ನವದೆಹಲಿ : ಹಿಂದೂ ಮಹಾಸಾಗರದಲ್ಲಿ ಮೂರು ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿರುವ ದೈತ್ಯ ಗುರುತ್ವಾಕರ್ಷಣೆಯ ರಂಧ್ರಕ್ಕೆ (gravity hole) ಕಾರಣವೇನು ಎಂಬುದನ್ನು ಭಾರತೀಯ ವಿಜ್ಞಾನಿಗಳ ತಂಡವು ಗುರುತಿಸಿದೆ. ಹಿಂದೂ ಮಹಾಸಾಗರದ ಜಿಯೋಯ್ಡ್ ಲೋ (IOGL) (geoid low) ಎಂದು ಕರೆಯಲ್ಪಡುವ ಇದು ಭೂಮಿಯ ಪ್ರಮುಖ ಗುರುತ್ವಾಕರ್ಷಣೆಯ ವೈಪರೀತ್ಯವಾಗಿದ್ದು, ಇಲ್ಲಿ ಗುರುತ್ವಾಕರ್ಷಣೆಯು ಸರಾಸರಿಗಿಂತ ಕಡಿಮೆಯಾಗಿದೆ. ಹೀಗಾಗಿ ಇಲ್ಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿಗಿಂತ 106 ಮೀಟರ್ ಕಡಿಮೆಯಾಗಿದೆ.
ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು, IOGL ಹಿಂದೂ ಮಹಾಸಾಗರದ ಕೆಳಗಿರುವ ಭೂಮಿಯ ಪದರಿನೊಳಗೆ ದ್ರವ್ಯರಾಶಿ ಕೊರತೆಯ ಪರಿಣಾಮವಾಗಿದೆ ಎಂದು ತೋರಿಸಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯ ವಿಜ್ಞಾನಿಗಳು ಕಳೆದ 140 ಮಿಲಿಯನ್ ವರ್ಷಗಳ ಪ್ಲೇಟ್ ಟೆಕ್ಟೋನಿಕ್ ಚಲನೆಯ ಮಾದರಿಯನ್ನು ಮರು ನಿರ್ಮಾಣ ಮಾಡಿದ್ದಾರೆ ಗುರುತ್ವಾಕರ್ಷಣೆಯ ರಂಧ್ರದ ಮೂಲವನ್ನು ಪತ್ತೆಹಚ್ಚಲು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ನಡೆಸಿದರು.
ಟೆಕ್ಟೋನಿಕ್ ಪ್ಲೇಟ್‌ಗಳ ಕೆಲವು ವಿಭಾಗಗಳು ಆಫ್ರಿಕಾದ ಕೆಳಗಿರುವ ಭೂಪದರುಗಳ ಮೂಲಕ ಮುಳುಗಿ, ಹಿಂದೂ ಮಹಾಸಾಗರದ ಅಡಿ ಪ್ಲೂಮ್‌ಗಳನ್ನು ಉತ್ಪಾದಿಸುತ್ತವೆ ಎಂದು ಅವರು ಕಂಡು ಹಿಡಿದಿದ್ದಾರೆ. "ಇಲ್ಲಿ ನಾವು 140 Ma ನಿಂದ ಪ್ರಾರಂಭವಾಗುವ ಜಾಗತಿಕ ಮ್ಯಾಂಟಲ್ ಸಂವಹನ ಮಾದರಿಗಳಲ್ಲಿ ಪ್ಲೇಟ್ ಪುನರ್ನಿರ್ಮಾಣದ ಮಾದರಿಯನ್ನು ಸಂಯೋಜಿಸಿದ್ದೇವೆ. ಇದರ ಪ್ರಕಾರ ಮುಳುಗುವ ಟೆಥಿಯಾನ್ ಚಪ್ಪಡಿಗಳು ಆಫ್ರಿಕನ್ ಲಾರ್ಜ್ ವೆಲಾಸಿಟಿ ಪ್ರಾಂತ್ಯವನ್ನು ವಿಚಲಿತಗೊಳಿಸಿದವು ಮತ್ತು ಹಿಂದೂ ಮಹಾಸಾಗರದ ಕೆಳಗೆ ಪ್ಲೂಮ್‌ಗಳನ್ನು ಉತ್ಪಾದಿಸಿದವು. ಇದು ಈ ನಕಾರಾತ್ಮಕ ಜಿಯೋಯ್ಡ್ ಅಸಂಗತತೆಯ ರಚನೆಗೆ ಕಾರಣವಾಯಿತು" ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ತಿಳಿಸಿದ್ದಾರೆ.
