ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ): ಎಲೋನ್ ಮಸ್ಕ್ ಒಡೆತನದ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಕಂಪನಿ ನ್ಯೂರಾಲಿಂಕ್ ಶುಕ್ರವಾರ ತನ್ನ ಮೊದಲ ಮಾನವ ಕ್ಲಿನಿಕಲ್ ಅಧ್ಯಯನವನ್ನು ಪ್ರಾರಂಭಿಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (US Food and Drug Administration -FDA) ಅನುಮೋದನೆ ನೀಡಿದೆ ಎಂದು ಘೋಷಿಸಿದೆ.
-
We are excited to share that we have received the FDA’s approval to launch our first-in-human clinical study!
— Neuralink (@neuralink) May 25, 2023 " class="align-text-top noRightClick twitterSection" data="
This is the result of incredible work by the Neuralink team in close collaboration with the FDA and represents an important first step that will one day allow our…
">We are excited to share that we have received the FDA’s approval to launch our first-in-human clinical study!
— Neuralink (@neuralink) May 25, 2023
This is the result of incredible work by the Neuralink team in close collaboration with the FDA and represents an important first step that will one day allow our…We are excited to share that we have received the FDA’s approval to launch our first-in-human clinical study!
— Neuralink (@neuralink) May 25, 2023
This is the result of incredible work by the Neuralink team in close collaboration with the FDA and represents an important first step that will one day allow our…
ಅಂದರೆ ಇನ್ನು ಮುಂದೆ ಮಾನವರ ತಲೆಯಲ್ಲಿ ನ್ಯೂರಾಲಿಂಕ್ ಸಾಧನವನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳಬಹುದು. "ನಮ್ಮ ಮೊದಲ ಮಾನವ ಕ್ಲಿನಿಕಲ್ ಅಧ್ಯಯನವನ್ನು ಪ್ರಾರಂಭಿಸಲು ನಾವು ಎಫ್‌ಡಿಎ ಅನುಮೋದನೆಯನ್ನು ಪಡೆದಿದ್ದೇವೆ. ಇದು ಎಫ್‌ಡಿಎ ಜೊತೆಗೆ ನ್ಯೂರಾಲಿಂಕ್ ತಂಡವು ಮಾಡಿದ ಅದ್ಭುತ ಕೆಲಸದ ಫಲಿತಾಂಶವಾಗಿದೆ ಮತ್ತು ಒಂದು ದಿನ ನಮ್ಮ ತಂತ್ರಜ್ಞಾನವು ಅನೇಕ ಜನರಿಗೆ ಸಹಾಯ ಮಾಡಲು ಅನುವು ಮಾಡಿಕೊಡುವ ಪ್ರಮುಖ ಮೊದಲ ಹಂತವನ್ನು ಪ್ರತಿನಿಧಿಸುತ್ತದೆ" ಎಂದು ನ್ಯೂರಾಲಿಂಕ್ ಟ್ವೀಟ್ ಮಾಡಿದೆ.
