ETV Bharat / science-and-technology

'ಗಡಿಗಳಲ್ಲಿ ಗಸ್ತು ತಿರುಗಲು ಶೀಘ್ರದಲ್ಲೇ ರೋಬೋಟ್​ಗಳು ಲಭ್ಯ' - ರೋಬೋಟ್ ವಲಯ ವಿಸ್ತಾರ

ನಿರ್ಬಂಧಿತ ಪ್ರದೇಶಗಳಿಗೆ ಯಾರಾದರೂ ಪ್ರವೇಶಿಸಿದರೆ ಗುಂಡಿನ ದಾಳಿಯನ್ನು ನಡೆಸುವಂತೆಯೂ ಈ ರೋಬೋಗಳನ್ನು ವಿನ್ಯಾಸ ಮಾಡುತ್ತಿದ್ದೇವೆ. ಇವು ಬುಲೆಟ್ ಪ್ರೂಫ್ ಆಗಿರುತ್ತವೆ ಎಂದು ಐರಾ ಅಧ್ಯಕ್ಷ ಪಿಎಸ್‌ವಿ ಕಿಶನ್ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ..

INDIGENOUS ROBOT WILL AVAILABLE SOON FOR PATROLLING ALONG THE COUNTRY BORDERS
'ಗಡಿಗಳಲ್ಲಿ ಗಸ್ತು ತಿರುಗಲು ಶೀಘ್ರದಲ್ಲೇ ರೋಬೋಟ್​ಗಳು ಲಭ್ಯ'
author img

By

Published : Jan 30, 2022, 1:43 PM IST

ರೋಬೋಟ್‌ಗಳು ಮಾನವರು ಮಾಡಲಾಗದ ಅತ್ಯಂತ ಕಷ್ಟದ ಕೆಲಸಗಳನ್ನು ನಿರ್ವಹಿಸುತ್ತವೆ. ಭವಿಷ್ಯದಲ್ಲಿ ರೋಬೋಟ್‌ಗಳು ನಮ್ಮ ದೇಶದ ಗಡಿಗಳಲ್ಲಿ ಗಸ್ತು ತಿರುಗಲಿವೆ. ಹೈದರಾಬಾದ್ ಮೂಲದ ಆಲ್ ಇಂಡಿಯಾ ರೊಬೊಟಿಕ್ಸ್ ಅಸೋಸಿಯೇಷನ್ ​​(ಎಐಆರ್‌ಎ ಅಥವಾ ಐರಾ) ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ರಕ್ಷಣಾ ರೋಬೋಟ್‌ಗಳ ಉತ್ಪಾದನೆಯನ್ನು ಆರಂಭಿಸಿದೆ. ಆಗಸ್ಟ್ ವೇಳೆಗೆ ರಕ್ಷಣಾ ರೋಬೋಟ್ ಅನ್ನು ಸಿದ್ಧಪಡಿಸುವ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಐರಾ ಅಧ್ಯಕ್ಷ ಪಿಎಸ್‌ವಿ ಕಿಶನ್ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಮ್ಮ ದೇಶದ ಸೇನೆಯಲ್ಲಿ ರೋಬೋಟ್​ಗಳಿವೆಯೇ?: ಚೀನಾ ನಮ್ಮ ದೇಶದ ಗಡಿಯಲ್ಲಿ ರೋಬೋಟ್‌ಗಳನ್ನು ನಿಯೋಜಿಸಿದೆ ಎಂಬ ವರದಿಗಳು ಬಂದಿವೆ. ಇಸ್ರೇಲ್ ಮತ್ತು ಅಮೆರಿಕ ಕೂಡ ಈ ಮೊದಲಿನಿಂದಲೂ ಸೇನೆಯಲ್ಲಿ ರೋಬೋಟ್​ಗಳನ್ನು ನೇಮಿಸಿವೆ. ನಮ್ಮ ರಕ್ಷಣಾ ಸಂಸ್ಥೆಗಳಲ್ಲಿಯೂ ರೋಬೋಟ್‌ಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಸೇನೆಯಲ್ಲಿ ಇದರ ಬಳಕೆಯ ಬಗ್ಗೆ ಸರ್ಕಾರ ಇನ್ನೂ ಹೇಳಿಕೆ ನೀಡಿಲ್ಲ.

ಐರಾ ರಕ್ಷಣಾ ವಿನ್ಯಾಸದ ರೋಬೋಟ್ ಹೇಗಿರಲಿದೆ?: ನಮ್ಮ ಸಂಸ್ಥೆ ರೂಪಿಸುತ್ತಿರುವ ರೊಬೋಟ್ ಸೇನಾ ಟ್ಯಾಂಕರ್‌ನಂತೆಯೇ 4.5 ಅಡಿ ಎತ್ತರವಿರುತ್ತದೆ. ಹಿಮ, ಬೆಟ್ಟಗಳು, ಮರುಭೂಮಿಯಂತಹ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿಯೂ ಕೆಲಸ ಮಾಡಲು ಅನುವಾಗುವಂತೆ ರೋಬೋಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ. ಆ ರೋಬೋಗಳು ಗಸ್ತು ತಿರುಗುತ್ತವೆ. ಯಾವುದೇ ಬಾಂಬ್​ಗಳಿದ್ದರೆ, ಅವುಗಳನ್ನು ಪತ್ತೆ ಹಚ್ಚುತ್ತವೆ.

