ETV Bharat / science-and-technology

1 ಲಕ್ಷ ಬಳಕೆದಾರರನ್ನು ದಾಟಿದ ಜಾಕ್ ಡಾರ್ಸೆ ಬೆಂಬಲಿತ 'ಬ್ಲೂಸ್ಕೈ' - ಜಾಕ್ ಡಾರ್ಸೆ ಅವರಿಂದ ಬೆಂಬಲಿತವಾದ ಹೊಸ ಮೈಕ್ರೊ ಬ್ಲಾಗಿಂಗ್

ಜಾಕ್ ಡಾರ್ಸೆ ಅವರಿಂದ ಬೆಂಬಲಿತವಾದ ಹೊಸ ಮೈಕ್ರೊ ಬ್ಲಾಗಿಂಗ್ ಪ್ಲಾಟ್​ಫಾರ್ಮ್ ಬ್ಲೂಸ್ಕೈ 1 ಲಕ್ಷ ಬಳಕೆದಾರರನ್ನು ಹೊಂದಿ ಸ್ಥಿರವಾಗಿ ಬೆಳೆಯುತ್ತಿದೆ.

1 ಲಕ್ಷ ಬಳಕೆದಾರರನ್ನು ದಾಟಿದ ಜಾಕ್ ಡಾರ್ಸೆ ಬೆಂಬಲಿತ 'ಬ್ಲೂಸ್ಕೈ'

author img

By

Published : May 31, 2023, 2:28 PM IST

ನವದೆಹಲಿ : ಜಾಕ್ ಡಾರ್ಸೆ ಬೆಂಬಲಿತ ಮೈಕ್ರೊ ಬ್ಲಾಗಿಂಗ್ ಪ್ಲಾಟ್​ಫಾರ್ಮ್ ಬ್ಲೂಸ್ಕೈ​ ಒಟ್ಟು 3.19 ಮಿಲಿಯನ್ ಪೋಸ್ಟ್‌ಗಳೊಂದಿಗೆ 1,00,000 ಕ್ಕೂ ಹೆಚ್ಚು ಬಳಕೆದಾರರನ್ನು ದಾಟಿದೆ ಮತ್ತು ಸ್ಥಿರವಾಗಿ ಬೆಳೆಯುತ್ತಿದೆ. ಬ್ಲೂಸ್ಕೈ ಇದು ಟ್ವಿಟರ್ ಮಾದರಿಯ ಪ್ಲಾಟ್​ಫಾರ್ಮ್ ಆಗಿದ್ದು, ಇದನ್ನು ಟ್ವಿಟರ್​ಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆಹ್ವಾನದ ಮೂಲಕ ಮಾತ್ರ ಸೇರಬಹುದಾದ ಬ್ಲೂಸ್ಕೈ ಆಂಡ್ರಾಯ್ಡ್‌ನಲ್ಲಿ ಲಭ್ಯವಿದ್ದು, ಹಲವಾರು ಹೊಸ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಆರಂಭದಲ್ಲಿ ಇದನ್ನು iOS ಬಳಕೆದಾರರಿಗೆ ಫೆಬ್ರವರಿಯಲ್ಲಿ ಕ್ಲೋಸ್ಡ್​ ಬೀಟಾ ಆವೃತ್ತಿಯ ಮೂಲಕ ಪರಿಚಯಿಸಲಾಗಿತ್ತು.

ಬ್ಲೂಸ್ಕೈ ಬಳಕೆದಾರರಿಗೆ ಅಲ್ಗಾರಿದಮಿಕ್ ಆಯ್ಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಮತ್ತು ಲೈಕ್‌ಗಳು ಅಥವಾ ಬುಕ್‌ಮಾರ್ಕ್‌ಗಳನ್ನು ಟ್ರ್ಯಾಕ್ ಮಾಡಲು, ಟ್ವೀಟ್‌ಗಳನ್ನು ಎಡಿಟ್ ಮಾಡಲು, ಕೋಟ್-ಟ್ವೀಟಿಂಗ್, DM ಗಳು, ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದು ಮತ್ತು ಹೆಚ್ಚಿನವುಗಳಿಗೆ ಮೂಲ ಸಾಧನಗಳನ್ನು ಒಳಗೊಂಡಿದೆ. ಅಪ್ಲಿಕೇಶನ್ ಸರಳೀಕೃತವಾದ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ. ಇದರಲ್ಲಿ ನೀವು ಫೋಟೋಗಳನ್ನು ಒಳಗೊಂಡಿರುವ 256 ಅಕ್ಷರಗಳ ಪೋಸ್ಟ್ ಅನ್ನು ರಚಿಸಲು ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಬಹುದು. ಟ್ವಿಟರ್ ""What's happening?" ಎಂದು ಕೇಳಿದರೆ, ಬ್ಲೂಸ್ಕೈ "What's up?" ಎಂದು ಕೇಳುತ್ತದೆ.

