ETV Bharat / science-and-technology

Netflixಗೆ 59 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; $8.2 ಶತಕೋಟಿ ಆದಾಯ - ದೇಶಗಳಲ್ಲಿ ಪೇಡ್ ಶೇರಿಂಗ್​ ವ್ಯವಸ್ಥೆ

ಜನಪ್ರಿಯ ಓಟಿಟಿ ಪ್ಲಾಟ್​ ಫಾರ್ಮ್ ನೆಟ್​ಫ್ಲಿಕ್ಸ್​​ ಈ ವರ್ಷದ 2ನೇ ತ್ರೈಮಾಸಿಕದಲ್ಲಿ 5.9 ಮಿಲಿಯನ್ ಹೊಸ ಗ್ರಾಹಕರನ್ನು ಗಳಿಸಿಕೊಂಡಿದೆ.

Netflix adds 5.9 mn paid subscribers in Q2, revenue at $8.2 bn

author img

By

Published : Jul 20, 2023, 12:11 PM IST

ನವದೆಹಲಿ : ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್​ ಫಾರ್ಮ್ ನೆಟ್‌ಫ್ಲಿಕ್ಸ್ ಎರಡನೇ ತ್ರೈಮಾಸಿಕದಲ್ಲಿ (ಕ್ಯೂ 2) ಜಾಗತಿಕವಾಗಿ 5.9 ಮಿಲಿಯನ್ (59 ಲಕ್ಷ) ಚಂದಾದಾರರನ್ನು ಹೊಸದಾಗಿ ಸೇರಿಸಿಕೊಂಡಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಯುಎಸ್ ಮತ್ತು ಕೆನಡಾದಿಂದ 1.17 ಮಿಲಿಯನ್ ಹೊಸ ಗ್ರಾಹಕರು ನೆಟ್​ಫ್ಲಿಕ್ಸ್​​ಗೆ ಸೇರ್ಪಡೆಯಾಗಿದ್ದಾರೆ.

ಮೇ ತಿಂಗಳಲ್ಲಿ ಕಂಪನಿಯು 100 ಕ್ಕೂ ಹೆಚ್ಚು ದೇಶಗಳಲ್ಲಿ ಪೇಡ್ ಶೇರಿಂಗ್​ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಪೇಡ್​ ಶೇರಿಂಗ್​​ನಿಂದಲೇ ನೆಟ್​ಫ್ಲಿಕ್ಸ್​ ತನ್ನ ಶೇಕಡಾ 80 ರಷ್ಟು ಆದಾಯ ಗಳಿಸುತ್ತಿದೆ. "ಕ್ಯಾನ್ಸಲೇಶನ್​ಗಳಿಗಿಂತ ಸೈನ್​ ಅಪ್​ಗಳು ಹೆಚ್ಚಾಗುತ್ತಿರುವ ಮಧ್ಯೆ ಪ್ರತಿ ಪ್ರದೇಶದಲ್ಲಿ ಆದಾಯವು ಈಗ ಪ್ರಿ-ಲಾಂಚ್​ ಅವಧಿಗಿಂತ ಹೆಚ್ಚಾಗಿದೆ. ಪಾವತಿಸಿದ ನಿವ್ವಳ ಸೇರ್ಪಡೆಗಳು Q2 ನಲ್ಲಿ 5.9 ಮಿಲಿಯನ್ ಆಗಿತ್ತು" ಎಂದು ನೆಟ್​ಫ್ಲಿಕ್ಸ್​ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಪಾಸ್‌ವರ್ಡ್ ಶೇರಿಂಗ್​ ನಿರ್ಬಂಧ ವ್ಯವಸ್ಥೆಯು ಅಂದುಕೊಂಡಂತೆ ಕೆಲಸ ಮಾಡುತ್ತಿದೆ ಎಂದು ಕಂಪನಿ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಆದಾಯವು $8.2 ಬಿಲಿಯನ್ ಆಗಿತ್ತು (ವರ್ಷದಿಂದ ವರ್ಷಕ್ಕೆ 3 ಶೇಕಡಾ ಹೆಚ್ಚಳ) ಮತ್ತು ಕಾರ್ಯಾಚರಣೆ ಲಾಭವು $1.8 ಬಿಲಿಯನ್ ಆಗಿತ್ತು. "ಪೇಡ್​ ಶೇರಿಂಗ್‌ನ ಸಂಪೂರ್ಣ ಪ್ರಯೋಜನಗಳು ಮತ್ತು ನಮ್ಮ ಜಾಹೀರಾತು-ಬೆಂಬಲಿತ ಯೋಜನೆಯಲ್ಲಿ ಮುಂದುವರಿದ ಸ್ಥಿರ ಬೆಳವಣಿಗೆಗಳ ಕಾರಣದಿಂದ 2023 ರ ದ್ವಿತೀಯಾರ್ಧದಲ್ಲಿ ಆದಾಯದ ಬೆಳವಣಿಗೆ ವೇಗಗೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ನೆಟ್‌ಫ್ಲಿಕ್ಸ್ ಹೇಳಿದೆ.

