ಥೈಪೇ: ಚಿಪ್ಗಳ ತಯಾರಕರಾದ ಮೀಡಿಯಾ ಟೆಕ್ 5ಜಿ ಸ್ಮಾರ್ಟ್ಫೋನ್ಗಾಗಿ ಹೊಸ ಡೈಮೆನಿಸ್ಟಿ 8200 ಚಿಪ್ಗಳನ್ನು ಪರಿಚಯಿಸಿದೆ. ಹೊಸ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಸ್ಮಾರ್ಟ್‌ಫೋನ್‌ಗಳು ಸಂಪರ್ಕ, ಗೇಮಿಂಗ್, ಮಲ್ಟಿಮೀಡಿಯಾ, ಡಿಸ್ಪ್ಲೇಗಳು ಮತ್ತು ಇಮೇಜಿಂಗ್‌ನಂತ ಉತ್ತಮ ಅನುಭವಗಳನ್ನು ನೀಡುತ್ತವೆ ಎಂದು ಕಂಪನಿ ತಿಳಿಸಿದೆ
ಇದು ಒಕ್ಟೊ-ಕೋರ್ ಪ್ರೊಸೆಸ್ ಯುನಿಟ್ ಜೊತೆ ನಾಲ್ಕು ಕಾರ್ಟೆಕ್ಸ್-ಎ78 ಕೋರ್ ಆಪರೇಟಿಂಗ್ ಅನ್ನು 3.1 ಗೀಗಾ ಹಟ್ಸ್ನಲ್ಲಿ ಹೊಂದಿದೆ. ಜೊತೆಗೆ ಪರಿಣಾಮಕಾರಿ ಮಾಲಿ ಜಿ610 ಗ್ರಾಫಿಕ್ ಇಂಜಿನ್ ಅಪ್ಲಿಕೇಷನ್ಗಳ ಉತ್ತಮ ಕಾರ್ಯಾಚರಣೆಗೆ ಇರಲಿದೆ. ಗೇಮಿಂಗ್ನಲ್ಲಿ ಸಂಪರ್ಕ ಕಡಿತವಾಗದಂತೆ ಉತ್ತಮ ಅನುಭವ ಪಡೆಯಲು ಮೀಡಿಯಾಟೆಕ್ ಹೈಪರ್ಇಂಜಿನ್ 6.0 ಗೇಮಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ
ನೋಡುವ ಅನುಭವ ಸರಾಗ: ಸಿಕ್ರನೈಜ್ 2.0 ತಂತ್ರಜ್ಞಾನದ ಮೂಲಕ ನೋಡುವ ಅನುಭವವನ್ನು ಸರಾಗಗೊಳಿಸಿದೆ. ಈ ಡಿಸ್ಪ್ಲೆ ಆಟೋಮೆಟಿಕ್ ಅಡ್ಜಸ್ಟ್ಮೆಂಟ್ ಹೊಂದಿದೆ. ಮೀಡಿಯಾಟೆಕ್ ಡೈಮೆಸ್ಟಿ 8200 5ಜಿ ಸ್ಮಾರ್ಟ್ಫೋನ್ ಮೂಲಕ ನಿಮ್ಮ ಗೇಮಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉತ್ತಮ ಗ್ರಾಫಿಕ್ಸ್ ಮತ್ತು ತಡೆರಹಿತ ಸಂಪರ್ಕದ ಮೂಲಕ ಸರಾಗ ಗೇಮ್ ಅನುಭವವನ್ನು ಪಡೆಯಬಹುದಾಗಿದೆ ಎಂದು ಮೀಡಿಯಾಟೆಕ್ ವೈರ್ಲೆಸ್ ಕಮ್ಯೂನಿಕೇಷನ್ ಬ್ಯುಸಿನೆಟ್ ಯುನಿಟ್ ಡೆಪ್ಯೂಟಿ ಮ್ಯಾನೇಜರ್ ಸಿಎಚ್ ಚೆನ್ ತಿಳಿಸಿದ್ದಾರೆ.
ಬ್ಯಾಟರಿ ಚಿಂತೆ ಬಿಟ್ಟುಬಿಡಿ: ಡೈಮೆನಿಸ್ಟಿ 8200 ಪವರ್ ಸಾಮರ್ಥ್ಯವನ್ನು ಕೂಡ ಹೆಚ್ಚಿಸಲಾಗಿದ್ದು, ಬ್ಯಾಟರಿಗಳ ಚಿಂತೆ ಇಲ್ಲದಂತೆ ಗ್ರಾಹಕರು ಉತ್ತಮ ಗುಣಮಟ್ಟದ ಪ್ರದರ್ಶನ ಕಾಣಬಹುದಾಗಿದೆ. ಈ ಹೊಸ ಚಿಪ್ 14 ಬಿಟ್ ಎಚ್ಡಿಆರ್ ವಿಡಿಯೋ ದಾಖಲಿಸಲಿದ್ದು, ಕ್ಯಾಮೆರಾ 320 ಎಂಪಿಗೆ ಬೆಂಬಲಿಸಲಿದೆ. ಈ ಚಿಪ್ಸೆಟ್ ಮೂರು ಬ್ಯಾಂಡ್ ವೈಫೈ 6ಇಗೆ ಬೆಂಬಲಿಸಲಿದ್ದು, ಇದಕ್ಕೆ ವೇಗದ ವೈರ್ಲೆಸ್ ಸಂಪರ್ಕ ನೀಡಲಿದೆ. ಈ ಚಿತ್ರ ಈ ತಿಂಗಳಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಐಫೋನ್ 14 ಮೊಬೈಲ್ ಸ್ಯಾಟಲೈಟ್ ಕಾಲ್ ಮಾಡಿ ಜೀವ ಉಳಿಸಿಕೊಂಡ ವ್ಯಕ್ತಿ