ETV Bharat / science-and-technology

ಪಿಕ್ಸೆಲ್​ ವಾಚ್ ರಿಪೇರಿ ಮಾಡಲ್ಲ ಗೂಗಲ್; ಸರ್ವಿಸ್ ಸೆಂಟರೇ ಇಲ್ಲ ಎಂದ ಕಂಪನಿ!

ಪಿಕ್ಸೆಲ್ ವಾಚ್​ ರಿಪೇರಿಗೆ ಸರ್ವಿಸ್ ಸೆಂಟರ್ ಆರಂಭಿಸದ ಗೂಗಲ್ ಕಂಪನಿಯ ವಿರುದ್ಧ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Google won't fix broken Pixel Watch screens

author img

By ETV Bharat Karnataka Team

Published : Sep 15, 2023, 5:56 PM IST

ಸ್ಯಾನ್ ಫ್ರಾನ್ಸಿಸ್ಕೋ : ನೀವು ಪಿಕ್ಸೆಲ್ ವಾಚ್ ಹೊಂದಿದ್ದರೆ ಮತ್ತು ಆಕಸ್ಮಿಕವಾಗಿ ಅದರ ಸ್ಕ್ರೀನ್ ಒಡೆದುಹೋದರೆ ಅದನ್ನು ಮತ್ತೆ ರಿಪೇರಿ ಮಾಡಿಸಲು ಸಾಧ್ಯವೇ ಇಲ್ಲ. ಅಧಿಕೃತವಾಗಿ ಗೂಗಲ್​ನಿಂದ ಅದನ್ನು ಮತ್ತೆ ಸರಿಪಡಿಸುವ ಯಾವುದೇ ಅವಕಾಶ ನಿಮಗಿಲ್ಲ. ಪಿಕ್ಸೆಲ್ ವಾಚ್​ ಹಾಳಾದರೆ ಅದನ್ನು ರಿಪೇರಿ ಮಾಡುವ ಯಾವುದೇ ಸರ್ವಿಸ್ ಸೆಂಟರ್​ ಅನ್ನು ಗೂಗಲ್ ಹೊಂದಿಲ್ಲದಿರುವುದೇ ಇದಕ್ಕೆ ಕಾರಣ.

ರೆಡ್ಡಿಟ್ ಮತ್ತು ಗೂಗಲ್ ಸಪೋರ್ಟ್​ ಪೇಜ್​ಗಳಲ್ಲಿ ಹಲವಾರು ಪಿಕ್ಸೆಲ್ ವಾಚ್ ಮಾಲೀಕರು ಈ ಬಗ್ಗೆ ಬರೆದಿದ್ದು, ವಾಚ್​ನ ಒಡೆದು ಹೋದ ಸ್ಕ್ರೀನ್​​ ಅನ್ನು ರಿಪೇರಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ. ಸಪೋರ್ಟ್​ ಪೇಜ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್ ಪ್ರತಿನಿಧಿಯೊಬ್ಬರು, "ಗೂಗಲ್ ಯಾವುದೇ ದುರಸ್ತಿ ಕೇಂದ್ರಗಳು ಅಥವಾ ಸೇವಾ ಕೇಂದ್ರಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.

"ಈಗಿರುವಂತೆ ಗೂಗಲ್ ಪಿಕ್ಸೆಲ್ ವಾಚ್​ ಅನ್ನು ದುರಸ್ತಿ ಮಾಡಿಸಿಕೊಳ್ಳುವ ಯಾವುದೇ ಅವಕಾಶವಿಲ್ಲ. ನಿಮ್ಮ ವಾಚ್ ಹಾನಿಗೊಳಗಾದರೆ, ಅದನ್ನು ಬೇರೊಂದು ವಾಚ್​ನ ಜೊತೆಗೆ ಬದಲಾಯಿಸಿಕೊಳ್ಳಲು ನೀವು ಗೂಗಲ್ ಪಿಕ್ಸೆಲ್ ವಾಚ್ ಗ್ರಾಹಕ ಸಪೋರ್ಟ್​ ತಂಡವನ್ನು ಸಂಪರ್ಕಿಸಬಹುದು" ಎಂದು ಗೂಗಲ್ ವಕ್ತಾರ ಬ್ರಿಡ್ಜೆಟ್ ಸ್ಟಾರ್ಕಿ ಹೇಳಿದ್ದಾರೆ.

ಗೂಗಲ್​ನ ಹಾರ್ಡ್​ವೇರ್ ವಾರಂಟಿಯ ಬಗ್ಗೆಯೂ ಮಾಹಿತಿ ನೀಡಿರುವ ಸ್ಟಾರ್ಕಿ- ಈ ಸೀಮಿತ ವಾರಂಟಿಯು - ಸಾಮಾನ್ಯ ಸವೆತದಿಂದ ಉಂಟಾಗುವ ಹಾನಿಗೆ, ಅಪಘಾತಗಳಿಂದಾದ ಹಾನಿಗೆ, ದುರುಪಯೋಗಕ್ಕೆ, ನಿರ್ಲಕ್ಷ್ಯದ ಬಳಕೆಗೆ, ಬದಲಾವಣೆ ಮಾಡಿರುವುದಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಪಿಕ್ಸೆಲ್ ವಾಚ್ ಇದು ಗೂಗಲ್​ನ ಪ್ರಥಮ ಬ್ರಾಂಡೆಡ್ ಸ್ಮಾರ್ಟ್ ವಾಚ್ ಆಗಿದೆ. ಇದು ಸರಳ ಮತ್ತು ಸೊಗಸಾದ ವಿನ್ಯಾಸ ಹೊಂದಿದ್ದು, ಹೆಚ್ಚಿನ ಮಣಿಕಟ್ಟುಗಳಿಗೆ ಸರಿಹೊಂದುವ ರೀತಿಯಲ್ಲಿ ತಯಾರಾಗಿದೆ. ಗೂಗಲ್ ತನ್ನ ಪಿಕ್ಸೆಲ್ ವಾಚ್-2 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಖಚಿತಪಡಿಸಿದೆ. ಈ ಸಾಧನವು ಅಕ್ಟೋಬರ್ 5 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ.

ವರದಿಗಳ ಪ್ರಕಾರ ಹೊಸ ಪಿಕ್ಸೆಲ್ ಸ್ಮಾರ್ಟ್ ವಾಚ್ ವೈ-ಫೈ ಮತ್ತು ಎಲ್ ಟಿಇ ಮಾದರಿಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇದು ಸ್ನ್ಯಾಪ್​ ಡ್ರಾಗನ್ ಡಬ್ಲ್ಯೂ 5 ಜೆನ್ 1 ಚಿಪ್ ಹೊಂದಿದ್ದು, ಮೊದಲ ತಲೆಮಾರಿನ ವಾಚ್​ಗೆ ಹೋಲಿಸಿದರೆ ವಾಚ್-2 ದೀರ್ಘ ಬ್ಯಾಟರಿ ಬಾಳಿಕೆ ನೀಡುತ್ತದೆ.

ಇದನ್ನೂ ಓದಿ : ವಾಟ್ಸ್​ಆ್ಯಪ್ ಜಾಹೀರಾತು ಪ್ರದರ್ಶನ ಆರಂಭಿಸುತ್ತಿಲ್ಲ; ಕಂಪನಿಯ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.