ಸ್ಯಾನ್ ಪ್ರಾನ್ಸಿಸ್ಕೋ: ಮಿಲಿಟರಿ ಮತ್ತು ಯುದ್ದದ ಚಟುವಟಿಕೆಗಳಿಗಾಗಿ ಎಐ ತಂತ್ರಜ್ಞಾನದ ಅಪ್ಲಿಕೇಷನ್ ಬಳಕೆಗೆ ಓಪನ್ ಎಐ ಅನುಮತಿಸಿದೆ. ಈ ಹಿಂದೆ ಈ ಉದ್ದೇಶಗಳಿಗೆ ಎಐ ಬಳಕೆ ನಿಷೇಧಿಸಲಾಗಿತ್ತು. ಇದೀಗ ಈ ಭಾಷೆಯನ್ನು ತೆಗೆದು ಹಾಕಿದೆ, ಇದೀಗ ಮುಕ್ತವಾಗಿ ಮಿಲಿಟರಿ ಬಳಕೆಗಳಿಗೆ ಮುಕ್ತವಾಗಿದೆ ಎಂದು ಓಪನ್ ಎಐ ತಿಳಿಸಿದೆ.
ಓಪನ್ ಎಐ ನಿಯಮದಲ್ಲಿದ್ದ ಮಿಲಿಟರಿ ಮತ್ತು ಯುದ್ದ ಅಪ್ಲಿಕೇಷನ್ ಅನ್ನು ಷರತ್ತುಗಳನ್ನು ತೆಗೆದು ಹಾಕಿ ಇದೀಗ ಹೊಸ ಪಾಲಿಸಿ ಅಪ್ಡೇಟ್ ಮಾಡಿದೆ. ಈ ಬದಲಾವಣೆಯು ಗಮನಾರ್ಹವಾಗಿದ್ದು, ಇದು ಯುದ್ದ ಚಟುವಟಿಕೆಯಲ್ಲಿ ಮಿಲಿಟರಿ ಒಳಗೊಳ್ಳುವಿಕೆಯನ್ನು ಪರಿಗಣಿಸಿದೆ. ಅಲ್ಲದೇ ಮಿಲಿಟರಿ ಸಹಯೋಗ ಅವಕಾಶಗಳಿಗೆ ದಾರಿ ಒದಗಿಸಿದೆ. ಸಂಸ್ಥೆಯು ಈ ಹಿಂದೆ ತಮ್ಮ ಉತ್ಪನ್ನಗಳನ್ನು ಮಿಲಿಟರಿ ಮತ್ತು ಯುದ್ಧದ ಉದ್ದೇಶಗಳಿಗಾಗಿ ಬಳಸುವುದರ ವಿರುದ್ಧ ಸ್ಪಷ್ಟ ನಿಲುವು ಹೊಂದಿತ್ತು. ಇದೀಗ ತನ್ನ ನೀತಿಯನ್ನು ಮಾರ್ಪಡಿಸಿದೆ. ಇದೀಗ ಭಾಷೆಯನ್ನು ತೆಗೆದು ಹಾಕುವ ಮೂಲಕ ಅವಕಾಶ ನೀಡಿದ್ದು, ಇದು ಸಂಸ್ಥೆಯ ನೀತಿಯನ್ನು ಪರಿಶೀಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಯಾಮ್ ಆಲ್ಟಮನ್ ಸಂಸ್ಥೆ ಚಾಟ್ ಜಿಪಿಟಿಯ ವಕ್ತಾರ, ಸಾರ್ವತ್ರಿಕ ತತ್ವಗಳನ್ನು ಸುಲಭವಾಗಿ ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವಿಶೇಷವಾಗಿ ನಮ್ಮ ಸಾಧನವೂ ಜಾಗತಿಕವಾಗಿ ನಿತ್ಯ ಬಳಕೆಯಾಗುತ್ತಿದೆ. ಅವರೇ ಜಿಪಿಟಿಯನ್ನು ನಿರ್ಮಿಸಬಹುದಾಗಿದೆ ಎಂದರು.
ನಮ್ಮ ಸರಳ ತತ್ವ ಎಂದರೆ ಯಾರಿಗೂ ಹಾನಿ ಮಾಡಬೇಡಿ ಎಂಬುದು. ಇದನ್ನು ವಿಶಾಲ ರೂಪದಲ್ಲಿ ಬಳಕೆ ಮಾಡಲಾಗುತ್ತಿದ್ದು, ಸುಲಭವಾಗಿ ಗ್ರಹಿಸಲಾಗಿದ್ದು, ಹಲವು ವಿಷಯದಲ್ಲಿ ಬಳಕೆ ಮಾಡಲಾಗಿದೆ. ನಾವು ನಿರ್ದಿಷ್ಟ ಶಸ್ತ್ರಾಸ್ತ್ರ ಮತ್ತು ಇತರ ವಿಚಾರದಲ್ಲಿ ಸ್ಪಷ್ಟ ಉದಾಹರಣೆಯನ್ನು ಉಲ್ಲೇಖಿಸಿದ್ದೇವೆ.
ವರದಿಗಳ ಪ್ರಕಾರ ಅನೇಕ ಕೊಲ್ಲುವಿಕೆ ಟಾಸ್ಕ್ ಚಾಟ್ ಜಿಪಿಟಿಯಂತಹ ಎಲ್ಎಲ್ಎಂ (LLM) ಅನ್ನು ಹೆಚ್ಚಿಸಬಹುದು. ಓಪನ್ ಎಐ ಪ್ಲಾಟ್ಫಾರ್ಮ್ ಮೂಲಸೌಕರ್ಯದ ದಶಕಗಳ ದಾಖಲಾತಿಗಳನ್ನು ಸಾರಾಂಶ ಪಡೆಯಲು ಸೇನಾ ಇಂಜಿನಿಯರ್ಸ್ಗಳಿಗೆ ಹೆಚ್ಚಿನ ಬಳಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಓಪನ್ ಎಐ ಮಿಲಿಟರಿ ಬಳಕೆಗೆ ತಮ್ಮ ನಿಲುವಲ್ಲಿ ಮೃದುಗೊಳಿಸಿದೆ. ಆದರೆ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಬಳಕೆಗೆ ಎಐ ನಿಷೇಧ ಮುಂದುವರೆದಿದೆ. ಮಿಲಿಟರಿ ಮತ್ತಯ ಯುದ್ದದ ಭಾಷೆಯನ್ನು ಇದೀಗ ಓಪನ್ ಎಐ ತೆಗೆದು ಹಾಕುವುದರಿತೆ ಇತರೆ ಮಿಲಿಟರಿಗಳೊಂದಿಗೆ ಅವಕಾಶವನ್ನು ಒದಗಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಬಹುಕಾಲದ ಗೆಳೆಯನ ವರಿಸಿದ ಓಪನ್ಎಐ ಸಿಇಒ ಸ್ಯಾಮ್ ಆಲ್ಟಮನ್