ಮೂರನೇ ತ್ರೈಮಾಸಿಕದಲ್ಲಿ $ 8.5 ಶತಕೋಟಿ ಆದಾಯ ಬರಲಿದೆ ಎಂದು ಕಂಪನಿ ನಿರೀಕ್ಷಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 7 ರಷ್ಟು ಹೆಚ್ಚಾಗಲಿದೆ. ಇನ್ನು ಮೂರನೇ ತ್ರೈಮಾಸಿಕದಲ್ಲಿ ಪಾವತಿಸಿದ ನಿವ್ವಳ ಸೇರ್ಪಡೆಗಳು ಎರಡನೇ ತ್ರೈಮಾಸಿಕದ ಪಾವತಿಸಿದ ನಿವ್ವಳ ಸೇರ್ಪಡೆಗಳಿಗೆ ಸಮನಾಗಿರಲಿವೆ ಎಂದು ಕಂಪನಿ ಅಂದಾಜಿಸಿದೆ. ಪೇಡ್ ಶೇರಿಂಗ್ ಮತ್ತು ಜಾಹೀರಾತುಗಳಂತಹ ಉಪಕ್ರಮಗಳ ಮೂಲಕ ಆದಾಯವನ್ನು ಸುಧಾರಿಸಲು ಕೆಲಸ ಮಾಡಲಾಗುತ್ತಿದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ.

ನೆಟ್‌ಫ್ಲಿಕ್ಸ್ ಒಂದು ಜನಪ್ರಿಯ ಸ್ಟ್ರೀಮಿಂಗ್ ಸೇವೆಯಾಗಿದ್ದು ಇದು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಒರಿಜಿನಲ್​ ಕಂಟೆಂಟ್​ಗಳನ್ನು ತನ್ನ ಪ್ಲಾಟ್​ಫಾರ್ಮ್​ನಲ್ಲಿ ಹೊಂದಿದೆ. ಇದು ಸ್ಮಾರ್ಟ್ ಟಿವಿಗಳಲ್ಲಿ, ಸ್ಟ್ರೀಮಿಂಗ್ ಸಾಧನಗಳ ಮೂಲಕ ಮತ್ತು iOS ಅಥವಾ Android ಗಾಗಿ ಅಧಿಕೃತ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿಯೂ ಲಭ್ಯವಿದೆ.

ನೆಟ್‌ಫ್ಲಿಕ್ಸ್ 1997 ರಲ್ಲಿ ಡಿವಿಡಿಗಳನ್ನು ಇ ಮೇಲ್ ಮೂಲಕ ಬಾಡಿಗೆಗೆ ನೀಡುವ ಪರಿಕಲ್ಪನೆಯ ಪ್ರವರ್ತಕ ಕಂಪನಿಯಾಗಿ ಪ್ರಾರಂಭವಾಯಿತು. ಆರ್ಡರ್ ಮಾಡಿದ ಪ್ರತಿ ಡಿವಿಡಿಯಿಂದ ಚಾರ್ಜ್ ಮಾಡುವ ಬದಲು ಫ್ಲಾಟ್ ಮಾಸಿಕ ಶುಲ್ಕವನ್ನು ವಿಧಿಸುವ ನವೀನ ಪರಿಕಲ್ಪನೆಯನ್ನು ಇದು ರೂಪಿಸಿತು. ಪರಿಣಾಮವಾಗಿ ವೀಡಿಯೊ ಡಿವಿಡಿ ಬಾಡಿಗೆ ನೀಡುವ ಅಂಗಡಿಗಳು ಮುಚ್ಚಲಾರಂಭಿಸಿದವು. 2005 ರ ಹೊತ್ತಿಗೆ, ನೆಟ್‌ಫ್ಲಿಕ್ಸ್ 4.2 ಮಿಲಿಯನ್ DVD-ಬೈ-ಮೇಲ್ ಬಾಡಿಗೆ ಚಂದಾದಾರರನ್ನು ಹೊಂದಿತ್ತು.

ಇದನ್ನೂ ಓದಿ : Google Play Store ಆ್ಯಪ್​ಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ; ಬಿಗಿ ನಿಯಮಗಳೇ ಕಾರಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.