ಸ್ಯಾನ್ ಫ್ರಾನ್ಸಿಸ್ಕೊ: ಇತ್ತೀಚಿಗಷ್ಟೆ ಆ್ಯಪಲ್ ವಾರ್ಷಿಕ ವರ್ಲ್ಡ್ ವೈಡ್ ಡೆವಲಪರ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ಆ್ಯಪಲ್ ವಿಷನ್ ಪ್ರೊ ಎಆರ್ ಹೆಡ್‌ಸೆಟ್ ಅನ್ನು ಬಿಡುಗಡೆ ಮಾಡಲಾಗಿತ್ತು. ಡಿಜಿಟಲ್ ವೀಕ್ಷಣೆಯನ್ನು ನೈಜ ಅನುಭವ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಮಿಶ್ರ ರಿಯಾಲಿಟಿ ಹೆಡ್‌ಸೆಟ್ ಬಿಡುಗಡೆ ಮಾಡುತ್ತಿರುವುದಾಗಿ ಆ್ಯಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದರು. ಆದರೆ, ಈ ವಿಷನ್ ಪ್ರೊ ಬಗ್ಗೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಮಾರ್ಕ್ ಜುಗರ್ಬರ್ಗ್ ಅಪಸ್ವರ ಎತ್ತಿದ್ದಾರೆ.
ಈ ಸಂಬಂಧ ಸಹೋದ್ಯೋಗಿಗಳೊಂದಿಗೆ ಸಭೆಯಲ್ಲಿ ಮಾತನಾಡಿರುವ ಅವರು, ಮಾರುಕಟ್ಟೆಗೆ ಪರಿಚಯಿಸಲಾಗಿರುವ ಆ್ಯಪಲ್ ವಿಷನ್ ಪ್ರಿ ಹೆಡ್‌ಸೆಟ್, ಕಂಪ್ಯೂಟಿಂಗ್‌ನ ಭವಿಷ್ಯದ ದೃಷ್ಟಿಯಿಂದ ಕೂಡಿರಬಹುದು. ಆದರೆ, ನನಗೆ ಬೇಕಾದ ರೀತಿ, ನಾನು ಅಪೇಕ್ಷಿಸಿದಂತೆ ಇದು ಇಲ್ಲ ಎಂದಿದ್ದಾರೆ.
ಆ್ಯಪಲ್ ತನ್ನ ವಿಷನ್ ಪ್ರೊನಲ್ಲಿ ಯಾವುದೇ ಹೊಸ ರೀತಿಯ ಪ್ರಮುಖವಾದ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವನ್ನು ಪರಿಚಯಿಸಿಲ್ಲ. ಮೆಟಾ ಕೂಡ ಇದನ್ನು ಪರಿಶೀಲಿಸಿದ್ದು, ಹೊಸತನವನ್ನು ಪತ್ತೆ ಮಾಡಿಲ್ಲ. ವಿಷನ್ ಪ್ರೊ 3,499 ಡಾಲರ್ ಮಾರಾಟದ ಬೆಲೆಗೆ ಹೋಲಿಸಿದರೆ ಕ್ವೆಸ್ಟ್ 3 ಹೆಡ್‌ಸೆಟ್‌ನ ಮೂಲಕ ಅಂದರೆ 499 ಡಾಲರ್ ಕಡಿಮೆ ಮಟ್ಟದಲ್ಲಿ ಮೆಟಾ ದೊಡ್ಡ ಬಳಕೆದಾರರನ್ನು ತಲುಪಲು ಸಾಧ್ಯವಾಗುತ್ತದೆ. ಉತ್ಪನ್ನಗಳು ಎಲ್ಲರಿಗೂ ಸಾಧ್ಯವಾದಷ್ಟು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಜನರಿಗಗೆ ಮಟ್ಟಿಸಲು ನಾವು ಕೆಲಸ ಮಾಡುತ್ತೇವೆ. ಇದೆ ಮೆಟಾ ಗುರಿಯಾಗಿದ್ದು, ನಾವು ತಯಾರಿಸುವ ಉತ್ಪನ್ನಗಳ ಪ್ರಮುಖ ಭಾಗ ಇದಾಗಿದೆ. ನಾವು ಹತ್ತಾರು ಮಿಲಿಯನ್ ಕ್ವೆಸ್ಟ್‌ಗಳನ್ನು ಮಾರಾಟ ಮಾಡಿದ್ದೇವೆ ಎಂದರು.
