ETV Bharat / science-and-technology

ಟೆಸ್ಲಾ ಕಾರ್​​​​ನಲ್ಲಿ ಹ್ಯಾಂಡ್ಸ್ ಫ್ರೀ ಡ್ರೈವಿಂಗ್‌ಗಾಗಿ ಎಲೋನ್​​ ಮೋಡ್​... ಏನಿದು ಹೊಸ ವೈಶಿಷ್ಟ್ಯ

ಟೆಸ್ಲಾ ಸಾಫ್ಟ್‌ವೇರ್ ಹ್ಯಾಕರ್ "ಎಲೋನ್ ಮೋಡ್" ಹೆಸರಿನ ರಹಸ್ಯ ಚಾಲಕ ಮೋಡ್ ಅನ್ನು ಕಂಡುಹಿಡಿದಿದೆ. ಅದು ಟೆಸ್ಲಾ ವಾಹನಗಳಲ್ಲಿ ಹ್ಯಾಂಡ್ಸ್-ಫ್ರೀ ಡ್ರೈವಿಂಗ್​​ಗೆ ಅವಕಾಶ ಕಲ್ಪಿಸುತ್ತದೆ. ಹಾಗಾದರೆ ಏನಿದರ ವಿಶೇಷತೆ.. ಇಲ್ಲಿದೆ ಮಾಹಿತಿ.

Hacker finds secret 'Elon Mode' for hands-free driving in Tesla vehicles
ಟೆಸ್ಲಾ ಕಾರ್​​​​ನಲ್ಲಿ ಹ್ಯಾಂಡ್ಸ್ ಫ್ರೀ ಡ್ರೈವಿಂಗ್‌ಗಾಗಿ ಎಲೋನ್​​ ಮೋಡ್​... ಏನಿದು ಹೊಸ ವೈಶಿಷ್ಟ್ಯ
author img

By

Published : Jun 22, 2023, 7:17 AM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ):ಟೆಸ್ಲಾ ಸಾಪ್ಟ್​​ವೇರ್ ಕಂಪನಿ​​​​​​ ಮಸ್ಕ್ ಹೆಸರಿನ ರಹಸ್ಯ ಚಾಲಕ ಮೋಡ್ ಕಂಡು ಹಿಡಿದಿದೆ. ಇದಕ್ಕೆ ಕಂಪನಿ ಸಿಇಒ ಮಸ್ಕ್​ ಅವರ ಹೆಸರನ್ನೇ ಇಡಲಾಗಿದೆ. ಇದು ಟೆಸ್ಲಾ ವಾಹನಗಳಲ್ಲಿ ಹ್ಯಾಂಡ್ಸ್-ಫ್ರೀ ಡ್ರೈವಿಂಗ್​​​​​​​​​​ಗೆ ಅವಕಾಶ ಕಲ್ಪಿಸುತ್ತದೆ. ದಿ ವರ್ಜ್ ಪ್ರಕಾರ, "ಎಲೋನ್ ಮೋಡ್" ಎಂಬ ಗುಪ್ತ ವೈಶಿಷ್ಟ್ಯವನ್ನು ಟೆಸ್ಲಾ ಸಾಫ್ಟ್‌ವೇರ್ ಹ್ಯಾಕರ್ ಕಂಡು ಹಿಡಿದಿದೆ. ಆನ್‌ಲೈನ್‌ನಲ್ಲಿ ಇದನ್ನು @greentheonly ಎಂದು ಕರೆಯಲಾಗುತ್ತದೆ.

ವರ್ಷಗಳವರೆಗೆ ಈ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿ ಈ ವೈಶಿಷ್ಠ್ಯ ಕಂಡು ಹಿಡಿಯಲಾಗಿದೆ. ಅನಾಮಧೇಯ ಹ್ಯಾಕರ್ ವಾಹನದ ಕೋಡ್ ಅನ್ನು ಆಳವಾಗಿ ಅಧ್ಯಯನ ಮಾಡಿ ಅಧಿಕೃತವಾಗಿ ಸಕ್ರಿಯಗೊಳಿಸುವ ಮೊದಲು ನಿಮ್ಮ ಪವರ್ ಸೀಟ್ ಅಥವಾ ಮಾಡೆಲ್ 3 ನ ಸೆಂಟರ್ ಕ್ಯಾಮೆರಾವನ್ನು ಬಳಸದಂತೆ ಹೇಗೆ ತಡೆಯಬಹುದು ಎಂಬ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ವಿಶೇಷ ವೈಶಿಷ್ಟ್ಯಗಳನ್ನ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲೋನ್ ಮೋಡ್ ಅನ್ನು ಕಂಡುಹಿಡಿದ ಮತ್ತು ಸಕ್ರಿಯಗೊಳಿಸಿದ ನಂತರ, ಹ್ಯಾಕರ್ ಸಿಸ್ಟಮ್ ಅನ್ನು ಪರೀಕ್ಷಿಸಲಾಗಿದೆ. ಈ ಮೋಡ್​​​ನ ಪರೀಕ್ಷೆಯ ಅನುಭವಗಳನ್ನು ಕಂಪನಿ ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಟ್ವೀಟ್​ ಮಾಡಿದೆ.