ಹಿಂದೂ ಮಹಾಸಾಗರದ ಕೆಳಗಿರುವ ಈ ಪ್ರಕ್ರಿಯೆಗಳ ಪರಸ್ಪರ ಕ್ರಿಯೆಯು IOGL ನ ಸ್ಥಾನ ಮತ್ತು ಆಕಾರವನ್ನು ನಿರ್ಧರಿಸಿರಬಹುದು ಎಂದು ಅವರು ವಿವರಿಸಿದರು. "ಈ ಪ್ಲೂಮ್‌ಗಳು, ಜಿಯೋಯ್ಡ್ ತಗ್ಗಿನ ಸಮೀಪದಲ್ಲಿರುವ ಹೊದಿಕೆಯ ರಚನೆಯೊಂದಿಗೆ, ಈ ನಕಾರಾತ್ಮಕ ಜಿಯೋಯ್ಡ್ ಅಸಂಗತತೆಯ ರಚನೆಗೆ ಕಾರಣವಾಗಿವೆ" ಎಂದು ಪ್ರಮುಖ ಸಂಶೋಧಕ ದೆಬಂಜನ್ ಪಾಲ್ ಮತ್ತು ಐಐಎಸ್‌ಸಿಯ ಅಟ್ರೇಯೀ ಘೋಷ್ ಅಧ್ಯಯನದಲ್ಲಿ ಬರೆದಿದ್ದಾರೆ.
ವಿಜ್ಞಾನಿಗಳ ಪ್ರಕಾರ, 20 ಮಿಲಿಯನ್ ವರ್ಷಗಳ ಹಿಂದೆ ಪ್ಲೂಮ್‌ಗಳು ಮೇಲಿನ ಮ್ಯಾಂಟಲ್ ಒಳಗಡೆ ಹರಡಲು ಪ್ರಾರಂಭಿಸಿದಾಗಲೇ IOGL ಪ್ರಸ್ತುತ ಇರುವ ಆಕಾರ ಪಡೆದುಕೊಂಡಿತ್ತು. "ತಾಪಮಾನದ ವೈಪರೀತ್ಯಗಳು ಈಗಿನ ಸ್ಥಳದಿಂದ ಈ ಕಡಿಮೆ ಜಿಯೋಯ್ಡ್ ಬದಲಾವಣೆಗೆ ಕಾರಣವಾದಾಗ, ಜಿಯೋಯ್ಡ್ ಕರಗುವಿಕೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ" ಎಂದು ಪಾಲ್ ಅವರು ಸೈಂಟಿಫಿಕ್ ಅಮೆರಿಕನ್‌ಗೆ ತಿಳಿಸಿದ್ದಾರೆ.
ಹಿಂದೂ ಮಹಾಸಾಗರದ ಕೆಳಭಾಗದಲ್ಲಿ, ಒಂದು ಮಿಲಿಯನ್ ಚದರ ಮೈಲುಗಳಷ್ಟು ಗಾತ್ರದಲ್ಲಿ ದೈತ್ಯ ಗುರುತ್ವಾಕರ್ಷಣೆಯ ರಂಧ್ರ ಇದೆ. ಭೂಮಿಯ ಹೊರಪದರದಲ್ಲಿನ ಈ ವಿದ್ಯಮಾನವು ದಶಕಗಳಿಂದ ವಿಜ್ಞಾನಿಗಳಿಗೆ ಸವಾಲಾಗಿದೆ. ಇದು ಭೌತಿಕವಾಗಿ ಕಾಣಿಸುವ ರಂಧ್ರವಲ್ಲದಿದ್ದರೂ, ಭೂಮಿಯ ಗುರುತ್ವಾಕರ್ಷಣೆಯ ಪರಿಣಾಮಗಳು ಸರಾಸರಿಗಿಂತ ಕಡಿಮೆ ಇರುವ ಕೇಂದ್ರೀಕೃತ ಪ್ರದೇಶವನ್ನು ಸೂಚಿಸಲು ಈ ಪದ ಬಳಸಲಾಗುತ್ತದೆ.
ಇದನ್ನೂ ಓದಿ : ಅಮೆರಿಕದ ಸಹಾಯದಿಂದಲೇ ಪಾಕಿಸ್ತಾನಕ್ಕೆ ಸಿಕ್ಕಿತು ಐಎಂಎಫ್ ಸಾಲ!