ವಾಷಿಂಗ್ಟನ್: ಹವಾಮಾನ ಬದಲಾವಣೆಯಲ್ಲಿ ಸಣ್ಣ ಪ್ರಮಾಣದ ಸುಂಟರಗಾಳಿಗಳು ಮತ್ತು ಸಾಗರ ಪ್ರವಾಹಗಳ ಪಾತ್ರವನ್ನು ಅಧ್ಯಯನ ಮಾಡಲು ನಾಸಾ ಸ್ವಯಂ ಚಾಲಿತ ಸಮುದ್ರದಲ್ಲಿ ತೆರಳುವ ಸಣ್ಣ ಗಾತ್ರದ ವಿಮಾನ (ಗ್ಲೈಡರ್) ಗಳಲ್ಲಿ ವೈಜ್ಞಾನಿಕ ಸಾಧನಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದೆ.
ಸಬ್-ಮೆಸೊಸ್ಕೇಲ್ ಓಷನ್ ಡೈನಾಮಿಕ್ಸ್ ಎಕ್ಸ್ಪೆರಿಮೆಂಟ್ (ಎಸ್-ಮೋಡ್) ಎಂಬ ಸಾಧನವು ಸಮುದ್ರದ ಮೇಲ್ಮೈಗಿಂತ ಕೊಂಚ ಕೆಳಮಟ್ಟದ ಪ್ರದೇಶದಲ್ಲಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತಿದೆ, ಅಲ್ಲಿನ ನೀರು ಹಾಗೂ ಗಾಳಿಯ ಒತ್ತಡ ಕುರಿತು ಸಾಧನೆ ತಿಳಿದುಕೊಳ್ಳಲಿದೆ. ಅಲ್ಲದೆ ಸುಂಟರಗಾಳಿಯ ಚಲನವಲನದ ಮೇಲೆ ನಿಗಾ ಇಡಲಿದೆ.
ಈ ಸುಂಟರಗಾಳಿಗಳು ಸುಮಾರು 6.2 ಮೈಲಿ ಅಥವಾ 10 ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿದ್ದು, ಸಮುದ್ರದ ನೀರು ಸಂಚರಿಸುವ ಮಾರ್ಗದತ್ತ ನಿಧಾನವಾಗಿ ಗಾಳಿಯೊಂದಿಗೆ ಸಂಚರಿಸುತ್ತವೆ. ಆದರೆ ಅಕ್ಟೋಬರ್ 2021ರ ನಂತರ ಪೂರ್ಣ ಪ್ರಮಾಣದ ಕಾರ್ಯಚರಣೆಗೆ ಎಸ್-ಮೋಡ್ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ತಂಡವು ಸ್ವಯಂ ಚಾಲಿತ ಸಾಧನಕ್ಕೆ ವೈಜ್ಞಾನಿಕ ಯಂತ್ರಗಳ ಅಳವಡಿಸಿ ಸಾಗರದ ಮೇಲ್ಮೈನಿಂದ ಅಧ್ಯಯನ ಆರಂಭಿಸಲಿದೆ. ಸೋಲಾರ್ ಜೊತೆ ಬ್ಯಾಟರಿ ಹಾಗೂ ಇಂಧನದ ಸಹಾಯದಿಂದ ಯಂತ್ರವು ಕಾರ್ಯನಿರ್ವಹಿಸುತ್ತದೆ. ಸಣ್ಣ ಗಾಳಿಯಿಂದ ಉಂಟಾದ ಚಂಡಮಾರುತ ಅಥವಾ ಸಾಗರ ಪ್ರವಾಹವು ಯಾವ ದಿಕ್ಕಿನ ಕಡೆ ಚಲಿಸುತ್ತಿದೆ. ಎಷ್ಟು ಹಾನಿಗೆ ಕಾರಣವಾಗಬಹುದು ಎಂಬುದನ್ನು ಅಂದಾಜಿಸಲು ಸಹಾಯಕವಾಗಲಿದೆ.
-
Swirling eddies of water may play a role in moving heat, gases, and nutrients between the planet’s atmosphere and the ocean’s depths. After a year’s pandemic delay, a new #EarthExpeditions mission is preparing to explore small ocean eddies up close. 🌊🚢https://t.co/X37dJBBIhn pic.twitter.com/5LFc7ZK056
— NASA Earth (@NASAEarth) May 18, 2021 " class="align-text-top noRightClick twitterSection" data="
">Swirling eddies of water may play a role in moving heat, gases, and nutrients between the planet’s atmosphere and the ocean’s depths. After a year’s pandemic delay, a new #EarthExpeditions mission is preparing to explore small ocean eddies up close. 🌊🚢https://t.co/X37dJBBIhn pic.twitter.com/5LFc7ZK056
— NASA Earth (@NASAEarth) May 18, 2021Swirling eddies of water may play a role in moving heat, gases, and nutrients between the planet’s atmosphere and the ocean’s depths. After a year’s pandemic delay, a new #EarthExpeditions mission is preparing to explore small ocean eddies up close. 🌊🚢https://t.co/X37dJBBIhn pic.twitter.com/5LFc7ZK056
— NASA Earth (@NASAEarth) May 18, 2021
ಎಸ್-ಮೋಡ್ ಸಣ್ಣ ವಿಮಾನವು ಗಾಳಿಯ ವೇಗ, ಗಾಳಿಯ ಉಷ್ಣತೆ ಮತ್ತು ತೇವಾಂಶ, ನೀರಿನ ತಾಪಮಾನ ಮತ್ತು ಲವಣಾಂಶ ಮತ್ತು ಸೂರ್ಯನಿಂದ ಬೆಳಕು ಮತ್ತು ಅತಿಗೆಂಪು ವಿಕಿರಣವನ್ನು ಅಳೆಯುವ ಸಾಧನಗಳನ್ನು ಸಹ ಒಯ್ಯಲಿದೆ.