ನವದೆಹಲಿ: ಅಪರೂಪದ ಸೂಪರ್ನೋವಾ ಸ್ಫೋಟ ಪತ್ತೆಹಚ್ಚಿರುವ ಭಾರತೀಯ ಖಗೋಳಶಾಸ್ತ್ರಜ್ಞರು ಇದನ್ನು ವೊಲ್ಫ್ - ರಯೆಟ್ ನಕ್ಷತ್ರಗಳು ಅಥವಾ ಡಬ್ಲ್ಯುಆರ್ ನಕ್ಷತ್ರಗಳು ಎಂದು ಕರೆಯಲಾಗುವ ಅತ್ಯಂತ ವಿಶೇಷ ನಕ್ಷತ್ರಗಳಾಗಿವೆ ಎಂದು ಹೇಳಿದ್ದಾರೆ.
ಅಪರೂಪದ ವುಲ್ಫ್-ರಯೆಟ್ ನಕ್ಷತ್ರಗಳು ಸೂರ್ಯನ ಸಾವಿರ ಪಟ್ಟು ಹೆಚ್ಚು ಪ್ರಕಾಶಮಾನವಾದ ವಸ್ತುಗಳಾಗಿದ್ದು, ಇವುಗಳು ಖಗೋಳಶಾಸ್ತ್ರಜ್ಞರಲ್ಲಿ ದೀರ್ಘಕಾಲದಿಂದ ಕುತೂಹಲ ಕೆರಳಿಸಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅವು ಬೃಹತ್ ನಕ್ಷತ್ರಗಳಾಗಿದ್ದು, ಅವುಗಳ ಹೊರಗಿನ ಹೈಡ್ರೋಜನ್ ಹೊದಿಕೆ ಬೇರ್ಪಟ್ಟಾಗ, ಇದು ಹೀಲಿಯಂ ಮತ್ತು ಇತರ ಅಂಶಗಳ ಸಮ್ಮಿಳನಕ್ಕೆ ಕಾರಣವಾಗುತ್ತವೆ.
ಕೆಲವು ವಿಧದ ಬೃಹತ್ ಪ್ರಕಾಶಮಾನವಾದ ಸೂಪರ್ನೋವಾ ಸ್ಫೋಟವನ್ನು ಪತ್ತೆಹಚ್ಚಿರುವುದು ವಿಜ್ಞಾನಿಗಳಿಗೆ ಇನ್ನಷ್ಟು ನಕ್ಷತ್ರಗಳ ಕುರಿತು ತನಿಖೆ ಮಾಡಲು ಸಹಾಯ ಮಾಡಲಿದೆ.
ಸೂಪರ್ನೋವಾಗಳು ಬ್ರಹ್ಮಾಂಡದಲ್ಲಿ ಹೆಚ್ಚು ಶಕ್ತಿಯುತವಾದ ಸ್ಫೋಟಗಳಾಗಿದ್ದು, ಅವುಗಳು ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.