ETV Bharat / science-and-technology

ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ 30ರಷ್ಟು ಕುಸಿತ: 5ಜಿ ಟ್ಯಾಬ್ಲೆಟ್ ಮಾರಾಟ ಏರಿಕೆ - 5ಜಿ ಟ್ಯಾಬ್ಲೆಟ್ ಮಾರಾಟ

ದೇಶದ ಒಟ್ಟಾರೆ ಟ್ಯಾಬ್ಲೆಟ್​ ಮಾರಾಟ ಕುಸಿತವಾಗಿದೆ ಎಂದು ವರದಿ ಹೇಳಿದೆ. ಆದರೆ ಇದೇ ಅವಧಿಯಲ್ಲಿ 5ಜಿ ಟ್ಯಾಬ್ಲೆಟ್ ಮಾರಾಟ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

India tablet market fell 30% in Q1 2023: Report

author img

By

Published : May 11, 2023, 7:44 PM IST

ನವದೆಹಲಿ : 2023 ರ ಮೊದಲ ತ್ರೈಮಾಸಿಕದಲ್ಲಿ (Q1) ಭಾರತದಲ್ಲಿ ಒಟ್ಟಾರೆ ಟ್ಯಾಬ್ಲೆಟ್ ಮಾರುಕಟ್ಟೆಯು ಶೇಕಡಾ 30 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ. ಹಾಗೆಯೇ ಮೊದಲ ತ್ರೈಮಾಸಿಕದಲ್ಲಿ 5ಜಿ ಟ್ಯಾಬ್ಲೆಟ್ ಮಾರಾಟ ಶೇ 4ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ 36 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. CyberMedia Research (CMR) ಪ್ರಕಾರ, ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯು ಶೇಕಡಾ 12 ರಷ್ಟು (ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ) ಬೆಳೆದಿದೆ. ಅದರಂತೆ 2023 ರಲ್ಲಿ 4G ಟ್ಯಾಬ್ಲೆಟ್‌ಗಳ ಮಾರಾಟ ಶೇಕಡಾ 55 ಶೇಕಡಾ ರಷ್ಟು (ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ) ಬೆಳವಣಿಗೆಯನ್ನು ದಾಖಲಿಸಿದೆ.

"ಒಟ್ಟಾರೆ ಟ್ಯಾಬ್ಲೆಟ್ ಮಾರುಕಟ್ಟೆಯು ವಾರ್ಷಿಕ ಆಧಾರದ ಮೇಲೆ ಕ್ಷೀಣಿಸಿದರೂ, ಟ್ಯಾಬ್ಲೆಟ್ ಮಾರುಕಟ್ಟೆಯ ಬೆಳವಣಿಗೆಗೆ ಇನ್ನೂ ಅವಕಾಶಗಳಿರುವುದು ಕಾಣಿಸುತ್ತಿದೆ. 4G ಮತ್ತು 5G ಸಂಪರ್ಕ ಆಯ್ಕೆಗಳೊಂದಿಗೆ ಟ್ಯಾಬ್ಲೆಟ್‌ಗಳ ಮೇಲೆ ನಿರ್ದಿಷ್ಟ ಗಮನವನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, ಗ್ರಾಹಕರು ಕೆಲಸಕ್ಕಾಗಿ, ಮನರಂಜನೆ ಮತ್ತು ಶಿಕ್ಷಣದ ಕಂಪ್ಯಾನಿಯನ್ ಸಾಧನಗಳಾಗಿ ಟ್ಯಾಬ್ಲೆಟ್‌ಗಳ ಬಳಕೆಯನ್ನು ಮುಂದುವರಿಸುತ್ತಾರೆ" ಎಂದು ಸೈಬರ್ ಮೀಡಿಯಾ ರಿಸರ್ಚ್ ಕಂಪನಿಯ ಉದ್ಯಮ ಗುಪ್ತಚರ ಗುಂಪಿನ ವಿಶ್ಲೇಷಕರಾದ ಮೇನಕಾ ಕುಮಾರಿ ಹೇಳಿದರು.

