ETV Bharat / science-and-technology

2‌ ವರ್ಷಗಳಿಂದ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಡಿಲೀಟ್‌ ಮಾಡಲಿದೆ Google

Google to delete inactive accounts: ದೈತ್ಯ ಸರ್ಚ್‌ ಎಂಜಿನ್‌ ಗೂಗಲ್‌ ಹೊಸ ಇನ್‌ಆ್ಯಕ್ವಿಟಿವಿಟಿ ನೀತಿ (ನಿಷ್ಕ್ರಿಯತೆ ನೀತಿ) ಜಾರಿಗೊಳಿಸಿದೆ. ಈ ನೀತಿಯನ್ವಯ ತನ್ನ ಬಳಕೆದಾರರಿಗೆ ಈ ವರ್ಷದ ಡಿಸೆಂಬರ್‌ 1ರ ಗಡುವಿನ ನೆನಪು ಮಾಡಿದ್ದು, ಸಕ್ರಿಯವಿರದ ಖಾತೆಗಳನ್ನು ಅಳಿಸಲು ತೀರ್ಮಾನಿಸಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Aug 20, 2023, 11:51 AM IST

ನವದೆಹಲಿ: ಜಾಗತಿಕ ಟೆಕ್ ದೈತ್ಯ ಗೂಗಲ್‌ ಕಂಪನಿ ನಿಷ್ಕ್ರಿಯವಾಗಿರುವ ಲಕ್ಷಾಂತರ ಖಾತೆಗಳನ್ನು ಸದ್ಯದಲ್ಲಿಯೇ ರದ್ದು (ಡಿಲೀಟ್‌) ಮಾಡಲಿದೆ. ಎರಡು ವರ್ಷ ಬಳಕೆಯಾಗದ ಖಾತೆಗಳಿಗೆ ಇದು ಅನ್ವಯ. ಈ ಮೂಲಕ ಸೈಬರ್‌ ವಂಚನೆ ತಡೆಯಲು ಕ್ರಮ ಕೈಗೊಳ್ಳುತ್ತಿದೆ.

ಶನಿವಾರ ತನ್ನ ಬಳಕೆದಾರರಿಗೆ ಗೂಗಲ್‌ ಇ-ಮೇಲ್‌ ಕಳುಹಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಗೂಗಲ್ ಖಾತೆಯ ನಿಷ್ಕ್ರಿಯತೆಯ ಅವಧಿಯನ್ನು ಎರಡು ವರ್ಷಗಳವರೆಗೆ ನವೀಕರಿಸುತ್ತದೆ ಎಂದು ತಿಳಿಸಿದೆ. ಈ ಬದಲಾವಣೆಯು ನಿಷ್ಕ್ರಿಯವಾಗಿರುವ ಯಾವುದೇ ಗೂಗಲ್​ ಖಾತೆಗೆ ಅನ್ವಯಿಸುತ್ತದೆ. "ಇದನ್ನು ಸೈನ್ ಇನ್ ಮಾಡಲಾಗಿಲ್ಲ/ ಎರಡು ವರ್ಷಗಳ ಅವಧಿಯಲ್ಲಿ ಬಳಸಲಾಗಿಲ್ಲ". ನಿಷ್ಕ್ರಿಯ ಖಾತೆ ಮತ್ತು ಅದರಲ್ಲಿರುವ ಯಾವುದೇ ವಿಷಯ ಡಿಸೆಂಬರ್ 1, 2023ರಿಂದ ಅಳಿಸಲು ಅರ್ಹವಾಗಿರುತ್ತದೆ ಎಂದು ಕಂಪನಿ ಹೇಳಿದೆ.

ನೀವು ಎರಡು ವರ್ಷಗಳಿಂದ ಗೂಗಲ್​ ಖಾತೆಯಲ್ಲಿ ನಿಷ್ಕ್ರಿಯವಾಗಿದ್ದರೆ/ ಎರಡು ವರ್ಷಗಳಿಂದ ಯಾವುದೇ ಗೂಗಲ್​ ಸೇವೆಗೆ ಸೈನ್ ಇನ್ ಮಾಡಲು ನಿಮ್ಮ ಖಾತೆಯನ್ನು ಬಳಸದ ಹೊರತು ಈ ಬದಲಾವಣೆ ನಿಮ್ಮ ಮೇಲೆ ಪರಿಣಾಮ ಬೀರದು. "ಈ ಬದಲಾವಣೆ ಇಂದು ಜಾರಿಗೆ ಬಂದರೂ, ನಾವು ಯಾವುದೇ ಖಾತೆಯನ್ನು ಅಳಿಸುವುದು ಡಿಸೆಂಬರ್‌ನಲ್ಲೇ ಆಗಿರುತ್ತದೆ" ಎಂದು ತಿಳಿಸಿದೆ.