ಬ್ಲೂಸ್ಕೈ ಬಳಕೆದಾರರು ಖಾತೆಗಳನ್ನು ಹಂಚಿಕೊಳ್ಳಬಹುದು, ಮ್ಯೂಟ್ ಮಾಡಬಹುದು ಮತ್ತು ನಿರ್ಬಂಧಿಸಬಹುದು. ಆದರೆ ಅವುಗಳನ್ನು ಲಿಸ್ಟ್​ಗಳಿಗೆ ಸೇರಿಸುವಂತಹ ಸುಧಾರಿತ ಪರಿಕರಗಳು ಇನ್ನೂ ಲಭ್ಯವಿಲ್ಲ. ಅಪ್ಲಿಕೇಶನ್‌ನ ನ್ಯಾವಿಗೇಶನ್‌ನ ಕೆಳಗಿನ ಮಧ್ಯಭಾಗದಲ್ಲಿರುವ ಡಿಸ್ಕವರ್ ಟ್ಯಾಬ್ ಉಪಯುಕ್ತವಾಗಿದೆ. ಇದು "who to follow" ಸಲಹೆಗಳನ್ನು ಮತ್ತು ಇತ್ತೀಚೆಗೆ ಪೋಸ್ಟ್ ಮಾಡಿದ ಬ್ಲೂಸ್ಕೈ ಅಪ್ಡೇಟ್​ಗಳ ಫೀಡ್ ಅನ್ನು ನೀಡುತ್ತದೆ. ಇನ್ನೊಂದು ಟ್ಯಾಬ್ ನಿಮಗೆ ಟ್ವಿಟರ್‌ನಂತೆಯೇ ಲೈಕ್ಸ್​, ಮರುಪೋಸ್ಟ್‌ಗಳು, ಫಾಲೋಗಳು ಮತ್ತು ಪ್ರತ್ಯುತ್ತರಗಳು ಸೇರಿದಂತೆ ನಿಮ್ಮ ನೋಟಿಫಿಕೇಶನ್​ಗಳನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ಆದರೆ ಇದರಲ್ಲಿ ಯಾವುದೇ DM ಗಳಿಲ್ಲ ಎಂದು ವರದಿಗಳು ಹೇಳಿವೆ.

ಟ್ವಿಟರ್​ನಲ್ಲಿರುವಂತೆ ನೀವು ಇತರ ವ್ಯಕ್ತಿಗಳನ್ನು ಹುಡುಕಬಹುದು ಮತ್ತು ಅವರನ್ನು ಫಾಲೋ ಮಾಡಬಹುದು. ನಂತರ ಅವರ ಅಪ್ಡೇಟ್​ಗಳನ್ನು ಹೋಮ್ ಟೈಮ್‌ಲೈನ್‌ನಲ್ಲಿ ವೀಕ್ಷಿಸಬಹುದು. ಬಳಕೆದಾರರ ಪ್ರೊಫೈಲ್‌ಗಳು ಪ್ರೊಫೈಲ್ ಚಿತ್ರ, ಹಿನ್ನೆಲೆ, ಬಯೋ ಮತ್ತು ಮೆಟ್ರಿಕ್‌ಗಳನ್ನು ಒಳಗೊಂಡಿರುತ್ತವೆ. ಟ್ವಿಟರ್​ ಕಂಪನಿಯ ಸಹ ಸಂಸ್ಥಾಪಕರಾಗಿದ್ದ ಜಾಕ್ ಡಾರ್ಸೆ ಬ್ಲೂಸ್ಕೈ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ ಮತ್ತು ಡಾರ್ಸೆ ಬ್ಲೂಸ್ಕೈಗೆ 13 ಮಿಲಿಯನ್ ಡಾಲರ್ ಫಂಡಿಂಗ್ ಮಾಡಿದ್ದಾರೆ.

ಜ್ಯಾಕ್ ಪ್ಯಾಟ್ರಿಕ್ ಡೋರ್ಸೆ ಅವರು 43 ವರ್ಷ ವಯಸ್ಸಿನ ಅಮೇರಿಕನ್ ಸಿಇಓ ಮತ್ತು ಎರಡು ಅತ್ಯಂತ ಯಶಸ್ವಿ ಟೆಕ್ ಕಂಪನಿಗಳಾದ ಟ್ವಿಟರ್ ಮತ್ತು ಸ್ಕ್ವೇರ್ ಇಂಕ್​ಗಳ ಸಹ-ಸಂಸ್ಥಾಪಕರಾಗಿದ್ದಾರೆ. 2006 ರಲ್ಲಿ ಟ್ವಿಟರ್ ಅನ್ನು ಪ್ರಾರಂಭಿಸಿದಾಗಿನಿಂದ ಇದು ವ್ಯಾಪಕವಾಗಿ ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಆಗಿ ಮಾರ್ಪಟ್ಟಿದೆ. ಸ್ಕ್ವೇರ್ ಒಂದು ಸಣ್ಣ ವ್ಯಾಪಾರ ಪಾವತಿ ಕಂಪನಿಯಾಗಿದ್ದು, ಇದನ್ನು 2009 ರಲ್ಲಿ ಸ್ಥಾಪಿಸಲಾಯಿತು ಮತ್ತು 2015 ರಲ್ಲಿ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಏಪ್ರಿಲ್ 2020 ರಲ್ಲಿ ಪ್ರಪಂಚದಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಡಾರ್ಸೆ ತಮ್ಮ ಸಂಪತ್ತಿನ ನಿವ್ವಳ ಮೌಲ್ಯದ ಶೇ 28ರಷ್ಟು ಅಂದರೆ 1 ಬಿಲಿಯನ್​ ಡಾಲರ್ ಹಣವನ್ನು ಕೋವಿಡ್​ ಪರಿಹಾರ ಕಾರ್ಯಗಳಿಗೆ ನೀಡುವುದಾಗಿ ವಾಗ್ದಾನ ಮಾಡಿದರು.

ಇದನ್ನೂ ಓದಿ : ಚೇತರಿಕೆಯತ್ತ ಅದಾನಿ ಸಮೂಹ: ಷೇರು ಬೆಲೆ ಏರಿಕೆ, ಗೌತಮ್ ಅದಾನಿ ಸಂಪತ್ತು ಮತ್ತೆ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.