ETV Bharat / science-and-technology

ಹೆಚ್​ಎಎಲ್​ನಿಂದ 208 ಕೋಟಿ ರೂ. ವೆಚ್ಚದಲ್ಲಿ ಐಸಿಎಂಎಫ್ ಸ್ಥಾಪನೆ: ರಾಷ್ಟ್ರಪತಿಗಳಿಂದ ಉದ್ಘಾಟನೆ

author img

By

Published : Sep 26, 2022, 6:18 PM IST

Updated : Sep 26, 2022, 6:37 PM IST

ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಬೆಂಗಳೂರಿನಲ್ಲಿ ಹೆಚ್​ಎಎಲ್​ನ ಇಂಟಿಗ್ರೆಟೆಡ್ ಕ್ರಯೊಜಿನಿಕ್ ಎಂಜಿನ್ಸ್ ತಯಾರಿಕಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಇದನ್ನು 208 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ.

ಹೆಚ್​ಎಎಲ್
ಹೆಚ್​ಎಎಲ್

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ 208 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ತಯಾರಿಕಾ ಸೌಲಭ್ಯ (ಐಸಿಎಂಎಫ್)ವನ್ನು ಸ್ಥಾಪಿಸಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಒಂದೇ ಸೂರಿನಡಿ ಸಂಪೂರ್ಣ ರಾಕೆಟ್ ಎಂಜಿನ್​ಗಳನ್ನು ಉತ್ಪಾದಿಸಿ ಪೂರೈಸುತ್ತದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅತ್ಯಾಧುನಿಕ ಐಸಿಎಂಎಫ್​​ನನ್ನು ಮಂಗಳವಾರ ಉದ್ಘಾಟಿಸಲಿದ್ದಾರೆ. 4,500 ಚದರ ಮೀಟರ್​​ ಜಾಗದಲ್ಲಿ, 70 ಹೈಟೆಕ್ ಉಪಕರಣಗಳನ್ನು ಬಳಸಿ ಇದನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಸೌಲಭ್ಯಗಳಾದ ಕ್ರಯೋಜೆನಿಕ್ (ಸಿಇ 20) ಮತ್ತು ಸೆಮಿ-ಕ್ರೈವಿಯೋಜೆನಿಕ್ (ಎಸ್​ಇ 2000) ರಾಕೆಟ್​​ ಎಂಜಿನ್‌ಗಳನ್ನು ಉತ್ಪಾದಿಸುವ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ.

ಏರೋಸ್ಪೇಸ್ ವಿಭಾಗದ ಎಚ್‌ಎಎಲ್​ನಲ್ಲಿ ಕ್ರಯೋಜೆನಿಕ್ ಎಂಜಿನ್ ಮಾಡ್ಯೂಲ್‌ಗಳನ್ನು ತಯಾರಿಸುವ ಸೌಲಭ್ಯವನ್ನು ಸ್ಥಾಪಿಸಲು 2013 ರಲ್ಲಿ ಎಂಒಯುಗೆ ಇಸ್ರೋಗೆ ಸಹಿ ಹಾಕಿತ್ತು. ನಂತರ ಇದನ್ನು 208 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಐಸಿಎಂಎಫ್ ಸ್ಥಾಪಿಸಲು 2016 ರಲ್ಲಿ ತಿದ್ದುಪಡಿ ಮಾಡಲಾಯಿತು.

ಕ್ರಯೋಜೆನಿಕ್ ಇಂಜಿನ್‌ಗಳು ವಿಶ್ವಾದ್ಯಂತ ಉಡಾವಣಾ ವಾಹನಗಳಲ್ಲಿ ಹೆಚ್ಚಾಗಿ ಬಳಸುವ ಎಂಜಿನ್‌ಗಳಾಗಿವೆ. ಫ್ರಾನ್ಸ್, ಚೀನಾ, ಜಪಾನ್, ರಷ್ಯಾ ಮತ್ತು ಅಮೆರಿಕ ಈ ಕೆಲವೇ ರಾಷ್ಟ್ರಗಳು ಕ್ರಯೋಜೆನಿಕ್ ಎಂಜಿನ್‌ನ ಸಂಕೀರ್ಣತೆಯಿಂದಾಗಿ ಇಲ್ಲಿಯವರೆಗೆ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿವೆ.

ಇದನ್ನೂ ಓದಿ: ಹೆಲಿಕಾಪ್ಟರ್ ಖರೀದಿ, ಗುತ್ತಿಗೆಗಾಗಿ HAL- PHL ಮಧ್ಯೆ ಸಹಕಾರ ಒಪ್ಪಂದ

ಈ ಸೌಲಭ್ಯ (ಐಸಿಎಂಎಫ್) ಇಸ್ರೋಗೆ ಒಂದೇ ಸೂರಿನಡಿ ಸಂಪೂರ್ಣ ರಾಕೆಟ್​ ಎಂಜಿನ್​ ತಯಾರಿಕೆಯನ್ನು ಪೂರೈಸುತ್ತದೆ. ಈ ಸೌಲಭ್ಯವು ಹೈ-ಥ್ರಸ್ಟ್ ರಾಕೆಟ್ ಎಂಜಿನ್​​ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ಕ್ರಯೋಜೆನಿಕ್ ಎಂಜಿನ್‌ಗಳು ಉಡಾವಣಾ ವಾಹನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಎಂಜಿನ್‌ಗಳಾಗಿವೆ ಎಂದು ಎಚ್‌ಎಎಲ್ ಹೇಳಿದೆ.

ಜನವರಿ ಐದು, 2014 ರಂದು ಭಾರತವು ಜಿಎಸ್ಎಲ್​ವಿ-ಡಿ 5 ಅನ್ನು ಕ್ರಯೋಜೆನಿಕ್ ಎಂಜಿನ್ ನೊಂದಿಗೆ ಯಶಸ್ವಿಯಾಗಿ ಹಾರಿಸುವ ಮೂಲಕ ಕ್ರಯೋಜೆನಿಕ್ ಎಂಜಿನ್​ಗಳ ಅಭಿವೃದ್ಧಿಪಡಿಸುವಲ್ಲಿ ಆರನೇ ದೇಶವಾಯಿತು ಎಂದು ಅದು ಹೇಳಿದೆ.

Last Updated : Sep 26, 2022, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.