ಎಫ್‌ಡಿಎ ಅನುಮೋದನೆ ನೀಡಿದ ನಂತರ ನ್ಯೂರಾಲಿಂಕ್ ತಂಡವನ್ನು ಅಭಿನಂದಿಸಿ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಕ್ಲಿನಿಕಲ್ ಪ್ರಯೋಗಕ್ಕಾಗಿ ನೇಮಕಾತಿ ಇನ್ನೂ ಆರಂಭವಾಗಿಲ್ಲ, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕಂಪನಿ ಹೇಳಿದೆ. ಮಾರ್ಚ್‌ನಲ್ಲಿ ಸುರಕ್ಷತೆಯ ಅಪಾಯಗಳನ್ನು ಉಲ್ಲೇಖಿಸಿ ಮಾನವ ಮೆದುಳಿನಲ್ಲಿ ಚಿಪ್ ಅನ್ನು ಅಳವಡಿಸುವ ನ್ಯೂರಾಲಿಂಕ್‌ನ ಪ್ರಸ್ತಾಪವನ್ನು ಎಫ್‌ಡಿಎ ತಿರಸ್ಕರಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ನ್ಯೂರಾಲಿಂಕ್‌ನ ಸಾಧನವು ಮಾನವ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ಮಸ್ಕ್ ಹೇಳಿಕೊಂಡಿದ್ದರು. ಹಂದಿಗಳು ಮತ್ತು ಕೋತಿಗಳ ಮೇಲೆ ಇದನ್ನು ಪ್ರಯೋಗ ಮಾಡಿದ ಸುಮಾರು ಆರು ತಿಂಗಳ ನಂತರ ಅದನ್ನು ಮಾನವರ ಮೆದುಳಿಗೆ ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಆದಾಗ್ಯೂ ಮಾನವರ ಮೆದುಳಿನಲ್ಲಿ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಅಳವಡಿಸಲು ಪ್ರಯತ್ನಿಸುತ್ತಿರುವ ಕಂಪನಿಗಳಲ್ಲಿ ಮಸ್ಕ್ ಅವರ ನ್ಯೂರಾಲಿಂಕ್ ಏಕೈಕ ಕಂಪನಿಯಾಗಿಲ್ಲ. ತೀವ್ರವಾದ ಪಾರ್ಶ್ವವಾಯುನಿಂದ ಬಳಲುತ್ತಿರುವ ವ್ಯಕ್ತಿಗಳು, ಕೈಗಳ ಸಹಾಯವಿಲ್ಲದೆ ತಮ್ಮ ಆಲೋಚನೆಯಿಂದಲೇ ಡಿಜಿಟಲ್ ಸಾಧನಗಳನ್ನು ಬಳಸಲು ಸಾಧ್ಯವಾಗುವಂತೆ ಅಮೆರಿಕದಲ್ಲಿ ಆರು ಜನ ಪಾರ್ಶ್ವವಾಯು ಪೀಡಿತರ ಮೆದುಳಿನಲ್ಲಿ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಅಳವಡಿಸಿರುವ ಸಿಂಕ್ರಾನ್ ಈಗಾಗಲೇ ಈ ವಿಷಯದಲ್ಲಿ ಮಾನವರ ಮೇಲೆ ಪ್ರಯೋಗಗಳನ್ನು ಆರಂಭಿಸಿದೆ. ಸಿಂಕ್ರಾನ್ ಅನ್ನು ನ್ಯೂರಾಲಿಂಕ್‌ನ ಪ್ರತಿಸ್ಪರ್ಧಿ ಕಂಪನಿ ಎಂದು ಪರಿಗಣಿಸಲಾಗಿದೆ.
ನ್ಯೂರಾಲಿಂಕ್ ಎನ್ನುವುದು ಎಲೋನ್ ಮಸ್ಕ್ ಸ್ಥಾಪಿಸಿದ ನ್ಯೂರೋಟೆಕ್ನಾಲಜಿ ಕಂಪನಿಯಾಗಿದ್ದು, ಅದು ಮಾನವರ ದೇಹದಲ್ಲಿ ಅಳವಡಿಸಬಹುದಾದ ಮೆದುಳಿನ-ಕಂಪ್ಯೂಟರ್ ಇಂಟರ್ಫೇಸ್ ಅನ್ನು ನಿರ್ಮಿಸುತ್ತಿದೆ. 2016 ರಲ್ಲಿ ಪ್ರಾರಂಭವಾದ ಖಾಸಗಿ ಉದ್ಯಮವಾಗಿರುವ ನ್ಯೂರಾಲಿಂಕ್ ತನ್ನ ಸಾಧನಗಳ ಮೂಲಕ ಪಾರ್ಶ್ವವಾಯು ಪೀಡಿತರಿಗೆ ಚಲನೆಯನ್ನು ಮರಳಿ ಪಡೆಯಲು ಮತ್ತು ಹುಟ್ಟು ಕುರುಡರಿಗೆ ದೃಷ್ಟಿಯನ್ನು ಪುನಃ ಸ್ಥಾಪಿಸಲು ಅನುವು ಮಾಡಿಕೊಡುವುದಾಗಿ ಹೇಳಿಕೊಂಡಿದೆ. ಒಬ್ಬ ವ್ಯಕ್ತಿಯು ತನ್ನ ಮನಸ್ಸನ್ನು ಮಾತ್ರ ಬಳಸಿಕೊಂಡು ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸುವಂತೆ ಮಾಡಬಹುದಾದ ಅಪ್ಲಿಕೇಶನ್ ಅನ್ನು ಸಹ ಕಂಪನಿ ಅಭಿವೃದ್ಧಿಪಡಿಸುತ್ತಿದೆ.
ಇದನ್ನೂ ಓದಿ : AI ನಿಂದ ಉದ್ಯೋಗ ನಷ್ಟ ಸಾಧ್ಯತೆ: ಆದರೂ ಅನುಕೂಲಗಳೇ ಹೆಚ್ಚು!