ETV Bharat / science-and-technology

ಗೂಗಲ್​​ನ ಹೊಸ ವೈಶಿಷ್ಟ್ಯ Grammar Check; ಬಳಸುವುದು ಹೇಗೆ?... ನೀವೂ ಒಮ್ಮೆ ಟ್ರೈ ಮಾಡಿ!!

author img

By

Published : Aug 9, 2023, 1:20 PM IST

Grammar Check: ಗೂಗಲ್ ಇತ್ತೀಚೆಗೆ ತನ್ನ ಸರ್ಚ್ ಎಂಜಿನ್​ಗೆ ವ್ಯಾಕರಣ ಪರಿಶೀಲನೆ ವೈಶಿಷ್ಟ್ಯವನ್ನು ಸೇರಿಸಿದೆ. ಇದರ ಸಹಾಯದಿಂದ, ಬಳಕೆದಾರರು ಯಾವುದೇ ವಾಕ್ಯದ ವ್ಯಾಕರಣವನ್ನು ಪರಿಶೀಲಿಸಬಹುದು.

Google To Check Grammar Through Artificial Intelligence

ಬೆಂಗಳೂರು: ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ತನ್ನ ಸರ್ಚ್ ಎಂಜಿನ್​ಗೆ 'ಗ್ರಾಮರ್ ಚೆಕ್' ವೈಶಿಷ್ಟ್ಯವನ್ನು ಸೇರಿಸಿದೆ. ಇದರ ಸಹಾಯದಿಂದ ಬಳಕೆದಾರರು ಯಾವುದೇ ವಾಕ್ಯದ ವ್ಯಾಕರಣವನ್ನು ಪರಿಶೀಲಿಸಬಹುದು. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ಇಂಗ್ಲಿಷ್ ಭಾಷೆಗೆ ಮಾತ್ರ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಈ ವೈಶಿಷ್ಟ್ಯವನ್ನು ಇತರ ಭಾಷೆಗಳಿಗೂ ವಿಸ್ತರಿಸಬಹುದು ಎಂದು ನಿರೀಕ್ಷಿಸಲಾಗಿದೆ. ವ್ಯಾಕರಣ ಪರೀಕ್ಷಕ ವೈಶಿಷ್ಟ್ಯವು ವಾಕ್ಯವನ್ನು ಸರಿಯಾಗಿ ಉಚ್ಚರಿಸಲಾಗಿದೆಯೇ ಅಥವಾ ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಪರಿಶೀಲಿಸಿ ಸಲಹೆ ನೀಡುತ್ತದೆ.

ಗೂಗಲ್​ನ 'ಗ್ರಾಮರ್ ಚೆಕ್' ವೈಶಿಷ್ಟ್ಯವನ್ನು ಬಳಸುವುದು ಹೇಗೆ ತಿಳಿಯೋಣ ಬನ್ನಿ.

  • ಮೊದಲಿಗೆ Google Search ಓಪನ್ ಮಾಡಿ
  • ವ್ಯಾಕರಣ ಪರಿಶೀಲಿಸಲು ಬಯಸುವ ವಾಕ್ಯವನ್ನು ಟೈಪ್ ಮಾಡಿ ಮತ್ತು ಅದರ ಕೊನೆಯಲ್ಲಿ "“grammar check” ಎಂದು ಬರೆಯಿರಿ.
  • ಉದಾಹರಣೆಗೆ, "Under the new set of rules, MLAs will not be able to tear any document in the House. grammar check" ಎಂದು ಸರ್ಚ್​​ನಲ್ಲಿ ಟೈಪ್ ಮಾಡಿ Enter ಒತ್ತಿ.
  • ಈಗ ಸರ್ಚ್​ ಫಲಿತಾಂಶ ವಿಂಡೋದಲ್ಲಿ ವಾಕ್ಯದ ವ್ಯಾಕರಣ ಸರಿಯಾಗಿದೆಯೇ ಎಂದು ಪರಿಶೀಲಿಸಲು ಗೂಗಲ್ ತನ್ನ ವ್ಯಾಕರಣ ಪರಿಶೀಲನೆಯಿಂದ ತಯಾರಿಸಿದ ಔಟ್ ಪುಟ್ ಅನ್ನು ತೋರಿಸುತ್ತದೆ. ವಾಕ್ಯದ ಗ್ರಾಮರ್​ನಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ಮೊದಲ ಫಲಿತಾಂಶವಾಗಿ ಕಾಣಿಸಿಕೊಳ್ಳುವ "Grammar Check" ವಿಭಾಗ ಅಥವಾ ಕಾರ್ಡ್ ಹಸಿರು ಚೆಕ್ ಮಾರ್ಕ್ ಅನ್ನು ತೋರಿಸುತ್ತದೆ. ವಾಕ್ಯದ ನುಡಿಗಟ್ಟು ಅಥವಾ ವಾಕ್ಯವನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಅದು ಸೂಚಿಸುತ್ತದೆ. ಇದರ ಮೂಲಕ ಕಾಗುಣಿತ ತಪ್ಪುಗಳನ್ನು ಸಹ ಸರಿಪಡಿಸಬಹುದು.

