ಹೋಮೋ ಕುಲದ ಮೊದಲ ಪೂರ್ವಜರು ಸುಮಾರು 2.5 ದಶಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಹೊರಹೊಮ್ಮಿದ್ದು, ನೇರವಾಗಿ ನಡೆಯುತ್ತಿದ್ದರು. ಆದರೆ, ಅವರು ಪ್ರಾಚೀನ ವಾನರ ತರಹದ ಮೆದುಳುಗಳನ್ನು ಹೊಂದಿದ್ದರು. ಅವು ಇಂದಿನ ಮಾನವ ಮೆದುಳಿನ ಅರ್ಧದಷ್ಟು ಗಾತ್ರ ಮಾತ್ರ ಹೊಂದಿತ್ತು ಎಂದು ಸ್ವಿಡ್ಜರ್ಲ್ಯಾಂಡ್ನ ಜುರಿಚ್ ವಿಶ್ವವಿದ್ಯಾಲಯದ ಸಂಶೋಧಕರು (UZH) ಹೇಳಿದ್ದಾರೆ.
ಗಾತ್ರದ ಜೊತೆಗೆ, ಮೆದುಳಿನ ಪ್ರದೇಶ ಮತ್ತು ಸಂಘಟನೆಯು ಆಧುನಿಕ ಮಾನವ ಮೆದುಳಿನಿಂದ ಭಿನ್ನವಾಗಿದೆ ಎಂದು ತಂಡವು ಕಂಡುಹಿಡಿದಿದೆ.
ಈ ಅಧ್ಯಯನಕ್ಕೆ 1ರಿಂದ 2 ದಶಲಕ್ಷ ವರ್ಷಗಳ ಹಿಂದೆ ಜಾರ್ಜಿಯಾ ಆಫ್ರಿಕಾ ಮತ್ತು ಇಂಡೋನೇಷ್ಯಾದ ಜಾವಾದಲ್ಲಿ ವಾಸಿಸುತ್ತಿದ್ದ ಹೋಮೋ ಪಳೆಯುಳಿಕೆಗಳ ತಲೆಬುರುಡೆಗಳನ್ನು ಪರೀಕ್ಷಿಸಲು ತಂಡವು ಕಂಪ್ಯೂಟೆಡ್ ಟೊಮೊಗ್ರಫಿ(ಗಣಕೀಕೃತ ಛೇದಚಿತ್ರಣ)ಯನ್ನು ಬಳಸಿತು. ನಂತರ ಅವರು ಪಳೆಯುಳಿಕೆ ದತ್ತಾಂಶವನ್ನು ಮಹಾನ್ ಮಂಗಗಳು ಮತ್ತು ಮಾನವರ ಉಲ್ಲೇಖ ದತ್ತಾಂಶದೊಂದಿಗೆ ಹೋಲಿಕೆ ಮಾಡಿ ಪರೀಕ್ಷಿಸಿದರು.
ಸುಮಾರು 1.7 ದಶಲಕ್ಷ ವರ್ಷಗಳ ಹಿಂದಿನವರೆಗೂ ಅವರ ಮೆದುಳುಗಳು ವಿಶೇಷವಾಗಿ ದೊಡ್ಡದಾಗಿರಲಿಲ್ಲ ಅಥವಾ ಆಧುನಿಕವಾಗಿರಲಿಲ್ಲ. ಈ ಅವಧಿಯಲ್ಲಿ ಮಾನವ ಭಾಷೆಯ ಆರಂಭಿಕ ರೂಪಗಳು ಸಹ ಅಭಿವೃದ್ಧಿ ಹೊಂದಿದವು ಎಂದು ಅಧ್ಯಯನ ತಿಳಿಸಿದೆ.