ಇದನ್ನೂ ಓದಿ: ಗೂಗಲ್​ AI ಚಾಟ್​ಬಾಟ್​ Bard ಈಗ 9 ಭಾರತೀಯ ಭಾಷೆಗಳಲ್ಲಿ ಲಭ್ಯ.. ನೀವೂ ಒಮ್ಮೆ ಟ್ರೈ ಮಾಡಿ!

"ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸಿದರೆ, ಕಂಪನಿಯು ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು/ ಯಾವುದೇ ಖಾತೆಯ ವಿಷಯವನ್ನು ಅಳಿಸುವ ಮೊದಲು ಗೂಗಲ್​ ಬಳಕೆದಾರರಿಗೆ ಮತ್ತು ಅವರ ಮರುಪ್ರಾಪ್ತಿ ಇ-ಮೇಲ್‌ಗಳಿಗೆ (ಯಾವುದಾದರೂ ಒದಗಿಸಿದ್ದರೆ) ಹಲವಾರು ಜ್ಞಾಪನೆ ಇ-ಮೇಲ್‌ಗಳನ್ನು ಕಳುಹಿಸುತ್ತದೆ. ನಿಮ್ಮ ಖಾತೆಯಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಈ ಜ್ಞಾಪನೆ ಇ-ಮೇಲ್‌ಗಳು ಕನಿಷ್ಠ 8 ತಿಂಗಳ ಮೊದಲು ಬರುತ್ತವೆ. ಗೂಗಲ್​ ಖಾತೆಯನ್ನು ಅಳಿಸಿದ ನಂತರ, ಹೊಸ ಗೂಗಲ್​ ಖಾತೆಯನ್ನು ರಚಿಸುವಾಗ ಅಳಿಸಲಾದ ಖಾತೆಯ 'Gmail' ವಿಳಾಸವನ್ನು ಮತ್ತೆ ಬಳಸಲಾಗುವುದಿಲ್ಲ" ಎಂದು ಕಂಪನಿ ವಿವರಣೆ ಕೊಟ್ಟಿದೆ.

ಗೂಗಲ್​ ಖಾತೆಯನ್ನು ಸಕ್ರಿಯವಾಗಿರಿಸಲು ಸರಳವಾದ ಮಾರ್ಗವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಖಾತೆಗೆ ಸೈನ್ ಇನ್ ಮಾಡುವುದು. ಕಳೆದ ಎರಡು ವರ್ಷಗಳಲ್ಲಿ ನೀವು ಇತ್ತೀಚೆಗೆ ನಿಮ್ಮ ಗೂಗಲ್​ ಖಾತೆಗೆ ಸೈನ್ ಇನ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಅಳಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ನಷ್ಟವೇನು?: ಜಿ ಮೇಲ್‌, ಡಾಕ್ಸ್‌, ಡ್ರೈವ್‌, ಮೀಟ್‌, ಕ್ಯಾಲೆಂಡರ್‌, ಯೂಟ್ಯೂಬ್‌, ಗೂಗಲ್‌ ಫೋಟೋಸ್‌ ಸೇರಿದಂತೆ ನಿಮ್ಮ ಗೂಗಲ್‌ ಖಾತೆ ಸಕ್ರಿಯ ಆಗದೇ ಇದ್ದರೆ ಇವುಗಳನ್ನು ಕಳೆದುಕೊಳ್ಳಲಿದ್ದೀರಿ.

ಇದನ್ನೂ ಓದಿ: ಗೂಗಲ್​​ನ ಹೊಸ ವೈಶಿಷ್ಟ್ಯ Grammar Check; ಬಳಸುವುದು ಹೇಗೆ?... ನೀವೂ ಒಮ್ಮೆ ಟ್ರೈ ಮಾಡಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.