ಶೇಕಡಾ 100 ರಷ್ಟು ನಿಖರವಲ್ಲ: ಗ್ರಾಮರ್​​ ಚೆಕ್​ನ ನಿಖರತೆಯ ಬಗ್ಗೆ ಗೂಗಲ್ ತನ್ನ ಬ್ಲಾಗ್ ಪೋಸ್ಟ್​ನಲ್ಲಿ ಮಾಹಿತಿ ನೀಡಿದ್ದು, ಭಾಷೆಯನ್ನು ವಿಶ್ಲೇಷಿಸಲು ಮತ್ತು ವ್ಯಾಕರಣ ಸರಿಪಡಿಸಲು ಎಐ ಅನ್ನು ಬಳಸಲಾಗುತ್ತದೆ. ಈ ಸಲಹೆಯು ಶೇಕಡಾ 100 ರಷ್ಟು ನಿಖರವಾಗಿಲ್ಲದಿರಬಹುದು. ವಿಶೇಷವಾಗಿ ಅಪೂರ್ಣ ವಾಕ್ಯಗಳ ಸಂದರ್ಭದಲ್ಲಿ ತಪ್ಪು ಸಲಹೆಗಳು ಬರಬಹುದು. ಅಲ್ಲದೇ ಕೆಲ ಬಾರಿ ಗೂಗಲ್​ನ ಈ ಸಾಧನ ಸಕ್ರಿಯವಾಗಿಲ್ಲದಿರಬಹುದು ಎಂದು ಹೇಳಿದೆ. ಗ್ರಾಮರ್​ ಚೆಕ್​ಗೆ ಸಂಬಂಧಿಸಿದಂತೆ ಬಳಕೆದಾರರು ಗೂಗಲ್ ಗೆ ಫೀಡ್​ಬ್ಯಾಕ್ ಸಹ ನೀಡಬಹುದು.

ಅಪಾಯಕಾರಿ ವಿಷಯ, ಕಿರುಕುಳ ನೀಡುವ ವಿಷಯ, ದ್ವೇಷಪೂರಿತ ವಿಷಯ, ವೈದ್ಯಕೀಯ ವಿಷಯ, ಲೈಂಗಿಕವಾಗಿ ಅಶ್ಲೀಲ ವಿಷಯ, ಭಯೋತ್ಪಾದಕ ವಿಷಯ, ಹಿಂಸೆ ಮತ್ತು ಕ್ರೂರತೆ, ಅಶ್ಲೀಲ ಭಾಷೆ ಮುಂತಾದ ವಿಷಯಗಳಲ್ಲಿ ಗ್ರಾಮರ್​ ಚೆಕ್ ಕೆಲಸ ಮಾಡುವುದಿಲ್ಲ.

ಗ್ರಾಮರ್​ ಚೆಕ್​​ಗೆ ಡಾಕ್ಸ್​​ಗೆ ಹೋಗುವ ಅಗತ್ಯವಿಲ್ಲ: ಗೂಗಲ್ ಈಗಾಗಲೇ ಜಿಮೇಲ್ ಮತ್ತು ಗೂಗಲ್ ಡ್ರೈವ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ವ್ಯಾಕರಣ ಪರಿಶೀಲನೆ ವೈಶಿಷ್ಟ್ಯಗಳನ್ನು ನೀಡಿದೆ. ಆದರೆ ಈಗ ಈ ಸಾಧನವನ್ನು ಸರ್ಚ್​ ಎಂಜಿನ್​ನಲ್ಲಿ ಸಂಯೋಜಿಸಿರುವುದರಿಂದ ಸಮಗ್ರ ನಿಘಂಟು ಸಾಧನ ಸೇರಿದಂತೆ ಕಂಪನಿಯ ವೈವಿಧ್ಯಮಯ ವೈಶಿಷ್ಟ್ಯಗಳನ್ನು ಯಾವುದೇ ಸಮಸ್ಯೆ ಇಲ್ಲದೇ ಬಳಸಲು ಸಾಧ್ಯವಾಗಬಹುದು. ಅಲ್ಲದೇ ಗ್ರಾಮರ್​ ಚೆಕ್ ಮಾಡಲು ಗೂಗಲ್ ಡಾಕ್ಸ್ ನಂತಹ ಪ್ರತ್ಯೇಕ ಅಪ್ಲಿಕೇಶನ್​ಗಳನ್ನು ಓಪನ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಬಳಕೆದಾರರ ಸಮಯವನ್ನು ಉಳಿಸುತ್ತದೆ.

ಇದನ್ನೂ ಓದಿ : Chandrayan-3: ಎಂಜಿನ್​ ವಿಫಲವಾದರೂ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ ​ಲ್ಯಾಂಡರ್ ವಿಕ್ರಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.