ETV Bharat / science-and-technology

ಫೇಸ್​ಬುಕ್​, ಇನ್ಸ್​ಟಾಗ್ರಾಂನಿಂದ ನಿಯಮಬಾಹಿರ ವಿಷಯಗಳನ್ನು ತೆಗೆದು ಹಾಕಿದ ಮೆಟಾ - ಪರಿಹಾರಕ್ಕೆ ಟೂಲ್​ಗಳ ಬಳಕೆ ಮಾಡಿದೆ

ಫೇಸ್​ಬುಕ್​ ನಿಯಮದ ವಿರುದ್ಧದ ವಿಷಯಗಳನ್ನು ಮೆಟಾ ತೆಗೆದು ಹಾಕಿದೆ. ಐಟಿ ನಿಯಮದ ಅನುಸಾರವಾಗಿ ಸಂಸ್ಥೆ ಕಠಿಣ ಕ್ರಮ ತೆಗೆದುಕೊಂಡಿದೆ.

ಭಾರತದಲ್ಲಿ ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂನಿಂದ 34 ನಿಯಮಬಾಹಿರ ವಿಷಯಗಳನ್ನು ಕಿತ್ತು ಹಾಕಿದ ಮೆಟಾ
meta-has-removed-34-content-from-facebook-and-instagram-in-india
author img

By

Published : Feb 2, 2023, 3:54 PM IST

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂನ ನಿಯಮಗಳನ್ನು ಉಲ್ಲಂಘಿಸಿ ಸುದ್ದಿ, ಫೋಟೋ, ವಿಡಿಯೋ ಅಥವಾ ವಿಷಯಗಳನ್ನು ಹಂಚಿಕೊಂಡ ಸುಮಾರು 34 ಕಟೆಂಟ್​ ಅನ್ನು ಭಾರತದಲ್ಲಿ ಕಿತ್ತು ಹಾಕಲಾಗಿದೆ ಎಂದು ಮೆಟಾ ತಿಳಿಸಿದೆ. 2022 ಡಿಸೆಂಬರ್​ ತಿಂಗಳ ವರದಿಯನ್ನು ಮೆಟಾ ಪ್ರಕಟಿಸಿದೆ. ಇದರನುಸಾರ ಫೇಸ್​ಬುಕ್​ನ 13​ ನಿಯಮಗಳ ವಿರುದ್ಧವಾಗಿದ್ದ 22.54 ಮಿಲಿಯನ್​ ಕಂಟೆಟ್​​ ಮತ್ತು ಇನ್ಸ್​ಟಾಗ್ರಾಂನ 12 ನಿಯಮಗಳ ವಿರುದ್ಧವಾಗಿದ್ದ 12.03 ಮಿಲಿಯನ್​ ಕಟೆಂಟ್​ಗಳನ್ನು ತೆಗೆದು ಹಾಕಲಾಗಿದೆ.

ಡಿಸೆಂಬರ್​ 1 ರಿಂದ 31ರವರೆಗೆ ಮೆಟಾ ನಿಯಮದ ವಿರುದ್ಧವಾಗಿರುವ ಕಟೆಂಟ್​ ಸಂಬಂಧಿಸಿದಂತೆ ಫೇಸ್​ಬುಕ್​ನಿಂದ 764 ದೂರು ಸ್ವೀಕರಿಸಲಾಗಿದೆ. ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ ಕಂಪನಿಯು ಈ ಕ್ರಮ ತೆಗೆದು ಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ವಿಷಯಗಳ ಉಲ್ಲಂಘನೆಯ ವರದಿಗೆ ಪೂರ್ವಸ್ಥಾಪಿತ ಚಾನಲ್​ಗಳ ಮೂಲಕ ಇದನ್ನು ಮಾಡಲಾಗಿದೆ. ತಮ್ಮ ಡೇಟಾವನ್ನು ಡೌನ್​ಲೋಡ್​ ಮಾಡಲು ಪರ್ಯಾಯ ಮಾರ್ಗ ಹುಡುಕುವುದು, ಖಾತೆ ಹ್ಯಾಕ್​ ಮಾಡುವುದು ಸೇರಿದಂತೆ ಹಲವು ವಿಷಯಗಳ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟಾ ಹೇಳಿದೆ. 2021ರ ಐಟಿ ನಿಯಮ ಅನುಸಾರ ಮಾಸಿಕ ವರದಿಯಲ್ಲಿ ಈ ವಿಷಯ ತಿಳಿಸಿದೆ.