ಇದು ಕಂಪ್ಯೂಟಿಂಗ್‌ನ ಭವಿಷ್ಯದ ದೃಷ್ಟಿಯಾಗಿರಬಹುದು. ಆದರೆ, ಅದು ನನಗೆ ಬೇಕಾಗಿರುವುದು ಅಲ್ಲ. ಇದು ನಮಗೆ ಹೇಗೆ ಹತ್ತಿರವಾಗಲಿದೆ ಎಂಬ ವಿಷಯದಲ್ಲಿ ನಿಜವಾಗಿಯೂ ತಾತ್ವಿಕ ವ್ಯತ್ಯಾಸ ಇದೆ. ಅವರು ಗ್ರಾಹಕರನ್ನು ಮುಟ್ಟಲು ಏನು ಮಾಡುತ್ತಾರೆ. ಹೇಗೆ ಸ್ಪರ್ಧಿಸಲಿದ್ದಾರೆ ಎಂಬುದನ್ನು ನೋಡುವುದಕ್ಕೆ ಉತ್ಸಕರಾಗಿದ್ದೇವೆ ಎಂದಿದ್ದಾರೆ.
ಇನ್ನು ಕ್ವೆಸ್ ಹೆಡ್‌ಸೆಟ್ ಬಗ್ಗೆ ಮಾತನಾಡಿರುವ ಜುಗರ್ಬರ್ಗ್, ಜನರು ಹೊಸ ಮಾರ್ಗವಾಗಿ ಸಂವಹನ ನಡೆಸುತ್ತಿದ್ದು, ಇದು ಆಪ್ತವಾಗಿದೆ. ಇದು ಸಕ್ರಿಯವಾಗಿದ್ದು, ಕೆಲಸ ಮಾಡುತ್ತಿದೆ ಎಂದಿದ್ದಾರೆ. ಮೆಟಾ ಮುಂದಿನ-ಪೀಳಿಗೆಯ ಮಿಶ್ರ ರಿಯಾಲಿಟಿ ಹೆಡ್‌ಸೆಟ್ ಕ್ವೆಸ್ಟ್ 3 ಅನ್ನು ಈಗಾಗಲೇ ವೀಕ್ಷಣೆ ನಡೆಸಿದ್ದು, ವರ್ಷಾಂತ್ಯದಲ್ಲಿ ಇದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಆ್ಯಪಲ್ ವಿಷನ್ ಪ್ರೊ: ಆ್ಯಪಲ್ ಮೊಬೈಲ್ಗಳಲ್ಲಿ 'ಹೇ ಸಿರಿ' ಎಂಬ ಧ್ವನಿ ನಿಯಂತ್ರಣ ಮಾದರಿಯ ಧ್ವನಿ ಹುಡುಕಾಟದ ವೈಶಿಷ್ಟ್ಯವು ಇದರಲ್ಲಿ ಲಭ್ಯವಿರುತ್ತದೆ. ಈ ಮೂಲಕ ಮಿಶ್ರ ರಿಯಾಲಿಟಿ ಹೆಡ್‌ಸೆಟ್ ಅನ್ನು ಧ್ವನಿಯ ಮೂಲಕ ನಿಯಂತ್ರಿಸಬಹುದಾಗಿದೆ. ಸಾಧನದಲ್ಲಿನ ಅನೇಕ ಐಕಾನ್‌ಗಳನ್ನು ಕಣ್ಣಿನ ಸನ್ನೆ ಮೂಲಕ ನಿಯಂತ್ರಿಸಬಹುದಾಗಿದೆ. ಅಲ್ಲದೇ ಐಕಾನ್‌ಗಳನ್ನು ಕೈಗಳ ಮೂಲಕವೂ ಕ್ಲಿಕ್ ಮಾಡಬಹುದಾಗಿದೆ. ಒಟ್ಟಾರೆಯಾಗಿ, ಈ ಉತ್ಪನ್ನವು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ಆ್ಯಪಲ್ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಅನಾವರಣ: ಅಬ್ಬಾ.. ಇದರ ಬೆಲೆ ಕೇಳಿದರೆ ನೀವೂ ದಂಗಾಗ್ತೀರಿ!