ನವದೆಹಲಿ : ದೇಶದ ಪ್ರಖ್ಯಾತ ಸ್ಮಾರ್ಟ್ಫೋನ್ ಕಂಪನಿ ಲಾವಾ ತನ್ನ ಅಗ್ನಿ 2 5ಜಿ (Agni 2 5G) ಸ್ಮಾರ್ಟ್ಫೋನ್ ಲಾಂಚ್ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಫೋನ್ curved AMOLED ಡಿಸ್‌ಪ್ಲೇ ಹೊಂದಿದೆ. 8GB RAM+256GB ಇಂಟರ್ನಲ್ ಸ್ಟೊರೇಜ್ ಮತ್ತು 16 GB ವರೆಗೆ ವಿಸ್ತರಿಸಬಹುದಾದ RAM ಹೊಂದಿರುವ ಅಗ್ನಿ 2 5ಜಿ ಮಧ್ಯಮ ಶ್ರೇಣಿಯ ಫೋನ್ ಆಗಿದೆ. ಫೋನ್ನ ಬೆಲೆ 21,999 ಆಗಿದ್ದು, ಪ್ರಮುಖ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ನಿಂದ ಪಾವತಿಸಿ ಖರೀದಿಸಿದರೆ 2000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಅಲ್ಲಿಗೆ ನೀವು ಈ ಫೋನ್ ಅನ್ನು 19,999 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಪಡೆಯಬಹುದು.
ಅಗ್ನಿ 2 5ಜಿ ಯ ತಾಂತ್ರಿಕ ವೈಶಿಷ್ಟ್ಯಗಳನ್ನು ನೋಡುವುದಾದರೆ - ಇದರಲ್ಲಿ ಆಧುನಿಕ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಇದ್ದು, ಆ್ಯಪ್ಗಳು ಮತ್ತು ಗೇಮಿಂಗ್ ಅನ್ನು ಯಾವುದೇ ಅಡೆತಡೆಯಿಲ್ಲದೇ ಬಳಸಬಹುದು. ಡೈಮೆನ್ಸಿಟಿ 7050 ಅನ್ನು MediaTek 5G UltraSave ಜೊತೆಗೆ ಸಂಯೋಜಿಸಲಾಗಿದೆ. ಇದರಿಂದ ಸ್ಟ್ರೀಮರ್‌ಗಳಿಗಾಗಿ ಶಕ್ತಿಯುತ MiraVision 4K HDR ವೀಡಿಯೊ ಸಂಸ್ಕರಣೆ, ಸೂಪರ್-ಫಾಸ್ಟ್ ರೆಸ್ಪಾನ್ಸಿವ್‌ನೆಸ್, ಹೈ-ರೆಸಲ್ಯೂಶನ್ ಡಿಸ್‌ಪ್ಲೇ ನಿಮಗೆ ಸಿಗುತ್ತವೆ. ಹೈಪರ್ ಇಂಜಿನ್ ಗೇಮಿಂಗ್ ಸಾಮರ್ಥ್ಯ ಇದರಲ್ಲಿದೆ.
ಹೆಚ್ಚಿನ ಕಾರ್ಯಕ್ಷಮತೆಗಾಗಿ ಈ ಫೋನ್ನಲ್ಲಿ ಸುಧಾರಿತ ಹೈಪರ್ ಎಂಜಿನ್ ಅಳವಡಿಸಲಾಗಿದೆ. ಇದು 2.6Ghz ವರೆಗಿನ ARM ಕಾರ್ಟೆಕ್ಸ್-A78 ಪ್ರೊಸೆಸರ್‌ಗಳನ್ನು ಹೊಂದಿದೆ. ಹೈಪರ್-ಎಂಜಿನ್ ಗೇಮಿಂಗ್‌ಗಾಗಿ 5G HSR ಮೋಡ್‌ನೊಂದಿಗೆ 40 ಪ್ರತಿಶತದಷ್ಟು ವೇಗದ ಡೌನ್‌ಲೋಡ್‌ಗಳನ್ನು ಸಕ್ರಿಯಗೊಳಿಸುತ್ತದೆ.