ವಿಶೇಷ ಪರಿಶೀಲನೆಯ ಅಗತ್ಯವಿರುವ 419 ಕಂಟೆಂಟ್​​ಗಳನ್ನು ನಿಯಮಗಳ ಅನುಸಾರ ನಾವು ಪರಿಶೀಲಿಸಿದ್ದು, ಒಟ್ಟು 205 ವರದಿಗಳ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ. ಉಳಿದ 214 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಮೆಟಾ ತಿಳಿಸಿದೆ. ಭಾರತದ ಕುಂದುಕೊರತೆ ಕಾರ್ಯ ವಿಧಾನದ ಅನುಸಾರ ಇನ್ಸ್​ಟಾಗ್ರಾಂ ಮೂಲಕ 10,820 ದೂರುಗಳನ್ನು ಪಡೆಯಲಾಗಿದೆ. ಇದರಲ್ಲಿ ಬಳಕೆದಾರರಿಗೆ ಒದಗಿಸಿದ ಟೂಲ್​ ಬಳಕೆ ಮಾಡಿ 2,461 ಪ್ರಕರಣ ಪರಿಹರಿಸಲಾಗಿದೆ. 8,359 ದೂರುಗಳ ವಿಶೇಷ ಪರಿಶೀಲನೆ ಅಗತ್ಯವಿದೆ. 2,926 ವಿಷಯಗಳ ಪರಿಶೀಲನೆ ನಡೆಸಿ ಮೆಟಾ ಕ್ರಮಕ್ಕೆ ಮುಂದಾಗಿದೆ. ಉಳಿದ 5, 433 ದೂರುಗಳನ್ನು ಇನ್ಸ್ಟಾಗ್ರಾಂ ಪರಿಶೀಲನೆ ಕ್ರಮಕ್ಕೆ ಮುಂದಾಗಿಲ್ಲ.

2021ರ ಹೊಸ ಐಟಿ ನಿಯಮದಂತೆ, ದೊಡ್ಡ ಡಿಜಿಟಲ್​ ಮತ್ತು ಸಾಮಾಜಿಕ ಮಾಧ್ಯಮ ಜಾಲತಾಣದ ಪ್ರತಿ ತಿಂಗಳು ಈ ವರದಿ ಪ್ರಕಟಿಸುತ್ತದೆ. ತಮ್ಮ ಗುಣಮಟ್ಟದ ವಿರುದ್ಧ ಇರುವ ಪೋಸ್ಟ್​, ಫೋಟೋ, ವಿಡಿಯೋ ಅಥವಾ ಕಮೆಂಟ್​ ಸೇರಿದಂತೆ ಎಲ್ಲಾ ವಿಷಯಗಳನ್ನು ಪರಿಶೀಲನೆ ನಡೆಸಿ ನಾವು ಕ್ರಮಕ್ಕೆ ಮುಂದಾಗುತ್ತೇವೆ. ಫೇಸ್​ಬುಕ್​ ಅಥವಾ ಇನ್ಸ್ಟಾಗ್ರಾಂ ಅಥವಾ ಕವರ್​ ಫೋಟೋ ಅಥವಾ ವಿಡಿಯೋಗಳಯ ಪ್ರೇಕ್ಷಕರಿಗೆ ತೊಂದರೆ ನೀಡುತ್ತಿದ್ದರೆ ಎಚ್ಚರಿಕೆ ನೀಡುವ ಮೂಲಕ ಆ ವಿಷಯಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂ ಫೋಟೋ ಮತ್ತು ಮಾಹಿತಿ ಹಂಚಿಕೊಳ್ಳುವ ಮಾಧ್ಯಮ ಮಾತ್ರವಾಗಿರದೇ, ಇದು ಉದ್ಯಮ, ವ್ಯಾಪಾರ, ಶಿಕ್ಷಣ ಸೇರಿದಂತೆ ಹಲವು ಅನುಕೂಲವನ್ನು ಒದಗಿಸಿದೆ. ಈ ಹಿನ್ನೆಲೆಯಲ್ಲಿ ಈ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ವಿಷಯ, ಕೋಮು ಪ್ರಚೋದಿತ ಸೇರಿದಂತೆ ಹಲವು ವಿಷಯಗಳ ಹಂಚಿಕೆಯ ಕುರಿತು ನಿಯಮವನ್ನು ಜಾರಿಗೆಗೊಳಿಸಲಾಗಿದೆ. ಈ ನಿಯಮಗಳನ್ನು ಮೀರಿದ ಫೋಟೋ, ವಿಡಿಯೋ ಅಥವಾ ಇನ್ನಿತರ ಮಾಹಿತಿಗಳನ್ನು ಹಂಚಿಕೊಂಡಾಗ ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂ ಆ ವಿಷಯಗಳ ಪರಿಶೀಲನೆ ಮಾಡಿ ಅವನ್ನು ತೆಗೆದು ಹಾಕುತ್ತದೆ. ಇಲ್ಲ ಆ ಖಾತೆ ರದ್ದು ಮಾಡುವ ಅಧಿಕಾರವನ್ನು ಹೊಂದಿದೆ. ಈ ಸಂಬಂದ ಐಟಿ ನಿಯಮವನ್ನು ಕೂಡ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಉದ್ಯೋಗ ಕಡಿತ ಬದಲು ಪ್ರಮುಖ ನಿರ್ಣಯ.. ಐಟಿ ಕಂಪನಿಗಳಿಗೆ ಮಾದರಿಯಾದ ಇಂಟೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.