ದಿನದಿಂದ ದಿನಕ್ಕೆ ಹೆಚ್ಚು ಬಳಕೆದಾರಸ್ನೇಹಿಯಾಗಿ ರೂಪುಗೊಳ್ಳುತ್ತಿರುವ ಮೆಟಾ ಒಡೆತನದ ವಾಟ್ಸ್ ಆ್ಯಪ್ಗೆ ಮತ್ತಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ವಿಚಾರವನ್ನು ಮಾರ್ಕ್ ಜುಗರ್ ಬರ್ಗ್ ತಿಳಿಸಿದ್ದು, ವಾಟ್ಸಾಪ್ ಗ್ರೂಪ್ಗೆ ಎರಡು ಹೊಸ ಅಪ್ಡೇಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಡೇಟ್ ಫಿನ್ಸ್, ಆಡ್ಮಿನ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಇದೀಗ ಈ ಗ್ರೂಪ್‌ಗಳ ಖಾಸಗಿತನದಲ್ಲಿ ಆಡ್ಮಿನ್ಗಳು ಮತ್ತಷ್ಟು ನಿಯಂತ್ರಣ ಹೊಂದಲು ಸಾಧ್ಯವಿದೆ. ಕಳೆದ ಕೆಲವು ತಿಂಗಳಿಂದ ಈ ಗ್ರೂಪ್‌ಗಳ ಅಪ್ಡೇಟ್ ವಿಷಯದಲ್ಲಿ ಹೊಸ ಹೊಸ ಮರ್ಪಾಡುಗಳನ್ನು ಮಾಡಲಾಗುತ್ತಿದೆ. ಗ್ರೂಪ್ ಸಂಖ್ಯೆ ದೊಡ್ಡದು, ಗ್ರೂಪ್ ಆಡ್ಮಿನ್ಗಳು ಇತರೆ ಸದಸ್ಯರು ಕಳುಹಿಸಿದ ಸಂದೇಶ ಅಳಿಸುವ ಅಧಿಕಾರ ನೀಡಲಾಗಿದೆ.
ಈ ಸಂಬಂಧ ಮಾಹಿತಿ ತಿಳಿಸಿರುವ ಮೆಟಾ, ವಾಟ್ಸ್ ಆ್ಯಪ್ನಲ್ಲಿ ಗ್ರೂಪ್ಗಳು ಅತ್ಯವಶ್ಯಕ. ಏಕ ಕಾಲದಲ್ಲಿ ಹಲವರಿಗೆ ಒಂದೇ ಸಂದೇಶ ಕಳುಹಿಸಲು, ಚರ್ಚೆ ನಡೆಸಲು ಸೇರಿದಂತೆ ಇನ್ನಿತರ ಅಂಶಗಳಿಗೆ ಈ ಗ್ರೂಪ್ ಅಗತ್ಯವಾಗಿದೆ. ಗ್ರೂಪ್ಗಳಿಗೆ ಮತ್ತಷ್ಟು ಸುಲಭ ಸಾಧನಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದಾರೆ. ಇಂದು ಕೆಲವು ಅಪ್ಡೇಟ್ಗಳನ್ನು ಪರಿಚಯಿಸುತ್ತಿದ್ದು, ಆಡ್ಮಿನ್ಗಳು ಇದನ್ನು ನಿರ್ವಹಣೆ ಮಾಡಬಹುದಾಗಿದ್ದು, ಇದನ್ನು ಸುಲಭವಾಗಿ ಪ್ರತಿಯೊಬ್ಬರಿಗೂ ತಿಳಿಸಬಹುದು ಎಂದಿದೆ.
ಹೊಸ ಅಪ್ಡೇಟ್ ಏನು?: ಗ್ರೂಪ್ಗಳಿಗೆ ಸೇರುವ ಜನರನ್ನು ಇನ್ಮುಂದೆ ಅಡ್ಮಿನ್ಗಳು ನಿರ್ಧರಿಸಬಹುದು. ಇದರಿಂದ ಆ ವ್ಯಕ್ತಿ ವಾಟ್ಸ್ ಆ್ಯಪ್ ಗ್ರೂಪ್ ಸದಸ್ಯನಾಗ ಬೇಕಾ ಅಥವಾ ಬೇಡವಾ ಎಂದು ಆಡ್ಮಿನ್ ನಿರ್ಧರಿಸುವ ಹಕ್ಕು ಹೊಂದಿರುತ್ತಾರೆ. ಅನೇಕ ಬಾರಿ ಗ್ರೂಪ್ನ ಸದಸ್ಯರಾಗುವವರು ಗುಂಪಿನಲ್ಲಿ ತೀವ್ರತರದ ಚರ್ಚೆಗಳನ್ನು ಹುಟ್ಟು ಹಾಕುವ ಸಮಸ್ಯೆಗೆ ಇದು ಮುಕ್ತಿ ಹಾಡಲಿದೆ.
ಗ್ರೂಪ್ಚಾಟ್ ಪ್ರೊಫೈಲ್ ಪರಿಚಯ: ವಾಟ್ಸ್ ಆ್ಯಪ್ ಆಂಡ್ರಾಯ್ಡ್ ಬೆಟಾ ಗ್ರೂಪ್ ಚಾಟ್ಗಳಿಗೆ ಪ್ರೊಫೈಲ್ ಐಕಾನ್ಗಳನ್ನು ಪರಿಚಯಿಸಿದೆ. ಹೊಸ ಫೀಚರ್ ಮೂಲಕ ಡೆಸ್ಕ್ಟಾಪ್ನಲ್ಲಿ ಬಳಕೆದಾರರು ಗ್ರೂಪ್ಚಾಟ್ ವೇಳೆ ಗುಂಪಿನ ಹೊಸ ಸದಸ್ಯರ ಸೇರ್ಪಡನೆಗೆ ಮುಂಚೆಯೇ ಅವರ ಪ್ರೊಫೈಲ್ ಫೋಟೋಗಳನ್ನು ವೀಕ್ಷಿಸಬಹುದಾಗಿದೆ. ಗ್ರೂಪ್ ಮೆಂಬರ್ಗಳ ಫೋನ್ ನಂಬರ್ ಇರದೇ ಹೋದರೂ ಅಥವಾ ಅದೇ ಹೆಸರು ಹೊಂದಿದ್ದಾಗಲೂ ಅವರನ್ನು ಪತ್ತೆ ಮಾಡಬಹುದು. ಒಂದು ವೇಳೆ ಗ್ರೂಪ್ ಸದಸ್ಯರು ತಮ್ಮ ಪ್ರೊಫೈಲ್ ಚಿತ್ರ ಹೊಂದಿಲ್ಲದಿದ್ದಾಗ ಅಥವಾ ಪ್ರೊಫೈಲ್ ಫೋಟೋ ಹೈಡ್ ಮಾಡಿದಾಗ ಡೀಫಾಲ್ಟ್ ಪ್ರೊಫೈಲ್ ಐಕಾನ್ ಕಾಣಿಸಿಕೊಳ್ಳುತ್ತದೆ. ಜೊತೆಗೆ ಕಾಂಟಾಕ್ಟ್ ನೇಮ್ನಲ್ಲಿಯೂ ಅದೇ ಬಣ್ಣವನ್ನು ಹೈಲೈಟ್ ಮಾಡಲಾಗುತ್ತದೆ.
ಇದನ್ನೂ ಓದಿ: ಮತ್ತಷ್ಟು ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್ಆ್ಯಪ್; ಏನಿದು ಟೆಕ್ಸ್ಟ್ ಡಿಟೆಕ್ಷನ್?