ಬೆಂಗಳೂರು: ಭಾರತದಲ್ಲಿ ಒನ್ ಪ್ಲಸ್ ಬಳಕೆದಾರರಿಗೆ 5ಜಿ ತಂತ್ರಜ್ಞಾನ ವ್ಯವಸ್ಥೆಯನ್ನು ತರಲು ಯಶಸ್ವಿಯಾಗಿ ಸಜ್ಜಾಗಿರುವುದಾಗಿ ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್ (OnePlus) ಹೇಳಿದೆ. ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಸಾಧನಗಳು ಸಹ ವಿಐ (Vi) ಸೇರಿದಂತೆ ಅರ್ಹ ನೆಟ್‌ವರ್ಕ್‌ಗಳೊಂದಿಗೆ 5ಜಿ ಸಿದ್ಧವಾಗಿದೆ ಎಂದು ದೃಢಪಡಿಸಿದೆ.
5ಜಿಯ ಸಾಮರ್ಥ್ಯವನ್ನು ಬಹಳ ಮುಂಚೆಯೇ ಒನ್ ಪ್ಲಸ್ ಗುರುತಿಸಿದೆ. 2016ರಲ್ಲೇ 5ಜಿ ಸಂಶೋಧನೆಯ ಪ್ರಯತ್ನಗಳನ್ನು ಪ್ರಾರಂಭಿಸಿತ್ತು. ಜಾಗತಿಕವಾಗಿ ಬಳಕೆದಾರರಿಗೆ 5ಜಿ ಸೇವೆ ನೀಡಿದ ಟೆಕ್ ಕಂಪನಿಗಳಲ್ಲಿ ಒನ್ ಪ್ಲಸ್ ಕೂಡ ಒಂದಾಗಿದೆ. ಜಗತ್ತಿನಾದ್ಯಂತ ಗ್ರಾಹಕರಿಗೆ 5ಜಿ ಸೇವೆ ಒದಗಿಸುವಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.
ಈಗ ಭಾರತವು 5ಜಿಯತ್ತ ಸಾಗುತ್ತಿರುವಾಗ ಒನ್ಪ್ಲಸ್ ಬಳಕೆದಾರರು ಸಹ ಉತ್ತಮ ಸಾಧನಗಳೊಂದಿಗೆ ತಡೆ ರಹಿತ ಹಾಗೂ ವೇಗದ ಇಂಟರ್ನೆಟ್ ಅನುಭವವನ್ನು ಆನಂದಿಸುತ್ತಾರೆ. ಜೊತೆಗೆ ತಮ್ಮ ದೈನಂದಿನ ಸ್ಮಾರ್ಟ್‌ಫೋನ್‌ಗಳ ಬಳಕೆಗಿಂತ ಹಾಗೂ ತಾವು ಊಹಿಸಿದ್ದಕ್ಕಿಂತ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯುತ್ತಾರೆ ಎಂದು ಒನ್ ಪ್ಲಸ್ನ ಭಾರತದ ಸಿಇಒ ನವನೀತ್ ನಕ್ರಾ ತಿಳಿಸಿದ್ದಾರೆ.
ಒನ್ ಪ್ಲಸ್8 ಸರಣಿಯೊಂದಿಗೆ 2020ರಲ್ಲಿ ಭಾರತದಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಒನ್ ಪ್ಲಸ್ನ ಎಲ್ಲ ಸ್ಮಾರ್ಟ್‌ಫೋನ್‌ಗಳು 5ಜಿ ಸಿದ್ಧವಾಗಿವೆ. ಇದರಲ್ಲಿ OnePlus Nord CE 2 Lite 5G ಬ್ರ್ಯಾಂಡ್ ಅತ್ಯಂತ ಕೈಗೆಟುಕುವ ಸಾಧನವಾಗಿದೆ. ಭಾರತದಲ್ಲಿ 19,999 ರೂಪಾಯಿಗೆ ಈ ಸ್ಮಾರ್ಟ್‌ಫೋನ್ ಸಿಗಲಿದೆ. ಈ ವರ್ಷ ಆನ್ಲೈನ್ನಲ್ಲಿ 20,000 ರೂ. ಹಾಗೂ 30,000 ರೂ. ಬೆಲೆಗೆ ಲಭ್ಯವಿರುವ ಪ್ರಮುಖ 5G ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಒನ್ ಪ್ಲಸ್ ಹೊರಹೊಮ್ಮಿದೆ.
ಇದನ್ನೂ ಓದಿ: ವಿಡಿಯೋ ವೀಕ್ಷಣೆ ಉತ್ತಮವಾಗಿಸಲು 2 ಹೊಸ ವೈಶಿಷ್ಟ್ಯತೆ ಪರಿಚಯಿಸಿದ ಟ್ವಿಟರ್