ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ನವೆಂಬರ್ 26 ರಂದು ಉಡಾವಣೆ ಮಾಡಿದ ಭೂ ವೀಕ್ಷಣಾ ಉಪಗ್ರಹ - 06 ಚಿತ್ರಗಳನ್ನು ತೆಗೆದು ಕಳುಹಿಸುವ ಸೇವೆ ಆರಂಭಿಸಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಬುಧವಾರ ತಿಳಿಸಿದೆ.
ಹಿಮಾಲಯ ಪ್ರದೇಶ, ಗುಜರಾತ್ನ ಕಚ್ ಪ್ರದೇಶ ಮತ್ತು ಅರಬ್ಬಿ ಸಮುದ್ರವನ್ನು ಒಳಗೊಂಡಿರುವ ತೆಲಂಗಾಣದ ಶಾದ್ನಗರದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದಲ್ಲಿ ಮಂಗಳವಾರ ಸ್ವೀಕರಿಸಿದ ಮೊದಲ ದಿನದ ಚಿತ್ರಗಳನ್ನು ಬೆಂಗಳೂರಿನ ಪ್ರಧಾನ ಕಚೇರಿ ಇಸ್ರೋ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಅವುಗಳನ್ನು ಓಷನ್ ಕಲರ್ ಮಾನಿಟರ್ (OCM) ಮತ್ತು ಸೀ ಸರ್ಫೇಸ್ ಟೆಂಪರೇಚರ್ ಮಾನಿಟರ್ (SSTM) ಸಂವೇದಕಗಳು (on board EOS-06)) ಈ ಚಿತ್ರವನ್ನು ಸೆರೆಹಿಡಿದಿವೆ ಎಂದು ತಿಳಿಸಿದೆ.
ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ ಶಂಕರನ್ ಮತ್ತು ಎನ್‌ಆರ್‌ಎಸ್‌ಸಿ ನಿರ್ದೇಶಕ ಪ್ರಕಾಶ್ ಚೌಹಾಣ್ ಅವರ ಸಮ್ಮುಖದಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ವರ್ಚುಯಲ್ ಮೋಡ್‌ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ:2028ರ ಹೊತ್ತಿಗೆ 690 ಮಿಲಿಯನ್ ಭಾರತೀಯರ ಬಳಿ ಇರಲಿದೆ 5ಜಿ ಮೊಬೈಲ್ ಸೇವೆ: ವರದಿ