ETV Bharat / science-and-technology

Instagram: ವಯಸ್ಸು ಕಂಡುಹಿಡಿಯಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಬಳಕೆ

author img

By

Published : Jul 1, 2022, 6:58 PM IST

ವಯಸ್ಸಿಗೆ ಸಂಬಂಧಿಸಿದ ಮಾಹಿತಿಯು ಇತರ ಬಳಕೆದಾರರಿಗೆ ಕಾಣುವುದಿಲ್ಲ. ಆದರೆ, ಬಳಕೆದಾರನ ವಯಸ್ಸನ್ನು ಆಧರಿಸಿ ಸೂಕ್ತ ಬಳಕೆದಾರ ಅನುಭವ ನೀಡಲು ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಮಾತ್ರ ಈ ಸಾಧನ ಬಳಸಲಾಗುವುದು ಎಂದು ಇನ್​ಸ್ಟಾಗ್ರಾಂ ಹೇಳಿದೆ.

Instagram using AI to verify user age in a bid to check if users are over 13

ಚಿಕ್ಕ ವಯಸ್ಸಿನ ಬಳಕೆದಾರರ ಸುರಕ್ಷತೆಗಾಗಿ, ಅಪ್ರಾಪ್ತರು ಖಾತೆಗಳನ್ನು ರಚಿಸದಂತೆ ತಡೆಗಟ್ಟಲು ಮತ್ತು ದೊಡ್ಡವರು ತಮಗೆ ಅಪರಿಚಿತರಾದ ಚಿಕ್ಕ ಮಕ್ಕಳನ್ನು ಸಂಪರ್ಕಿಸದಂತೆ ತಡೆಗಟ್ಟುವ ಉದ್ದೇಶದಿಂದ ಇನ್​ಸ್ಟಾಗ್ರಾಂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಆಧಾರಿತ ವಯಸ್ಸು ಪರಿಶೀಲನಾ ಸಾಫ್ಟ್‌ವೇರ್ ಸಾಧನವೊಂದನ್ನು ತಯಾರಿಸಿದೆ.

ಆದರೆ ಸದ್ಯಕ್ಕೆ ಈ ಸಾಧನವನ್ನು ಇನ್​ಸ್ಟಾಗ್ರಾಂ ಸಂಪೂರ್ಣ ಬಳಕೆಗೆ ತರುತ್ತಿಲ್ಲ. ಈಗ ಬಳಕೆದಾರನೊಬ್ಬನಿಗೆ 18 ವರ್ಷ ವಯಸ್ಸು ತುಂಬಿದೆಯಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಲು ಮಾತ್ರ ಈ ಸಾಧನ ಬಳಸಲಾಗುವುದು.

ವಯಸ್ಸಿಗೆ ಸಂಬಂಧಿಸಿದ ಮಾಹಿತಿಯು ಇತರ ಬಳಕೆದಾರರಿಗೆ ಕಾಣುವುದಿಲ್ಲ. ಆದರೆ, ಬಳಕೆದಾರನ ವಯಸ್ಸನ್ನು ಆಧರಿಸಿ ಸೂಕ್ತ ಬಳಕೆದಾರ ಅನುಭವ ನೀಡಲು ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಮಾತ್ರ ಈ ಸಾಧನ ಬಳಸಲಾಗುವುದು ಎಂದು ಇನ್​ಸ್ಟಾಗ್ರಾಂ ಹೇಳಿದೆ.

ಬಹುತೇಕ ಬಳಕೆದಾರರು ಅಸಲಿ ವಯಸ್ಸಿನ ಮಾಹಿತಿ ನೀಡುತ್ತಾರೆ. ಆದರೆ, ಚಿಕ್ಕ ಮಕ್ಕಳು ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡುವ ಸಾಧ್ಯತೆಯಿರುತ್ತದೆ. ಆನ್ಲೈನ್ ಮೂಲಕ ಒಬ್ಬರ ವಯಸ್ಸನ್ನು ಗುರುತಿಸುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮೆಟಾ ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಮತ್ತು ಮಶೀನ್ ಲರ್ನಿಂಗ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ.

ಅಪ್ರಾಪ್ತ ವಯಸ್ಕರ ವಯಸ್ಸು ಕಂಡುಹಿಡಿಯಲು ಅವರ ಫೇಸ್ ಸ್ಕ್ಯಾನಿಂಗ್ ಮಾಡುವಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಫೇಸ್ ಸ್ಕ್ಯಾನಿಂಗ್ ಆಪ್ಷನ್ ಬಳಸಬೇಕಾದರೆ ಬಳಕೆದಾರನೊಬ್ಬ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಬೇಕಾಗುತ್ತದೆ. ಈ ವಿಡಿಯೋ ನಂತರ ಯೋಟಿ ಎಂಬ ಕಂಪನಿಗೆ ರವಾನೆಯಾಗುತ್ತದೆ. ಅಲ್ಲಿ ಬಳಕೆದಾರನ ವಯಸ್ಸನ್ನು ಅಂದಾಜಿಸಲಾಗುತ್ತದೆ. ಮಕ್ಕಳು ಆ್ಯಪ್ ಮೇಲೆ ಎಷ್ಟು ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ಸಹ ಈ ಟೆಕ್ನಾಲಜಿ ಮೂಲಕ ಪಾಲಕರು ನಿಗಾ ಇಡಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.