"ಎಲೋನ್ ಮೋಡ್‌ನೊಂದಿಗೆ ಸುಮಾರು 600 ಮೈಲುಗಳನ್ನು ಸಂಚಾರ ಮಾಡಲಾಯಿತು. ಇದು ಹಿಂದಿನ ಪ್ರಯೋಗಕ್ಕಿಂತ ಹೆಚ್ಚು ಉತ್ತಮವಾಗಿದೆ. ಅನೇಕ ಅಂಶಗಳನ್ನು ಈ ಮೋಡ್​ನಲ್ಲಿ ಸೇರಿಸಲಾಗಿದೆ. ಈ ಅಂಶ ಅಳವಡಿಸಲು ತಡೆವೇನು ಆಗಿಲ್ಲ. ಹಾಗಾಗಿಯೇ ಕಾರಿನಲ್ಲಿ ಈ ವೈಶಿಷ್ಟ್ಯವನ್ನು ಸೇರ್ಪಡೆ ಮಾಡಲಾಗಿದೆ. ತಡ ಆಗಿರುವ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅದು ಟ್ವೀಟ್​ ಪೋಸ್ಟ್​ನಲ್ಲಿ ಹೇಳಲಾಗಿದೆ.

ಆದರೆ, ಹ್ಯಾಕರ್ ಪರದೆಯ ಮೇಲೆ "ಎಲೋನ್ ಮೋಡ್" ಸೆಟ್ಟಿಂಗ್ ಅಕ್ಷರಶಃ ಹಂಚಿಕೊಂಡಿಲ್ಲ. ಆದರೆ, ಅದು ನಿಜವೆಂದು ವರದಿ ಹೇಳಿದೆ. ಟೆಸ್ಲಾದ ಫುಲ್ ಸೆಲ್ಫ್-ಡ್ರೈವಿಂಗ್ (ಎಫ್‌ಎಸ್‌ಡಿ) ಸಾಫ್ಟ್‌ವೇರ್ ಅನ್ನು ಬಳಸುವಾಗ, ಕಾರಿನ ಬಗ್ಗೆ ಡ್ರೈವರ್​ ಗಮನ ನೀಡುವ ಅಗತ್ಯವಿಲ್ಲ ಎಂದು ಹ್ಯಾಕರ್ ಸಾಪ್ಟವೇರ್​​ನಿಂದ ಕಂಡುಹಿಡಿಯಲಾಗಿದೆ. FSD ಎಂಬುದು ಟೆಸ್ಲಾದ ದೃಷ್ಟಿ - ಆಧಾರಿತ ಸುಧಾರಿತ ಚಾಲಕ - ಸಹಾಯ ವ್ಯವಸ್ಥೆಯಾಗಿದೆ. ಇದು ಪ್ರಸ್ತುತ ಬೀಟಾದಲ್ಲಿದೆ. ಈ ಹೊಸ ವೈಶಿಷ್ಟ್ಯದ ಆಯ್ಕೆಗಾಗಿ ನೀವು $15,000 ಡಾಲರ್​ ಪಾವತಿಸಬೇಕಿದೆ. 15 ಸಾವಿರ ಡಾಲರ್​​ ನೀಡಿದರೆ ಈ ಹೊಸ ವೈಶಿಷ್ಟ್ಯ ದೊರೆಯಲಿದೆ.

ಆದರೆ ಈ ನಡುವೆ ಪೂರ್ಣ ಸ್ವಯಂ-ಚಾಲನಾ (FSD) ವೈಶಿಷ್ಟ್ಯಗಳ ಬಗ್ಗೆ ಸಾವಿರಾರು ಗ್ರಾಹಕರು ದೂರುಗಳನ್ನು ನೀಡಿದ್ದಾರೆ. ಸ್ವಯಂ-ವೇಗವರ್ಧನೆ ಸಮಸ್ಯೆಗಳ ಬಗ್ಗೆ 2400 ಗ್ರಾಹಕರು ದೂರು ನೀಡಿದ್ದರೆ. 1,500 ಕ್ಕೂ ಗ್ರಾಹಕರು ಕಾರಿನ ಬ್ರೇಕಿಂಗ್ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ನೀವು ಎಲೆಕ್ಟ್ರಿಕ್​ ಕಾರು ಹೊಂದಲು ಬಯಸುವಿರಾ?.. ಹಾಗಾದರೆ ನೀವು ಹೀಗೆ ಮಾಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.