ETV Bharat / science-and-technology

ಶೀಘ್ರ ಬರಲಿವೆ ಬೇಕಾದಲ್ಲಿಗೆ ನಮ್ಮನ್ನು ಕರೆದೊಯ್ಯಬಲ್ಲ ಡ್ರೋನ್​ - ರಿಮೋಟ್​ ತಂತ್ರಜ್ಞಾನ ಸಂಶೋಧನೆ

ಇಬ್ಬರು ವ್ಯಕ್ತಿಗಳನ್ನು ಹೊತ್ತು ಸಾಗಬಲ್ಲ ಡ್ರೋನ್​ಗಳ ಪರೀಕ್ಷಣೆ ಸದ್ಯ ನಡೆಯುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳು ಈ ಬಾರಿ ಐಐಟಿ ಕ್ಯಾಂಪಸ್​ನಲ್ಲಿ ಇದರ ಪ್ರಾಯೋಗಿಕ ಪ್ರದರ್ಶನ ನೀಡಲಿದ್ದಾರೆ.

IIT Hyderabad invented drones that carry humans and driverless bicycles

author img

By

Published : Jun 25, 2022, 2:37 PM IST

"ಕೆಲಸಗಳನ್ನು ರಿಮೋಟ್​ ಆಗಿ ಕಂಟ್ರೋಲ್ ಮಾಡುವುದು ನಮಗೆಲ್ಲ ತಿಳಿದಿದೆ.. ಆದರೆ.. ರಿಮೋಟ್ ಆಗಿ ಮನುಷ್ಯರನ್ನು ಸಾಗಿಸುವಂತಾದರೆ.. ನೀವು ರೈಲಿನಿಂದ ಬಂದಿಳಿದ ರೈಲು ನಿಲ್ದಾಣಕ್ಕೆ ಅಥವಾ ಬಸ್ ನಿಲ್ದಾಣಕ್ಕೆ ನಿಮ್ಮ ಸೈಕಲ್ ಹಾರಿ ಬಂದರೆ?.. ಇದೆಲ್ಲ ಸಾಧ್ಯವಾ?" ಹೈದರಾಬಾದ್ ಐಐಟಿ ಸಂಶೋಧಕರು ಇದನ್ನೆಲ್ಲ ವಾಸ್ತವ ರೂಪಕ್ಕಿಳಿಸಲು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.

ಕೇಂದ್ರದ ವಿಜ್ಞಾನ ಮತ್ತು ಮತ್ತು ತಂತ್ರಜ್ಞಾನ ಸಚಿವಾಲಯವು ದೇಶಾದ್ಯಂತ ಇರುವ ಐಐಟಿಗಳಿಗೆ ಹಲವಾರು ಪ್ರೊಜೆಕ್ಟ್​ಗಳ ಮೇಲೆ ಕೆಲಸ ಮಾಡುವಂತೆ ಸೂಚಿಸಿದೆ ಹಾಗೂ ಇವುಗಳ ಮೇಲೆ ಸಂಶೋಧನೆಗಳನ್ನು ನಡೆಸಿದೆ. ಇದೇ ಪ್ರೊಜೆಕ್ಟ್​ ಅಂಗವಾಗಿ, ಭೂಮಿ, ನೀರು ಹಾಗೂ ಆಕಾಶದಲ್ಲಿ ಚಲಿಸಬಲ್ಲ ಚಾಲಕರಹಿತ ವಾಹನಗಳ ಬಗ್ಗೆ ಸಂಶೋಧನೆಗಳು ನಡೆದಿವೆ.

ಇಬ್ಬರು ವ್ಯಕ್ತಿಗಳನ್ನು ಹೊತ್ತು ಸಾಗಬಲ್ಲ ಡ್ರೋನ್​ಗಳ ಪರೀಕ್ಷಣೆ ಸದ್ಯ ನಡೆಯುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳು, ಈ ಬಾರಿ ಐಐಟಿ ಕ್ಯಾಂಪಸ್​ನಲ್ಲಿ ಇದರ ಪ್ರಾಯೋಗಿಕ ಪ್ರದರ್ಶನ ನೀಡಲಿದ್ದಾರೆ. ಚಾಲಕನ ಅಗತ್ಯವಿಲ್ಲದೆ ಜಿಪಿಎಸ್ ಆಧಾರಿತ ಸ್ಥಳಕ್ಕೆ ಡ್ರೋನ್​ಗಳು ಮನುಷ್ಯರನ್ನು ಹೊತ್ತೊಯ್ಯಲಿವೆ. ಈ ಪ್ರಯೋಗಗಳು ಯಶಸ್ವಿಯಾದಲ್ಲಿ, ಇವನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಚಿಂತನೆಯಿದೆ.

ಸ್ವಾಯತ್ತ ಸಂಚಾರ ವ್ಯವಸ್ಥೆಯ ಬಗ್ಗೆ ಕೆಲಸ ಮಾಡುತ್ತಿರುವ ಐಐಟಿ ಸಂಶೋಧಕರು ಚಾಲಕರಹಿತ ಬೈಸಿಕಲ್​ಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ರೈಲು ಅಥವಾ ಬಸ್ ನಿಲ್ದಾಣದಲ್ಲಿ ನಾವು ಇಳಿದ ನಂತರ ಪಾರ್ಕಿಂಗ್ ಸ್ಥಳದಲ್ಲಿರುವ ಬೈಸಿಕಲ್ ತಾನಾಗಿಯೇ ನಮ್ಮ ಬಳಿಗೆ ಬರುತ್ತದೆ. ಅದರ ಮೇಲೆ ಹತ್ತಿ ಕುಳಿತು ಎಲ್ಲಿಗೆ ಹೋಗಬೇಕೆಂಬುದನ್ನು ಹೇಳಿದರೆ ಆ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ಇದರ ಪ್ರಯೋಗ ಪೂರ್ಣವಾಗಲು ಇನ್ನೊಂದಿಷ್ಟು ಕಾಲಾವಕಾಶ ಬೇಕಿದೆ.

ಓದಿ: ಡ್ರೋನ್​ ಮೂಲಕ ಅಂಚೆ ಸೇವೆ.. ಗುಜರಾತ್​ನಲ್ಲಿ ಯಶಸ್ವಿಯಾದ ಪ್ರಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.