ಗ್ಲಾಸ್ ವಿರಿಡಿಯನ್ ಬಣ್ಣದ ಸಾಧನವು 120 Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ FHD+ ಸ್ಕ್ರೀನ್ ಅನ್ನು ಹೊಂದಿದೆ. ಇದು ಮೊಬೈಲ್ ಗೇಮರ್ಗಳಿಗೆ ಅತ್ಯಂತ ಸೂಕ್ತವಾದ ವೈಶಿಷ್ಟ್ಯವಾಗಿದೆ. ಇದರ ಡಿಸ್‌ಪ್ಲೇ 1.07 ಶತಕೋಟಿ ಬಣ್ಣಗಳನ್ನು ಹೊಂದಿದೆ ಮತ್ತು Widevine L1, HDR, HDR 10 ಮತ್ತು HDR10+ ಅನ್ನು ಬೆಂಬಲಿಸುತ್ತದೆ.
ಇದು ಸೂಪರ್ ಥಿನ್ 2.3mm ಬಾಟಮ್ ಬೆಜೆಲ್ ಅನ್ನು ಹೊಂದಿದೆ ಮತ್ತು 93.65 ಪ್ರತಿಶತದಷ್ಟು ಬಾಡಿ ಅನುಪಾತದಷ್ಟು ಸ್ಕ್ರೀನ್ ಅನ್ನು ಹೊಂದಿದೆ. ಇತ್ತೀಚಿನ ವೇಪರ್ ಚೇಂಬರ್ ಕೂಲಿಂಗ್ ತಂತ್ರಜ್ಞಾನ ಇದರಲ್ಲಿರುವುದರಿಂದ ಬಹಳ ಹೊತ್ತು ಗೇಮ್ ಆಡಿದರೂ ಫೋನ್ ಬಿಸಿಯಾಗುವುದಿಲ್ಲ. ಮುಂಭಾಗದಲ್ಲಿ ಇದು 3D ಡ್ಯುಯಲ್ ಕರ್ವ್ ವಿನ್ಯಾಸವನ್ನು ಹೊಂದಿದೆ. ಹೀಗಾಗಿ ಇದು ಕೈಯಲ್ಲಿ ಹಿಡಿದಿಡಲು ಸುಲಭವಾಗಿದೆ. ಅಗ್ನಿ 2 ಪ್ರೀಮಿಯಂ 3D ಗ್ಲಾಸ್ ಬ್ಯಾಕ್ ವಿನ್ಯಾಸವನ್ನು ಮ್ಯಾಟ್ ಫಿನಿಶ್ ಕೂಡ ಹೊಂದಿದೆ.
ಸಾಧನವು ಬ್ಲೋಟ್‌ವೇರ್ ಮುಕ್ತ Android 13 ಹೊಂದಿರುವುದರಿಂದ ನಿಮಗೆ ಯಾವುದೇ ಕಿರಿಕಿರಿಯಾಗುವ ಜಾಹೀರಾತುಗಳು ಅಥವಾ ಅನಗತ್ಯ ನೋಟಿಫಿಕೇಶನ್ಗಳು ಬರುವುದಿಲ್ಲ. ಜೊತೆಗೆ Android 14 ಮತ್ತು 15 ಗೆ ಅಪ್‌ಗ್ರೇಡ್ ಆಗುವ ಗ್ಯಾರಂಟಿ ಮತ್ತು 3 ವರ್ಷಗಳವರೆಗೆ ಖಚಿತವಾದ ತ್ರೈಮಾಸಿಕ ಸೆಕ್ಯೂರಿಟಿ ಅಪ್ಡೇಟ್ಗಳನ್ನು ನೀಡುತ್ತದೆ. ಅಗ್ನಿ 2 ಬಳಕೆದಾರರಿಗೆ ಪ್ರೀಮಿಯಂ ಚಂದಾದಾರಿಕೆ ಇಲ್ಲದೆ, ಬ್ಯಾಕ್ಗ್ರೌಂಡ್ನಲ್ಲಿ ಯೂಟ್ಯೂಬ್ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ.
ಇದನ್ನೂ ಓದಿ : AI ನಿಂದ ಉದ್ಯೋಗ ನಷ್ಟ ಸಾಧ್ಯತೆ: ಆದರೂ ಅನುಕೂಲಗಳೇ ಹೆಚ್ಚು!