ಸಿಯೋಲ್(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ ಗ್ರೂಪ್ ಸೋಮವಾರ ಆಟೋಮೋಟಿವ್ ಚಿಪ್‌ಗಳ ಕೊರತೆಯ ಹೊರತಾಗಿಯೂ ಜಾಗತಿಕ ವಾಹನ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದೆ.
ಹ್ಯುಂಡೈ ಮೋಟಾರ್, ಅದರ ಸ್ವತಂತ್ರ ಜೆನೆಸಿಸ್ ಬ್ರಾಂಡ್ ಮತ್ತು ಹ್ಯುಂಡೈನ ಸಣ್ಣ ಅಂಗಸಂಸ್ಥೆಯಾದ ಕಿಯಾ ಕಾರ್ಪೊರೇಷನ್ ಜನವರಿ - ಜೂನ್ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಒಟ್ಟು 3.299 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ಟೊಯೊಟಾ ಮೋಟಾರ್ ಗ್ರೂಪ್ 5.138 ಮಿಲಿಯನ್ ಯುನಿಟ್‌ಗಳು ಮತ್ತು ವೋಕ್ಸ್ವ್ಯಾಗನ್ ಗ್ರೂಪ್‌ನ 4.006 ಮಿಲಿಯನ್ ಯುನಿಟ್‌ಗಳ ಮಾರಾಟವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೊದಲ ಆರು ತಿಂಗಳಲ್ಲಿ, ಜೆನೆಸಿಸ್ ಮಾಡೆಲ್‌ಗಳು ಹೆಚ್ಚಿನ ಮಾರಾಟ ಕಂಡಿವೆ. ಆಲ್ - ಎಲೆಕ್ಟ್ರಿಕ್ ಹ್ಯುಂಡೈ IONIQ 5 ಮತ್ತು ಶುದ್ಧ ಎಲೆಕ್ಟ್ರಿಕ್ ಕಿಯಾ EV6 ಕೊರಿಯನ್ ಕಾರು ತಯಾರಕರ ಮಾರಾಟದ ಶ್ರೇಯಾಂಕದಲ್ಲೂ ಏರಿಕೆ ಕಂಡಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. 2021 ರ ಮೊದಲಾರ್ಧದಲ್ಲಿ 3.475 ಮಿಲಿಯನ್ ಆಟೋಗಳ ಮಾರಾಟ ಕಂಡಿವೆ. ಈ ಮೂಲಕ ಜಾಗತಿಕವಾಗಿ ಈ ಗುಂಪಿನಲ್ಲಿ ಕಂಪನಿ ಶ್ರೇಯಾಂಕ ಐದನೇ ಸ್ಥಾನಕ್ಕೆ ಜಗಿತ ಕಂಡಿದೆ.
ಹ್ಯುಂಡೈ ಮೋಟಾರ್ ಕಳೆದ ವಾರ ರೊಬೊಟಿಕ್ಸ್ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ (AI) ಸಂಶೋಧನಾ ಕೇಂದ್ರವನ್ನು ನಿರ್ಮಿಸಲು $424 ಮಿಲಿಯನ್ ಖರ್ಚು ಮಾಡುವುದಾಗಿ ಹೇಳಿದೆ.
ಇದನ್ನು ಓದಿ:ಶತ್ರುಗಳಿಂದ ಸೈನಿಕರ ರಕ್ಷಣೆ.. ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