ETV Bharat / science-and-technology

iOS ಬಳಕೆದಾರರಿಗೆ ChatGPT ಆ್ಯಪ್​ ಬಿಡುಗಡೆ ಮಾಡಿದ OpenAI

ಓಪನ್ ಎಐ iOS ಬಳಕೆದಾರರಿಗಾಗಿ ChatGPT ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದರಿಂದ ಬಳಕೆದಾರರು AI ಚಾಟ್‌ಬಾಟ್ ಅನ್ನು ಬಳಸಬಹುದು.

OpenAI launches ChatGPT app for iOS
OpenAI launches ChatGPT app for iOS
author img

By

Published : May 19, 2023, 3:59 PM IST

ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ) : iOS ಬಳಕೆದಾರರಿಗಾಗಿ ಓಪನ್ ಎಐ ತನ್ನ ಚಾಟ್​ ಜಿಪಿಟಿ ಅಪ್ಲಿಕೇಶನ್​ ಅನ್ನು ಬಿಡುಗಡೆ ಮಾಡಿದೆ. ಹೀಗಾಗಿ ಆ್ಯಪಲ್ ಸಾಧನಗಳ ಬಳಕೆದಾರರು ಇನ್ನು ಮುಂದೆ ಸುಲಭವಾಗಿ AI chatbot ಅನ್ನು ಬಳಸಬಹುದು. ಆ್ಯಂಡ್ರಾಯ್ಡ್​ ಬಳಕೆದಾರರಿಗಾಗಿ ಕೂಡ ಶೀಘ್ರ ಆ್ಯಪ್ ಬರಲಿದೆ ಎಂದು ಓಪನ್ ಎಐ ಹೇಳಿದೆ. "ಸದ್ಯ ಚಾಟ್​ ಜಿಪಿಟಿ ಉಚಿತವಾಗಿ ಬಳಕೆಗೆ ಲಭ್ಯವಾಗಲಿದೆ ಮತ್ತು ನಿಮ್ಮ ವಿವಿಧ ಡಿವೈಸ್​ಗಳಾದ್ಯಂತ ಹಿಸ್ಟರಿಯನ್ನು ಸಿಂಕ್ ಮಾಡಲಿದೆ. ಇದರಲ್ಲಿ ನಮ್ಮ ಓಪನ್ ಸೋರ್ಸ್​ ಸ್ಪೀಚ್ ರಿಕಗ್ನಿಶನ್ ಸಿಸ್ಟಮ್ ಆಗಿರುವ ವಿಸ್ಪರ್ (Whisper) ಕೂಡ ಇರಲಿದ್ದು, ವಾಯ್ಸ್​ ಇನ್​ಪುಟ್​ಗೆ ಸಹಾಯವಾಗಲಿದೆ. ಚಾಟ್​ ಜಿಪಿಟಿ ಪ್ಲಸ್ ಚಂದಾದಾರರು GPT-4 ನ ಎಲ್ಲ ವೈಶಿಷ್ಟ್ಯಗಳನ್ನು iOS ಬಳಕೆದಾರರು ಪಡೆಯಲಿದ್ದಾರೆ." ಎಂದು ಬ್ಲಾಗ್ ಪೋಸ್ಟ್​ ಒಂದರಲ್ಲಿ ಓಪನ್ ಎಐ ಹೇಳಿದೆ.

ಮೈಕ್ರೋಸಾಫ್ಟ್ ಒಡೆತನದ ಸಂಸ್ಥೆಯಾಗಿರುವ ಓಪನ್ ಎಐ, ಯುಎಸ್‌ನಲ್ಲಿ ಅಪ್ಲಿಕೇಶನ್‌ನ ರೋಲ್‌ಔಟ್ ಅನ್ನು ಪ್ರಾರಂಭಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಇದು ಇನ್ನೂ ಹೆಚ್ಚಿನ ದೇಶಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ. ಇದಲ್ಲದೇ ಐಒಎಸ್‌ಗಾಗಿ ಚಾಟ್‌ಜಿಪಿಟಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದರೊಂದಿಗೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಜನರನ್ನು ಸಶಕ್ತಗೊಳಿಸುವ ಉಪಯುಕ್ತ ಸಾಧನಗಳಾಗಿ ಪರಿವರ್ತಿಸುವ ಮೂಲಕ ತನ್ನ ಮಿಷನ್‌ನತ್ತ ಮತ್ತೊಂದು ಹೆಜ್ಜೆ ಇಡುತ್ತಿದೆ ಎಂದು ಓಪನ್‌ಎಐ ಹೇಳಿದೆ.

