ETV Bharat / science-and-technology

ಹೊಸ ತಂತ್ರಜ್ಞಾನದ ಮೂಲಕ ಕೆಲಸದ ಸಾಮರ್ಥ್ಯ ಹೆಚ್ಚಿಸಲು ಮುಂದಾದ ಮೈಕ್ರೋಸಾಫ್ಟ್.. - ಹೊಸ ತಂತ್ರಜ್ಞಾನದ ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್​​​​​ ತಂಡಗಳ ಆವೃತ್ತಿಯಲ್ಲಿ ಕೆಲ ವೈಶಿಷ್ಟ್ಯಗಳಿವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಹೊಸ ತಂತ್ರಜ್ಞಾನ ಯೋಜನೆಗಳ ಮೂಲಕ ಜನರನ್ನು ತಲುಪುವಲ್ಲಿ ಕೆಲಸ ಮಾಡಲು ಕಂಪನಿ ನಿರ್ಧರಿಸಿದೆ..

ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
author img

By

Published : Jun 18, 2021, 3:15 PM IST

ನವದೆಹಲಿ : ಮೈಕ್ರೋಸಾಫ್ಟ್ ಕಂಪನಿಯು ನೂತನ ತಂತ್ರಜ್ಞಾನದ ಮೂಲಕ ಕೆಲಸದ ಸಾಮರ್ಥ್ಯ ಹೆಚ್ಚಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ಇಂದು ನಾವು ಹೊಸ ಆವಿಷ್ಕಾರಗಳನ್ನು ಪ್ರಕಟಿಸಿದ್ದು, ‘ರೂಮ್ಸ್​​, ಫ್ಲೂಯಿಟ್ ಮತ್ತು ಮೈಕ್ರೋಸಾಫ್ಟ್​​​​​​​ ವಿವಾ’ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಕೆಲಸದ ಸಾಮರ್ಥ್ಯ ಹೆಚ್ಚಲಿದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2021ರ ಮೇ ತಿಂಗಳಿನಲ್ಲಿ ಕಂಪನಿಯು ಸಂಶೋಧನೆಯ ಆಧಾರದ ಮೇಲೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸುವ ವಿಡಿಯೋವೊಂದನ್ನು ಪ್ರಸಾರ ಮಾಡಿತ್ತು. ಈ ಟೆಕ್ನಾಲಜಿ ಬಳಸಿ ತಂಡಗಳು ಹೇಗೆ ಕಾರ್ಯ ನಿರ್ವಹಿಸಬಲ್ಲವು. ಸಣ್ಣ, ಮಧ್ಯಮ ಮತ್ತು ದೊಡ್ಡ ರೂಂಗಳಲ್ಲಿ ನಡೆಯುವ ಸಭೆಗಳಲ್ಲಿ ಸ್ಪೀಕರ್, ಕ್ಯಾಮೆರಾ ಮತ್ತು ಸ್ಕ್ರೀನ್‌ಗಳನ್ನು ಯಾವ ರೀತಿ ಬಳಸಬೇಕೆಂಬುದರ ಕುರಿತು ಇದರಲ್ಲಿ ಮಾಹಿತಿಯಿದೆ.

ಇದನ್ನೂ ಓದಿ:5 ಐಟಿ ಕಂಪನಿಗಳಿಂದ 96,000 ಉದ್ಯೋಗಿಗಳ ನೇಮಕಾತಿಗೆ ಯೋಜನೆ: ನಾಸ್ಕಾಮ್

ಕಂಪನಿಯು ತಾನು ನವೀಕರಿಸಿದ ಡಿಜಿಟಲ್ ಬೋರ್ಡ್​ನ ಸಹ ಈ ವೇಳೆ ಪ್ರದರ್ಶಿಸಿದೆ. ಒಂದೇ ಡಿಜಿಟಲ್ ಕ್ಯಾನ್ವಾಸ್​ನಡಿ ಎಲ್ಲರೂ ಭಾಗಿಯಾಗಲು ಅವಕಾಶ ಮಾಡಿಕೊಡುತ್ತದೆ. ಮೈಕ್ರೋಸಾಫ್ಟ್​​​​​ ತಂಡಗಳ ಆವೃತ್ತಿಯಲ್ಲಿ ಕೆಲ ವೈಶಿಷ್ಟ್ಯಗಳಿವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಹೊಸ ತಂತ್ರಜ್ಞಾನ ಯೋಜನೆಗಳ ಮೂಲಕ ಜನರನ್ನು ತಲುಪುವಲ್ಲಿ ಕೆಲಸ ಮಾಡಲು ಕಂಪನಿ ನಿರ್ಧರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.