ವಾಷಿಂಗ್ಟನ್: ಮಂಗಳನ ಅಂಗಳದಲ್ಲಿರುವ ನಾಸಾದ ಇಂಜೆನ್ಯೂಟಿ ಹೆಲಿಕ್ಯಾಪ್ಟರ್, ಕೆಂಪು ಗ್ರಹದಲ್ಲಿನ ಸೂರ್ಯಾಸ್ತವನ್ನು ಸೆರೆ ಹಿಡಿದಿದೆ. ತನ್ನ 45ನೇ ಹಾರಾಟದಲ್ಲಿ ಈ ಮನಮೋಹಕ ದೃಶ್ಯವನ್ನು ಸೆರೆ ಹಿಡಿದಿದೆ. ಲಿಟಲ್ ಚಾಪರ್ನ 45 ಫ್ಲೈಟ್ನಲ್ಲಿ ಈ ಅದ್ಭುತ ದೃಶ್ಯವನ್ನು ಫೆ. 22ರಂದು ಸೆರೆಹಿಡಿಯಲಾಗಿದೆ ಎಂದು ಸ್ಪೆಸ್.ಕಾಮ್ ವರದಿ ಮಾಡಿದೆ. ಈ ಚಿತ್ರದಲ್ಲಿ ದೂರದ ಬೆಟ್ಟಗಳ ಮಧ್ಯೆ ಸೂರ್ಯ ಅಸ್ತಗೊಳ್ಳುತ್ತಿರುವುದನ್ನು ಕಾಣ ಬಹುದಾಗಿದೆ.
ಚಿತ್ರದಲ್ಲಿ ಸೂರ್ಯನ ಕಿರಣಗಳು ಹೊಳೆಯುತ್ತಿರುವುದನ್ನು ಕಾಣಬಹುದಾಗಿದೆ. ಇಂಜೆನ್ಯೂಟಿ ಹೆಲಿಕಾಪ್ಟರ್ 2021ರ ಫೆಬ್ರವರಿ 18 ರಂದು ಜೆಜೆರೊ ಕ್ರೇಟರ್‌ನ ಮಹಡಿಯಲ್ಲಿ ನಾಸಾದ ಪರ್ಸೆವೆರೆನ್ಸ್ ರೋವರ್‌ನೊಂದಿಗೆ ಮಂಗಳನಲ್ಲಿ ಇಳಿಯಿತು. ಇದು ಭೂಮಿಯ ಆಚೆಗೆ ಚಾಲಿತ ಹಾರಾಟವನ್ನು ಮಾಡಿದ ಮೊದಲ ರೋಟರ್‌ಕ್ರಾಫ್ಟ್ ಆಗಿದೆ.
ಸಾಮರ್ಥ್ಯ ಪ್ರದರ್ಶಿನ ಇಂಜೆನ್ಯೂಟಿ: ಈ ಇಂಜೆನ್ಯೂಟಿ ಹೆಲಿಕ್ಯಾಪ್ಟರ್ ತೂಕ 1.8 ಇದ್ದು, 49 ಸೆ.ಮೀ ಎತ್ತರವನ್ನು ಇದು ಹೊಂದಿದೆ. ಮಂಗಳನಲ್ಲಿರುವ ತೆಳುವಾದ ವಾತಾವರಣ ಇದೆ. ಈ ಹಿನ್ನಲೆ ಪ್ರಯೋಗಗಳು ಕಷ್ಟ ಸಾಧ್ಯ ಎನ್ನಲಾಗಿತ್ತು. ಆದರೆ, ಈ ನಡುವೆಯೂ ಈ ವೈಮಾನಿಕ ಪರಿಶೋಧನೆ ಸಾಧ್ಯ ಎಂದು ಇದು ಸಾಬೀತುಪಡಿಸಿದೆ. ಈ ಇಂಜೆನ್ಯೂಟಿ ಕೆಲವೇ ಪರೀಕ್ಷಾ ಹಾರಾಟಗಳೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಮಂಗಳನ ಗ್ರಹಕ್ಕೆ ಇಂಟಿನ್ಯೂಟಿ ಕಳುಹಿಸುವ ಮುನ್ನ ಮಂಗಳನ ವಾತಾವರಣದಲ್ಲಿರುವ ಕೃತಕ ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೃಷ್ಟಿಸಿ, ಅದರ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಇದು ನಾಸಾದ ನಿರೀಕ್ಷೆಗಳನ್ನು ಮೀರಿ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಇಂಜೆನ್ಯೂಟಿ ಈಗ ಒಟ್ಟು 46 ಬಾರಿ ಹಾರಾಟ ನಡೆಸಿದ್ದು, 10.1 ಕಿಮೀ ದೂರವನ್ನು ಸಂಗ್ರಹಿಸಿದೆ ಎಂದು ಸ್ಪೇಸ್.ಕಾಮ್ ವರದಿ ಮಾಡಿದೆ. ಫೆಬ್ರವರಿ 22 ಮತ್ತು 25 ರಂದು ಕೇವಲ ಮೂರು ದಿನಗಳ ಅಂತರದಲ್ಲಿ 45 ಮತ್ತು 46 ಹಾರಾಟ ನಡೆಸಲಾಗಿತ್ತು.