ನಿರ್ಬಂಧಿತ ಪ್ರದೇಶಗಳಿಗೆ ಯಾರಾದರೂ ಪ್ರವೇಶಿಸಿದರೆ ಗುಂಡಿನ ದಾಳಿಯನ್ನು ನಡೆಸುವಂತೆಯೂ ಈ ರೋಬೋಗಳನ್ನು ವಿನ್ಯಾಸ ಮಾಡುತ್ತಿದ್ದೇವೆ. ಇವು ಬುಲೆಟ್ ಪ್ರೂಫ್ ಆಗಿದ್ದು, ಇವುಗಳು ಹಾರಿಸುವ ಗುಂಡು ಔಷಧದಿಂದ ಕೂಡಿದ್ದು, ಗುಂಡು ಹೊಕ್ಕಿದ ವ್ಯಕ್ತಿ ಕುಸಿದು ಬೀಳುತ್ತಾನೆ. ಈ ಹಿಂದೆ ಪೊಲೀಸ್ ರೋಬೋಟ್ ಮಾಡಿದ ಅನುಭವವಿದೆ. ನಿವೃತ್ತ ಸೇನಾ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ, ಡಿಫೆನ್ಸ್ ರೋಬೋಟ್ ಯೋಜನೆಯನ್ನು ಘೋಷಿಸಲಾಗಿದೆ. ಮಾದರಿ ಸಿದ್ಧವಾದ ನಂತರ ನಾವು ಮಿಲಿಟರಿ ಅಧಿಕಾರಿಗಳ ಮುಂದೆ ರೋಬೋಟ್​​ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತೇವೆ. ಅವರ ಸೂಚನೆಗಳೊಂದಿಗೆ ನಾವು ಅಂತಿಮ ರೋಬೋಟ್ ವಿನ್ಯಾಸವನ್ನು ಅಂತಿಮಗೊಳಿಸುತ್ತೇವೆ.

ರೋಬೋ ವಲಯದಲ್ಲಿ ಅವಕಾಶಗಳಿವೆಯೇ?: ಭಾರತವು ರೋಬೋಗಳನ್ನು ಉತ್ಪಾದಿಸಿ, ವಿದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ದೊಡ್ಡ ಕಂಪನಿಗಳು ಭಾರತದಲ್ಲಿ ರೋಬೋಟ್ ತಯಾರಿಕೆಗಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ, ಸಂಪನ್ಮೂಲಗಳು ಬೇಕಾಗುತ್ತವೆ. ಸೂಕ್ತ ಮಾನವ ಸಂಪನ್ಮೂಲವೂ ಅಗತ್ಯವಿದೆ.

ವಿದ್ಯಾರ್ಥಿಗಳನ್ನು ರೋಬೋ ಕ್ಷೇತ್ರದಲ್ಲಿ ಉತ್ತೇಜಿಸಲು ನಾವು ಸಾರ್ವಜನಿಕ ಶಾಲೆಗಳಲ್ಲಿ ಐಆರ್​ಎ ವತಿಯಿಂದ ರೊಬೊಟಿಕ್ಸ್ ಲ್ಯಾಬ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಐಆರ್​ಎ ನಿರ್ದೇಶಕರಾದ ಶ್ರೀಚರಣ್ ಲಕ್ಕರಾಜು ಮತ್ತು ಶ್ರೀನಿವಾಸ್ ಮಾಧವಂ ಈ ಕುರಿತು ಕೆಲಸ ಮಾಡುತ್ತಿದ್ದಾರೆ. ಐಆರ್​ಎ 2023ರ ವೇಳೆಗೆ ಸ್ಟಾರ್ಟ್ ಅಪ್‌ಗಳಿಗಾಗಿ 350 ಮಿಲಿಯನ್ ಡಾಲರ್ (ಅಂದಾಜು ರೂ. 2,600 ಕೋಟಿ) ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಸೇರಿ ಮುಂದಿನ ಐದು ವರ್ಷಗಳಲ್ಲಿ 15 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಾವು ಅಂದಾಜಿಸಿದ್ದೇವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರೊಬೊಟಿಕ್ಸ್ ಕ್ಷೇತ್ರದಲ್ಲಿ ಅನೇಕ ಸ್ಟಾರ್ಟಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೈದರಾಬಾದ್‌ನಲ್ಲಿಯೇ ಸುಮಾರ 15 ಸ್ಟಾರ್ಟಪ್​ಗಳಿವೆ. ಅವರು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದಾರೆ. ಹಣಕಾಸಿನ ಸಮಸ್ಯೆ ಹೆಚ್ಚಿದೆ. ತೆಲಂಗಾಣ ಕೈಗಾರಿಕೆಗಳ ಕಾರ್ಯದರ್ಶಿ ಜಯೇಶ್ ರಂಜನ್ ಅವರ ಸಲಹೆಯ ಮೇರೆಗೆ ನಾವು ಐಆರ್​ಎ ಅನ್ನು ಸ್ಥಾಪಿಸಿದ್ದೇವೆ. ನಾವು ಎರಡು ವರ್ಷಗಳ ಹಿಂದೆ ರೋಬೋಟ್‌ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ ಐಆರ್​ಎ ಅನ್ನು ಸ್ಥಾಪಿಸಿದ್ದೇವೆ.

ಇದನ್ನೂ ಓದಿ: ಮಹಾತ್ಮನ ಸ್ಮರಣೆ : ತಮ್ಮ ಸಾವನ್ನು ಊಹಿಸಿದ್ದರಾ ಗಾಂಧೀಜಿ?.. ಕೊನೇ ದಿನದ ಸನ್ನಿವೇಶಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.