2013ರ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ (ಶೇ 29), ಆಪಲ್ (ಶೇ 23) ಮತ್ತು ಲೆನೊವೊ (ಶೇ 17) ರಷ್ಟು ಪಾಲು ಹೊಂದಿದ್ದು, ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಇದಲ್ಲದೆ, ಎಂಟು ಇಂಚಿನ ಡಿಸ್​ಪ್ಲೇ ಹೊಂದಿರುವ ಟ್ಯಾಬ್ಲೆಟ್‌ಗಳ ಮಾರುಕಟ್ಟೆಯು ಭಾರತೀಯ ಮಾರುಕಟ್ಟೆಯಲ್ಲಿನ ಒಟ್ಟಾರೆ ಮಾರುಕಟ್ಟೆಯ ಶೇಕಡಾ 26 ರಷ್ಟಿದೆ ಎಂದು ವರದಿಯು ಉಲ್ಲೇಖಿಸಿದೆ. ಆದರೆ 10 ಇಂಚಿನ ಮತ್ತು ಅದಕ್ಕಿಂತ ದೊಡ್ಡ ಸ್ಕ್ರೀನ್​​ಗಳನ್ನು ಹೊಂದಿರುವ ಟ್ಯಾಬ್ಲೆಟ್‌ಗಳು ಒಟ್ಟು ಮಾರಾಟದಲ್ಲಿ ಶೇ 65ರಷ್ಟು ಕೊಡುಗೆ ನೀಡಿವೆ. ಒಟ್ಟಾರೆ ಟ್ಯಾಬ್ಲೆಟ್ ಮಾರುಕಟ್ಟೆಯು 2023 ರಲ್ಲಿ ಸುಮಾರು 5 ರಿಂದ 10 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ವರದಿ ಅಂದಾಜಿಸಿದೆ.

ಟ್ಯಾಬ್ಲೆಟ್, ಟ್ಯಾಬ್ಲೆಟ್ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಪಿಸಿ ಎನ್ನುವುದು ಒಂದು ಅಥವಾ ಎರಡೂ ಕೈಯಲ್ಲಿ ಹಿಡಿಯಲು ವಿನ್ಯಾಸಗೊಳಿಸಲಾದ ಮೊಬೈಲ್ ಕಂಪ್ಯೂಟಿಂಗ್ ಸಾಧನವಾಗಿದೆ. ಇದು ಸರಿಸುಮಾರು ಹಾರ್ಡ್‌ಕವರ್ ಪುಸ್ತಕದ ಗಾತ್ರದಲ್ಲಿರುತ್ತದೆ (ಏಳು ಇಂಚುಗಳು ಅಥವಾ ದೊಡ್ಡದು) ಮತ್ತು ದೊಡ್ಡ ಸ್ಮಾರ್ಟ್‌ಫೋನ್ ಅನ್ನು ಹೋಲುತ್ತದೆ. ಟ್ಯಾಬ್ಲೆಟ್‌ಗಳು ಸಾಂಪ್ರದಾಯಿಕ ಕಂಪ್ಯೂಟರ್‌ನಂತೆಯೇ ಅನೇಕ ಕೆಲಸಗಳನ್ನು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಇಂಟರ್ನೆಟ್ ಬ್ರೌಸ್ ಮಾಡಬಹುದು, ಸಾಮಾಜಿಕ ನೆಟ್‌ವರ್ಕ್ ಅಪ್ಲಿಕೇಶನ್‌ಗಳಿಗೆ ಸಂಪರ್ಕಿಸಬಹುದು ಮತ್ತು HD ವೀಡಿಯೊಗಳನ್ನು ನೋಡಬಹುದು.

ಆರಂಭಿಕ ಟ್ಯಾಬ್ಲೆಟ್ ಸಾಧನಗಳು ಲೈಟ್ ಪೆನ್​ಗಳು ಅಥವಾ ಸ್ಟೈಲಸ್ ಅನ್ನು ತಮ್ಮ ಇನ್‌ಪುಟ್ ಸಾಧನವಾಗಿ ಬಳಸುತ್ತಿದ್ದವು. ಆದಾಗ್ಯೂ, ಇಂದು ಎಲ್ಲಾ ಟ್ಯಾಬ್ಲೆಟ್‌ಗಳು ಕೀಬೋರ್ಡ್‌ನಂತಹ ಬಾಹ್ಯ ಸಾಧನಗಳನ್ನು ಸಂಪರ್ಕಿಸುವ ಆಯ್ಕೆಯೊಂದಿಗೆ ತಮ್ಮ ಪ್ರಾಥಮಿಕ ಇನ್‌ಪುಟ್ ಸಾಧನವಾಗಿ ಟಚ್ ಸ್ಕ್ರೀನ್ ಅನ್ನು ಬಳಸುತ್ತವೆ. ಹೆಚ್ಚಿನ ಟ್ಯಾಬ್ಲೆಟ್‌ಗಳು ಹಿಂಭಾಗ, ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಹೀಗೆ ಕೆಲವೇ ಭೌತಿಕ ಗುಂಡಿಗಳನ್ನು ಮಾತ್ರ ಹೊಂದಿರುತ್ತವೆ. ಉಳಿದಂತೆ ಎಲ್ಲ ಕೆಲಸಗಳನ್ನು ನಿಮ್ಮ ಬೆರಳುಗಳನ್ನು ಬಳಸಿ ಮಾಡಬಹುದು.

ಇದನ್ನೂ ಓದಿ : ನೋಕಿಯಾ ಬಜೆಟ್ ಸ್ಮಾರ್ಟ್​ಫೋನ್ C22 ಭಾರತದಲ್ಲಿ ಬಿಡುಗಡೆ: ಬೆಲೆ 7,999 ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.