ಇಂಜೆನ್ಯೂಟಿ ಹೈ ರೆಸಲ್ಯೂಷನ್ ಕಲರ್ ಕ್ಯಾಮೆರಾ ಆಗಿದ್ದು 22 ಡಿಗ್ರಿ ಕೋನ ಹೊಂದಿದ್ದು, ಫಲಿತಾಂಶವಾಗಿ ಫೋಟೋಗಳು ನೆಲದ ಮೇಲೆಯೇ ಹೆಚ್ಚು ಕೇಂದ್ರೀಕರಿಸಿರುತ್ತವೆ. ಆಸಕ್ತಿದಾಯಕ ಭೌಗೋಳಿಕ ಲಕ್ಷಣಗಳು ಮತ್ತು ಮುಂದೆ ಸಂಭಾವ್ಯ ಅಡೆತಡೆಗಳ ಬಗ್ಗೆ ಇದು ಅಧ್ಯಯನ ನಡೆಸುತ್ತದೆ. ಅಷ್ಟೇ ಅಲ್ಲ ಮಂಗಳನಲ್ಲಿ ಆಕಾಶದ ಚೂರುಗಳನ್ನು ಸೆರೆಹಿಡಿಯುತ್ತದೆ, ಕೆಂಪು ಗ್ರಹದ ಮೇಲೆ ಸಂಪೂರ್ಣ ಹೊಸ ದೃಷ್ಟಿಕೋನವನ್ನು ನೀಡುತ್ತಿದೆ.
ಇತ್ತೀಚೆಗೆ ನಾಸಾದ ಕ್ಯೂರಿಯಾಸಿಟಿ ಕೂಡ ಮಂಗಳದಲ್ಲಿ ಸೂರ್ಯನ ಕಿರಣಗಳ ಚಿತ್ರವನ್ನು ಸೆರೆ ಹಿಡಿದಿತ್ತು. ಫೆಬ್ರವರಿ 2 ರಂದು ಸೂರ್ಯನು ಬೆಟ್ಟಗಳಿಂದ ಕೆಳಗೆ ಇಳಿಯುತ್ತಿದ್ದಂತೆ ಕಿರಣಗಳನ್ನು ಸೆರೆ ಹಿಡಿಯಲಾಗಿತ್ತು. ಇವುಗಳನ್ನು ಟ್ವಿಲೈಟ್ ಎಂಬ ಲ್ಯಾಟಿನ್ ಪದದಿಂದ ಕ್ರೆಪಸ್ಕುಲರ್ ಕಿರಣಗಳು ಎಂದು ಕರೆಯಲಾಗುತ್ತದೆ. ಮಂಗಳ ಗ್ರಹದಲ್ಲಿ ಸೂರ್ಯನ ಕಿರಣಗಳನ್ನು ಇಷ್ಟು ಸ್ಪಷ್ಟವಾಗಿ ನೋಡಿರುವುದು ಇದೇ ಮೊದಲು ಎಂದು ನಾಸಾ ತಿಳಿಸಿದೆ.
ಏನಿದು ಇಂಜೆನ್ಯೂಟಿ: ಚಿಕ್ಕ ಡ್ರೋನ್ನಂತೆ ಇರುವ ಇಂಜೆನ್ಯೂಟಿ ಎಂಬ ಹೆಸರಿನ ಹೆಲಿಕಾಪ್ಟರ್ ಅನ್ನು ನಾಸಾ ಮಂಗಳ-2020 ರೋವರ್‌ನೊಂದಿಗೆ ಮಂಗಳನ ಅಂಗಳಕ್ಕೆ ಉಡಾಯಿಸಿತು. ಫ್ಲೋರಿಡಾದ ಕೇಪ್ ಕ್ಯಾನವರೆಲ್ ಏರ್ಪೋರ್ಸ್ ಸ್ಟೇಷನ್ನಿಂದ ಇದು ಉಡಾವಣೆಗೊಂಡಿತು.
ಇದನ್ನೂ ಓದಿ: ಭೂಮಿ ಮೇಲಿನ ನೀರು ಸೂರ್ಯನಿಗಿಂತ ಹಳೆಯದು: ಅಧ್ಯಯನ