ETV Bharat / science-and-technology

ಸೆ.23 ರಂದು ಆರ್ಟೆಮಿಸ್ ಉಪಗ್ರಹ ಹಾರಿಸಲು ನಾಸಾ ಸಿದ್ಧತೆ - ನಾಸಾ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್

ಸೆಪ್ಟೆಂಬರ್ 3 ರಂದು ನಾಸಾ ಆರ್ಟೆಮಿಸ್-1 ಅನ್ನು ಹಾರಿಸಲು ಪ್ರಯತ್ನಿಸಿತ್ತು. ಆದಾಗ್ಯೂ ದ್ರವ ಹೈಡ್ರೋಜನ್ ಸೋರಿಕೆ ಪತ್ತೆಯಾದ ನಂತರ ಅದನ್ನು ನಿಲ್ಲಿಸಲಾಯಿತು. ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ ಅಥವಾ SLS ಎಂದು ಕರೆಯಲ್ಪಡುವ ರಾಕೆಟ್‌ನ ಇಂಧನ ಸೋರುವಿಕೆಯ ಸಮಸ್ಯೆಯನ್ನು ಬಗೆಹರಿಸಲು ತಂಡವು ಪ್ರಯತ್ನಿಸುತ್ತಿದೆ.

ಆರ್ಟೆಮಿಸ್ ಉಪಗ್ರಹ
NASA eyes Sep 23
author img

By

Published : Sep 9, 2022, 5:27 PM IST

ನ್ಯೂಯಾರ್ಕ್: ಆರ್ಟೆಮಿಸ್-1 ಉಪಗ್ರಹ ಹಾರಿಸಲು ಸೆಪ್ಟೆಂಬರ್ 23 ಅಥವಾ ಸೆಪ್ಟೆಂಬರ್ 27 ಈ ಎರಡು ದಿನಾಂಕಗಳನ್ನು ಪರಿಗಣಿಸುತ್ತಿರುವುದಾಗಿ ನಾಸಾ ಹೇಳಿದೆ. ಆರ್ಟೆಮಿಸ್-1 ನಾಸಾದ ಮಾನವರಹಿತ ಉಪಗ್ರಹವಾಗಿದ್ದು, ಆಳ ಆಕಾಶದಲ್ಲಿ ಮಾನವನ ಹೆಜ್ಜೆಯೂರಲು ಸಹಾಯ ಮಾಡಲಿದೆ. ಚಂದ್ರ ಹಾಗೂ ಅದರಾಚೆಗೆ ಮಾನವನ ಉಪಸ್ಥಿತಿಯನ್ನು ವಿಸ್ತರಿಸುವ ಪ್ರಯತ್ನಗಳನ್ನು ಪ್ರದರ್ಶಿಸುವ ಸಾಹಸವೂ ಇದಾಗಿದೆ.

ಸೆಪ್ಟೆಂಬರ್ 3 ರಂದು ನಾಸಾ ಆರ್ಟೆಮಿಸ್-1 ಅನ್ನು ಹಾರಿಸಲು ಪ್ರಯತ್ನಿಸಿತ್ತು. ಆದಾಗ್ಯೂ ದ್ರವ ಹೈಡ್ರೋಜನ್ ಸೋರಿಕೆ ಪತ್ತೆಯಾದ ನಂತರ ಅದನ್ನು ನಿಲ್ಲಿಸಲಾಯಿತು. ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ ಅಥವಾ SLS ಎಂದು ಕರೆಯಲ್ಪಡುವ ರಾಕೆಟ್‌ನ ಇಂಧನ ಸೋರುವಿಕೆಯ ಸಮಸ್ಯೆಯನ್ನು ಬಗೆಹರಿಸಲು ತಂಡವು ಪ್ರಯತ್ನಿಸುತ್ತಿದೆ. ರಾಕೆಟ್ ಲಾಂಚ್ ಪ್ಯಾಡ್‌ನಲ್ಲಿರುವಾಗಲೇ ಸೋರಿಕೆ ಪತ್ತೆಯಾದ ಪ್ರದೇಶವನ್ನು ಎಂಜಿನಿಯರ್‌ಗಳು ಸರಿಪಡಿಸುತ್ತಿದ್ದಾರೆ.

ಎಂಜಿನಿಯರ್​ಗಳು ಹಾರ್ಡ್‌ವೇರ್ ಮತ್ತು ತಂಡಗಳನ್ನು ಪರಿಸರ ಪರಿಸ್ಥಿತಿಗಳಿಂದ ರಕ್ಷಿಸಲು ಕೆಲಸದ ಪ್ರದೇಶದ ಸುತ್ತಲೂ ಟೆಂಟ್‌ನಂತಹ ಆವರಣವನ್ನು ನಿರ್ಮಿಸಿದ್ದಾರೆ. ತಂಡಗಳು ಕ್ರಯೋಜೆನಿಕ್ ಅಥವಾ ಸೂಪರ್ ಕೋಲ್ಡ್ ಅಡಿ ಹೊಸ ಸೀಲ್‌ಗಳನ್ನು ಪರಿಶೀಲಿಸುತ್ತಿವೆ. ಇದರಲ್ಲಿ ರಾಕೆಟ್‌ನ ಕೋರ್ ಹಂತ ಮತ್ತು ಮಧ್ಯಂತರ ಕ್ರಯೋಜೆನಿಕ್ ಪ್ರೊಪಲ್ಷನ್ ಹಂತವನ್ನು ದ್ರವ ಆಮ್ಲಜನಕ ಮತ್ತು ದ್ರವ ಹೈಡ್ರೋಜನ್‌ನೊಂದಿಗೆ ಲೋಡ್ ಮಾಡಲಾಗುತ್ತದೆ. ಏತನ್ಮಧ್ಯೆ, ನಾಸಾ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ಗಾಗಿ ಪ್ರಸ್ತುತ ಪರೀಕ್ಷೆಯ ಅಗತ್ಯತೆಯ ವಿಸ್ತರಣೆಗಾಗಿ ಈಸ್ಟರ್ನ್ ರೇಂಜ್​ಗೆ ವಿನಂತಿಯನ್ನು ಸಲ್ಲಿಸಿದೆ.

ನಾಸಾ ರೇಂಜ್​ನ ಪ್ರಕ್ರಿಯೆಗಳನ್ನು ಗೌರವಿಸುತ್ತದೆ ಮತ್ತು ಸಂಸ್ಥೆಯು ರೇಂಜ್​ನ ನಿರ್ಧಾರಗಳನ್ನು ಬೆಂಬಲಿಸಲು ವಿವರವಾದ ಮಾಹಿತಿಯನ್ನು ನೀಡಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ. ಅದು ಉಡಾವಣಾ ಅವಕಾಶಗಳನ್ನು ಮೌಲ್ಯಮಾಪನ ಮತ್ತು ಪರಿಶೀಲನೆ ಕೂಡ ಮಾಡುತ್ತಿದೆ. ಲಾಂಚ್ ಪ್ಯಾಡ್​ನ ಸ್ಥಿತಿಗತಿಗಳನ್ನು ನೋಡಿಕೊಂಡು ಪರ್ಯಾಯ ದಿನಾಂಕಗಳ ಬಗ್ಗೆ ಯೋಚಿಸಲಾಗುತ್ತಿದೆ.

ಇದನ್ನು ಓದಿ:ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್​​ ಉಡ್ಡಯನ ಮುಂದೂಡಿಕೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.