ETV Bharat / science-and-technology

ಚಂದ್ರನತ್ತ ನಾಸಾ ಮತ್ತೊಂದು ಪಯಣ; 5 ಪೇಲೋಡ್​ ಹೊತ್ತ ನೌಕೆ ಸೋಮವಾರ ಉಡಾವಣೆ - ಪೆರೆಗ್ರಿನ್ ಲ್ಯಾಂಡರ್

ನಾಸಾ ಸೋಮವಾರ 5 ಪೇಲೋಡ್​ಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಿದೆ.

NASA to kick off 2024 with sending 5 payloads to Moon on Monday

author img

By ETV Bharat Karnataka Team

Published : Jan 7, 2024, 3:45 PM IST

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಚಂದ್ರನತ್ತ ಮತ್ತೊಂದು ಬಾಹ್ಯಾಕಾಶ ನೌಕೆ ಉಡಾವಣೆ ಮಾಡುವ ಮೂಲಕ 2024ರ ಹೊಸ ವರ್ಷವನ್ನು ಆರಂಭಿಸಲಿದೆ. ಸೋಮವಾರ ಆಸ್ಟ್ರೋಬೋಟಿಕ್​ನ ಪೆರೆಗ್ರಿನ್ ಲ್ಯಾಂಡರ್ ಆಗಿರುವ, ಆಸ್ಟ್ರೋಬೋಟಿಕ್ ಪೆರೆಗ್ರಿನ್ ಮಿಷನ್ ಒನ್ ಎಂದು ಹೆಸರಿಸಲಾಗಿರುವ ಬಾಹ್ಯಾಕಾಶ ನೌಕೆಯ ಮೂಲಕ ಐದು ಪೇಲೋಡ್​ಗಳನ್ನು ಚಂದ್ರನ ಮೇಲೆ ಕಳುಹಿಸಲು ನಾಸಾ ಸಜ್ಜಾಗಿದೆ. 2018 ರಲ್ಲಿ ಪ್ರಾರಂಭವಾದ ಸಿಎಲ್​ಪಿಎಸ್​ ಉಪಕ್ರಮದ ಮೂಲಕ ನಾಸಾ ಪೇಲೋಡ್​ಗಳನ್ನು ಚಂದ್ರನ ಮೇಲೆ ಸಾಗಿಸಲು ಅರ್ಹವಾದ 14 ಕಂಪನಿಗಳ ಪೈಕಿ ಆಸ್ಟ್ರೋಬೋಟಿಕ್ ಕೂಡ ಒಂದಾಗಿದೆ.

ನಾಸಾದ ಸಿಎಲ್​ಪಿಎಸ್​ (ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್) ಉಪಕ್ರಮದ ಅಡಿಯಲ್ಲಿ ಫ್ಲೋರಿಡಾದ ಕೇಪ್ ಕೆನವೆರಾಲ್​ನಿಂದ ಯುನೈಟೆಡ್ ಲಾಂಚ್ ಅಲೈಯನ್ಸ್ ವಲ್ಕನ್ ರಾಕೆಟ್​ ಮೂಲಕ ನೌಕೆ ಉಡಾವಣೆಯಾಗಲಿದೆ.

ನಾಸಾ ಪೇಲೋಡ್​ಗಳು ಚಂದ್ರನ ಮೇಲೆ ನೀರಿನ ಅಣುಗಳನ್ನು ಪತ್ತೆಹಚ್ಚುವ, ಲ್ಯಾಂಡರ್ ಸುತ್ತಲಿನ ವಿಕಿರಣ ಮತ್ತು ಅನಿಲಗಳನ್ನು ಅಳೆಯುವ ಮತ್ತು ಚಂದ್ರನ ಬಾಹ್ಯಗೋಳವನ್ನು (ಚಂದ್ರನ ಮೇಲ್ಮೈಯಲ್ಲಿರುವ ಅನಿಲಗಳ ತೆಳುವಾದ ಪದರ) ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿವೆ. ಈ ಸಂಶೋಧನೆಗಳು ಸೌರ ವಿಕಿರಣವು ಚಂದ್ರನ ಮೇಲ್ಮೈಯೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ನಮ್ಮ ತಿಳುವಳಿಕೆಯನ್ನು ಸುಧಾರಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

