು ಅವರು ಈ ಬಗ್ಗೆ ಹೆಚ್ಚಾಗಿ ತಿಳಿದುಕೊಂಡ ನಂತರ ಇತರರಿಗೆ ಇದನ್ನು ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ.

ಇಂದು ನಾವು ನಮ್ಮ ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಅಲ್ಫಾ ಪ್ಲಗಿನ್ ಬಳಕೆಗೆ ಅವಕಾಶ ನೀಡುತ್ತಿದ್ದೇವೆ. ನಾವು ಆರಂಭದಲ್ಲಿ ಕಡಿಮೆ ಸಂಖ್ಯೆಯ ಡೆವಲಪರ್‌ಗಳು ಮತ್ತು ಚಾಟ್‌ಜಿಪಿಟಿ ಪ್ಲಸ್ ಬಳಕೆದಾರರಿಗೆ ಆದ್ಯತೆ ನೀಡಲಿದ್ದೇವೆ. ಕಾಲಾನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು OpenAI ಬ್ಲಾಗ್ ಪೋಸ್ಟ್ ಒಂದರಲ್ಲಿ ಹೇಳಿದೆ. ಕಂಪನಿಯ ಪ್ರಕಾರ, ಪ್ಲಗಿನ್​ಗಳು ಭಾಷೆಯ ಮಾದರಿಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ ಮತ್ತು ಸುರಕ್ಷತೆ ಇವುಗಳ ಮೂಲ ತತ್ವವಾಗಿದೆ. ChatGPT ಹೊಸ ಮಾಹಿತಿಯನ್ನು ಪಡೆಯಲು, ಲೆಕ್ಕಾಚಾರ ಮಾಡಲು ಅಥವಾ ಥರ್ಡ್ ಪಾರ್ಟಿ ಸೇವೆಗಳನ್ನು ಬಳಸಲು ಇವು ಸಹಾಯ ಮಾಡುತ್ತವೆ.

ಪ್ಲಗಿನ್‌ಗಳು ಭಾಷಾ ಮಾದರಿಗಳಿಗೆ ಕಣ್ಣು ಮತ್ತು ಕಿವಿಗಳಾಗಬಹುದು. ತರಬೇತಿ ಡೇಟಾದಲ್ಲಿ ಸೇರಿಸಲು ತೀರಾ ಇತ್ತೀಚಿನ, ತೀರಾ ವೈಯಕ್ತಿಕ ಅಥವಾ ತುಂಬಾ ನಿರ್ದಿಷ್ಟವಾದ ಮಾಹಿತಿಗೆ ಇವು ಪ್ರವೇಶ ನೀಡುತ್ತವೆ. ಸ್ಪಷ್ಟವಾದ ವಿನಂತಿಗೆ ಪ್ರತಿಕ್ರಿಯೆಯಾಗಿ ಬಳಕೆದಾರರ ಪರವಾಗಿ ಸುರಕ್ಷಿತ, ನಿರ್ಬಂಧಿತ ಕ್ರಿಯೆಗಳನ್ನು ನಿರ್ವಹಿಸಲು ಪ್ಲಗಿನ್‌ಗಳು ಭಾಷಾ ಮಾದರಿಗಳನ್ನು ಸಕ್ರಿಯಗೊಳಿಸಬಹುದು. ಇದು ಸಿಸ್ಟಮ್‌ನ ಒಟ್ಟಾರೆ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಚಾಟ್‌ಜಿಪಿಟಿಗಾಗಿ ಡೆವಲಪರ್‌ಗಳು ತಮ್ಮದೇ ಆದ ಪ್ಲಗ್‌ಇನ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಇದು ಹೊರತರಲಿದೆ ಎಂದು OpenAI ಉಲ್ಲೇಖಿಸಿದೆ.

ಚಾಟ್​ ಜಿಪಿಟಿ ಎಂದರೇನು? : ಚಾಟ್‌ಜಿಪಿಟಿ ಎಂಬುದು ಓಪನ್‌ಎಐ ಅಭಿವೃದ್ಧಿಪಡಿಸಿದ ಪ್ರಬಲ ಕೃತಕ ಬುದ್ಧಿಮತ್ತೆ ಬಾಟ್ ಆಗಿದೆ. ಇದರ ತಯಾರಕರಾದ ಆಲ್ಟ್‌ಮ್ಯಾನ್, ಮಸ್ಕ್ ಮತ್ತು ಇತರ ಸಿಲಿಕಾನ್ ವ್ಯಾಲಿ ಹೂಡಿಕೆದಾರರು 2015 ರಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಲಾಭರಹಿತ ಸಂಸ್ಥೆಯನ್ನು ರಚಿಸಿದರು ಮತ್ತು ಅದನ್ನು 30 ನೇ ನವೆಂಬರ್ 2022 ರಂದು ಜಗತ್ತಿಗೆ ಅನಾವರಣಗೊಳಿಸಿದರು. ChatGPT ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಆಗಿದೆ. ಇದು ಶಕ್ತಿಯುತವಾದ AI ಬಾಟ್ ಆಗಿದ್ದು ಅದು ಮಾನವನ ಮಾತನ್ನು ಅರ್ಥಮಾಡಿಕೊಳ್ಳಲು ಮತ್ತು ಮನುಷ್ಯರಿಗೆ ಸುಲಭವಾಗಿ ಅರ್ಥವಾಗುವ ಆಳವಾದ ಬರವಣಿಗೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ChatGPT ಯಲ್ಲಿನ ಪ್ರಶ್ನೆ-ಉತ್ತರ ಸ್ವರೂಪದ ಬಳಕೆಯು ಅದನ್ನು ಆಸಕ್ತಿದಾಯಕವಾಗಿಸುತ್ತದೆ.

ನಿಮ್ಮ ಪ್ರಶ್ನೆಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳ ಪಟ್ಟಿಯನ್ನು ನೀಡುವ ಮೂಲಕ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು Google ಸರ್ಚ್ ಎಂಜಿನ್ ನಿಮಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ, ChatGPT ನಿಮಗೆ ಸರಳವಾಗಿ ನೇರವಾಗಿ ಉತ್ತರಗಳನ್ನೇ ನೀಡುತ್ತದೆ. ಇದು ಮಾರ್ಗದರ್ಶಿ ಪುಸ್ತಕವನ್ನು ಬಳಸಿದಂತೆ.

ಇದನ್ನೂ ಓದಿ : ಕಿಂಡಲ್ ನಿಯತಕಾಲಿಕೆ, ವೃತ್ತಪತ್ರಿಕೆ ಸಬ್​ಸ್ಕ್ರಿಪ್ಷನ್ ಸ್ಥಗಿತಗೊಳಿಸಿದ ಅಮೆಜಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.