ಏಪ್ರಿಲ್‌ನಲ್ಲಿ ಓಪನ್ ಎಐ ಹೊಸ ಅಪ್‌ಡೇಟ್ ಒಂದನ್ನು ಹೊರತಂದಿದೆ. ಇದು ಬಳಕೆದಾರರಿಗೆ ತಮ್ಮ ಚಾಟ್ ಹಿಸ್ಟರಿಯನ್ನು ತನ್ನ AI ಚಾಟ್‌ಬಾಟ್ ಚಾಟ್​ ಜಿಪಿಟಿಯಲ್ಲಿ ಆಫ್ ಮಾಡಲು ಅವಕಾಶ ನೀಡುತ್ತದೆ. ಚಾಟ್ ಹಿಸ್ಟರಿ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಾಗ ಅದು ಬಳಕೆದಾರರ ಹಿಂದಿನ ಚಾಟ್​ ಅನ್ನು ಸೇವ್ ಮಾಡಿಕೊಳ್ಳುವುದಿಲ್ಲ ಮತ್ತು ಅದರ ಮಾದರಿಗಳನ್ನು ತರಬೇತಿ ಮತ್ತು ಸುಧಾರಣೆಗೆ ಬಳಸುವುದಿಲ್ಲ ಎಂದು ಓಪನ್ ಎಐ ಹೇಳಿದೆ.

ಚಾಟ್‌ಜಿಪಿಟಿಯಲ್ಲಿ ಚಾಟ್ ಹಿಸ್ಟರಿಯನ್ನು ಆಫ್ ಮಾಡುವ ಆಯ್ಕೆಯನ್ನು ನಾವು ಪರಿಚಯಿಸಿದ್ದೇವೆ. ಚಾಟ್ ಹಿಸ್ಟರಿ ನಿಷ್ಕ್ರಿಯಗೊಳಿಸಿದಾಗ ಪ್ರಾರಂಭವಾಗುವ ಸಂಭಾಷಣೆಗಳನ್ನು ನಮ್ಮ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಸುಧಾರಿಸಲು ಬಳಸಲಾಗುವುದಿಲ್ಲ ಮತ್ತು ಹಿಸ್ಟರಿಯ ಸೈಡ್‌ಬಾರ್‌ನಲ್ಲಿ ಕಾಣಿಸುವುದಿಲ್ಲ ಎಂದು ಓಪನ್ ಎಐ ಬ್ಲಾಗ್​ ಪೋಸ್ಟ್​ನಲ್ಲಿ ಮಾಹಿತಿ ನೀಡಿದೆ.

ಓಪನ್ ಎಐ ಎಂಬುದು ಎಲೋನ್ ಮಸ್ಕ್, ಸ್ಯಾಮ್ ಆಲ್ಟ್‌ಮನ್, ಗ್ರೆಗ್ ಬ್ರಾಕ್‌ಮ್ಯಾನ್ ಮತ್ತು ಇಲ್ಯಾ ಸುಟ್ಸ್‌ಕೇವರ್‌ರಿಂದ 2015 ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಪ್ರಯೋಗಾಲಯವಾಗಿದೆ. ಓಪನ್ ಎಐ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಮಾನವೀಯತೆಗೆ ಸುರಕ್ಷಿತ ಮತ್ತು ಪ್ರಯೋಜನಕಾರಿಯಾದ ರೀತಿಯಲ್ಲಿ ಕೃತಕ ಸಾಮಾನ್ಯ ಬುದ್ಧಿಮತ್ತೆ (artificial general intelligence -AGI) ಯನ್ನು ಸಂಶೋಧಿಸಲು ಮತ್ತು ಅಭಿವೃದ್ಧಿಪಡಿಸಲು ಮೀಸಲಾಗಿರುತ್ತದೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯು ಸಮಸ್ತ ಮಾನವ ಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಓಪನ್ ಎಐ ಉದ್ದೇಶವಾಗಿದೆ.

ಇದನ್ನೂ ಓದಿ : ಗೇಮಿಂಗ್ ಪ್ರಿಯರಿಗೆ ಖುಷಿ ಸುದ್ದಿ: ಮತ್ತೆ ಬಂದಿದೆ ಪಬ್​ಜಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.