ETV Bharat / science-and-technology

ಜೆಎಸ್​ಎಕ್ಸ್​ ಜೆಟ್​ನಲ್ಲಿ ಸಿಗಲಿದೆ ಇಂಟರ್ನೆಟ್​ ಸೇವೆ: ಮಸ್ಕ್​ಗೆ ಅಭಿನಂದಿಸಿದ ಪ್ರಯಾಣಿಕರು

author img

By

Published : Dec 9, 2022, 10:03 AM IST

ಜೆಎಸ್​ಎಕ್ಸ್​​ ವಿಮಾನದಲ್ಲಿ ಈ ವಾರದಿಂದ ಹೈ ಸ್ಪೀಡ್​ ಮತ್ತು ಕಡಿಮೆ ಸುಪ್ತತೆಯ ಅಂತರ್ಜಾಲ ಸೇವೆಯನ್ನು ಪ್ರಯಾಣಿಕರಿಗೆ ಈ ಸ್ಟಾರ್​ಲಿಂಕ್​ ನೀಡಲಿದೆ.

ಜೆಎಸ್​ಎಕ್ಸ್​ ಜೆಟ್​ನಲ್ಲಿ ಸಿಗಲಿದೆ ಇಂಟರ್ನೆಟ್​ ಸೇವೆ; ಮಸ್ಕ್​ಗೆ ಅಭಿನಂದಿಸಿದ ಪ್ರಯಾಣಿಕರು
internet-service-will-be-available-in-jsx-jet-passengers-congratulated-musk

ಸ್ಯಾನ್​ ಪ್ರಾನ್ಸಿಸ್ಕೊ( ಅಮೆರಿಕ): ಉಪಗ್ರಹ ಅಂತರ್ಜಾಲ ಸೇವೆ ಸ್ಟಾರ್​ಲಿಂಕ್​​​ ಅನ್ನು ಖಾಸಗಿ ಏರ್​ಲೈನ್ಸ್​ ಕಂಪನಿ ಮೊದಲ ಜೆಎಸ್​ಎಕ್ಸ್​ ಜೆಟ್​ನಲ್ಲಿ ನೀಡಲಾಗುವುದು ಎಂದು ಎಲೋನ್​ ಮಸ್ಕ್​ ಒಡೆತನದ ಸ್ಪೆಸ್​ಎಕ್ಸ್​ ಶುಕ್ರವಾರ ಟ್ವಿಟರ್​ ಮೂಲಕ ತಿಳಿಸಿದೆ.

ಜೆಎಸ್​ಎಕ್ಸ್​​ ವಿಮಾನದಲ್ಲಿ ಈ ವಾರದಿಂದ ಹೈ ಸ್ಪೀಡ್​ ಮತ್ತು ಕಡಿಮೆ ಸುಪ್ತತೆಯ ಅಂತರ್ಜಾಲ ಸೇವೆಯನ್ನು ಪ್ರಯಾಣಿಕರಿಗೆ ಈ ಸ್ಟಾರ್​ಲಿಂಕ್​ ನೀಡಲಿದೆ. ಇದರ ಜೊತೆಗೆ ಮತ್ತೊಂದು ಜೆಎಸ್​ಎಕ್ಸ್​ ಜೆಟ್​ನಲ್ಲಿ ಸ್ಟಾರ್​ಲಿಂಕ್​ ಅನ್ನು ಅಳವಡಿಸಲಾಗುವುದು. ಶೀಘ್ರವೇ ಪ್ರಯಾಣಿಕರು ವಿಮಾನದಲ್ಲೂ ಇಂಟರ್​ನೆಟ್​ ಸೇವೆ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ನು ವಿಮಾನದಲ್ಲಿ ಈ ಸೇವೆ ನೀಡುತ್ತಿರುವುದಕ್ಕೆ ಟ್ವಿಟರ್​ ಮೂಲಕ ಮಸ್ಕ್​ಗೆ ಪ್ರಯಾಣಿಕರು ಅಭಿನಂದನೆ ತಿಳಿಸಿದ್ದಾರೆ. ನನಗೆ ಇಷ್ಟವಾಯಿತು. ನೆಟ್​ಫ್ಲಿಕ್ಸ್​ ಅನ್ನು ನೋಡಬಹುದು. ಥ್ಯಾಂಕ್ಯು ಮಸ್ಕ್​ ಎಂದಿದ್ದಾರೆ

ಕಳೆದ ಅಕ್ಟೋಬರ್​ನಲ್ಲಿ ಸ್ಪೇಸ್​ಎಕ್ಸ್​​ ಕೆಲವು ಆಯ್ದ ವಿಮಾನಗಳಲ್ಲಿ ಉಪಗ್ರಹ ಅಂತರ್ಜಾಲ ಸೇವೆಯನ್ನು ನೀಡುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್​ನಲ್ಲಿ ಸ್ಟಾರ್​ಲಿಂಕ್​ ವಿಮಾನಗಳಲ್ಲಿ ಈ ಕುರಿತು ಪರೀಕ್ಷೆ ನಡೆಸಲಾಗಿದ್ದು, 100ಎಂಬಿಪಿಎಸ್​ ಇಂಟರ್​ನೆಟ್​ ಸೇವೆ ಪಡೆಯಲು ಸಾಧ್ಯವಾಯಿತು. ಬುರ್​ಬ್ಯಾಂಕ್​ ಮತ್ತು ಸ್ಯಾನ್​ ಜೋಸ್​ ಸ್ಥಳಗಳ ನಡುವಿನ ಹಾರಾಟದ ಜೆಎಸ್​ಎಕ್ಸ್​ ವಿಮಾನದಲ್ಲಿ ಇದು ಯಶಸ್ವಿಯಾಗಿತ್ತು.

ಇದನ್ನೂ ಓದಿ: ಮಾನವನ ಮಿದುಳಿಗೆ ಚಿಪ್​ ಅಳವಡಿಕೆ ಪರೀಕ್ಷೆಗೆ ಮುಂದಾದ ಮಸ್ಕ್​ ಸಂಸ್ಥೆ: ಏನಿದು ಹೊಸ ಯೋಜನೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.