2026 ರಲ್ಲಿ ಗ್ರುಯಿಥುಸೆನ್ ಡೋಮ್​ಗಳಲ್ಲಿ ಇಳಿಯಲಿರುವ ನಾಸಾದ ಲೂನಾರ್-ವಿಐಎಸ್ಇ (ಲೂನಾರ್ ವಲ್ಕನ್ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಎಕ್ಸ್​ಪ್ಲೋರರ್​) ಉಪಕರಣ ಸೂಟ್​ಗೆ ಅಗತ್ಯವಾದ ಡೇಟಾವನ್ನು ಈ ಪೇಲೋಡ್​ಗಳು ಒದಗಿಸಲಿವೆ. ಪೆರೆಗ್ರಿನ್ ಲ್ಯಾಂಡರ್ ಫೆಬ್ರವರಿ 23 ರಂದು ಚಂದ್ರನ ಹತ್ತಿರದ ಬದಿಯಲ್ಲಿರುವ ಗಟ್ಟಿಯಾದ ಲಾವಾ ಗ್ರುಯಿಥುಸೆನ್ ಗುಮ್ಮಟಗಳ ಹೊರಗಿನ ಚಂದ್ರನ ಪ್ರದೇಶವಾದ ಸೈನಸ್ ವಿಸ್ಕೋಸಿಟಾಟಿಸ್​ನಲ್ಲಿ ಇಳಿಯುವ ಗುರಿಯನ್ನು ಹೊಂದಿದೆ.

"ಈ ಕನಸು ನನಸಾಗುವುದನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಸಿಎಲ್​ಪಿಎಸ್​ ಇದು ಚಂದ್ರನ ಮೇಲೆ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಪೇಲೋಡ್​ಗಳನ್ನು ಕಳುಹಿಸುವಲ್ಲಿ ಅಮೆರಿಕದ ಕಂಪನಿಗಳು ಭಾಗಿಯಾಗುವ ಹೊಸ ಮಾರ್ಗವಾಗಿದೆ" ಎಂದು ವಾಷಿಂಗ್ಟನ್​ನಲ್ಲಿರುವ ನಾಸಾ ಪ್ರಧಾನ ಕಚೇರಿಯ ಸೈನ್ಸ್ ಮಿಷನ್ ಡೈರೆಕ್ಟರೇಟ್​ನ ಸಹಾಯಕ ಆಡಳಿತಾಧಿಕಾರಿ ನಿಕೋಲಾ ಫಾಕ್ಸ್ ಹೇಳಿದರು. "ಚಂದ್ರ ವೈಜ್ಞಾನಿಕ ಸಂಶೋಧನೆಯ ಶ್ರೀಮಂತ ತಾಣವಾಗಿದೆ. ಚಂದ್ರನ ಪರಿಸರ ಅಧ್ಯಯನ ಮಾಡುವುದು ನಮ್ಮ ಸೌರವ್ಯೂಹದ ಕೆಲ ದೊಡ್ಡ ರಹಸ್ಯಗಳನ್ನು ಬಿಚ್ಚಿಡಲು ನಾಸಾಗೆ ಸಹಾಯ ಮಾಡುತ್ತದೆ" ಎಂದು ಫಾಕ್ಸ್ ತಿಳಿಸಿದರು.

ಇದನ್ನೂ ಓದಿ : ಬ್ರೌಸಿಂಗ್​ ವೇಳೆ ಡೇಟಾ ಟ್ರ್ಯಾಕಿಂಗ್​ ಕುಕೀಸ್‌ಗೆ ಗೂಗಲ್ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.