ETV Bharat / science-and-technology

ಗೂಗಲ್​ ಮೀಟ್​ನ ಹೊಸ ಅಪ್ಡೇಟ್: ಮೀಟಿಂಗ್​ಗೆ ಸಹಕಾರಿಯಾಲಿವೆ ಈ ಫೀಚರ್​ಗಳು - ಟೆಕ್ ದೈತ್ಯ ಗೂಗಲ್ ಮೀಟ್

ಮೀಟಿಂಗ್​ ಆ್ಯಪ್​ಗಳಲ್ಲಿ ಒಂದಾದ ಗೂಗಲ್​ ಮೀಟ್​ ಹೊಸ ಅಪ್ಡೇಟ್​ ಫೀಚರ್​ನ್ನು ಪರಿಚಯಿಸುತ್ತಿದೆ. ಗೂಗಲ್​ ಅಸಿಸ್ಟೆಂಟ್​ನ ಸಹಾಯದಿಂದ ಕಾರ್ಯನಿರ್ವಹಿಸುವಂತೆ ಮತ್ತು ಸ್ವಯಂಚಾಲಿತ ಝೂಮ್​ನ್ನು ಪರಿಚಯಿಸುತ್ತಿದೆ. ಇದರೊಂದಿಗೆ ಇತರೆ ಹೊಸ ವೈಶಿಷ್ಟ್ಯಗಳನ್ನು ತರಲಾಗುತ್ತಿದೆ.

Google Meet
ಗೂಗಲ್​ ಮೀಟ್​ನ ಹೊಸ ಅಪ್ಡೇಟ್​
author img

By

Published : Oct 18, 2022, 10:17 PM IST

ನವದೆಹಲಿ: ಟೆಕ್ ದೈತ್ಯ ಗೂಗಲ್ ಮೀಟ್(Google Meet)ನಲ್ಲಿ ಕೆಲ ಹೊಸ ಪೀಚರ್​ಗಳು ಬಂದಿವೆ. ಸ್ವಯಂಚಾಲಿತವಾಗಿ ವಿಡಿಯೋವನ್ನು ಫ್ರೇಮ್ ಮಾಡಿಕೊಳ್ಳುವ ಹೊಸ ಫೀಚರ್​ನ್ನು ಗೂಗಲ್ ಮೀಟ್ ಪರಿಚಯಿಸಿದೆ. ವಿಡಿಯೋ ಆನ್​ ಆದಾಗ ಎಲ್ಲರ ಡಿಸ್​ಪ್ಲೇ ಚಿತ್ರ (Display Picture)ವನ್ನು ಸಮಾನಾಗಿ ಕಾಣುವಂತೆ ಈ ಝೋಮ್​ ಹೊಂದಿಸುತ್ತದೆ. ಈ ಫ್ರೇಮ್​ನ್ನು ಅದೇ ಸ್ವತಃ ಮಾಡಿಕೊಳ್ಳುವ ರೀತಿಯ ಫೀಚರ್​ನ್ನು ಮುಂದಿನ ಅಪ್​ಡೇಟ್​ನಲ್ಲಿ ಲಭ್ಯವಾಗಲಿದೆ.

ಈ ಫೀಚರ್​ ತರಲು ಮುಖ್ಯ ಕಾರಣ ಎಂದರೆ ವಿವರಣೆ ನೀಡುವಾಗ ಆಚೀಚೆ ಅಲುಗಾಡಿದಂತಾಗಿ ಗಮನ ಬೇರೆಡೆ ಸೆಳೆಯಬಾರದು ಎಂದಾಗಿದೆ. ಯಾರು ಇಲ್ಲದೇ ಪಿಪಿಟಿ ಪ್ಲೇ ಮಾಡುವ ಫೀಚರ್​ನ್ನು ಇದರಲ್ಲಿ ತರಲು ಚಿಂತಿಸಲಾಗಿದೆ. ಇದಕ್ಕೆ ಪೂರ್ವವಾಗಿ ಕಾರ್ಯಕ್ರಮವನ್ನು ನಿಯೋಜನೆ ಮಾಡಿ ಶೆಡ್ಯೂಲ್​ ಮಾಡಬೇಕಿರುತ್ತದೆ.

ಹೊಸ ಅಪ್​ಡೇಟ್​ನಲ್ಲಿ ಸ್ಪೇಸ್‌ಬಾರ್ ಅನ್ನು ಒತ್ತುವ ಮೂಲಕ ಮ್ಯೂಟ್ ಮತ್ತು ಅನ್​ಮ್ಯೂಟ್​ ​ಮಾಡುವ ಅವಕಾಶವನ್ನು ನೀಡಲಾಗುತ್ತಿದೆ. ಗೂಗಲ್​ ಅಸಿಸ್ಟ್​ ಮೂಲಕವೂ ಪೂರ್ವ ನಿಗದಿತ ಮೀಟಿಂಗ್​ನ್ನು ನಿಯಂತ್ರಿಸುವ ಫೀಚರ್​ ತರಲಾಗಿದೆ. ಈ ವೈಶಿಷ್ಟ್ಯವನ್ನು ಮೊದಲು Google ಕ್ಲೌಡ್ ನೆಕ್ಸ್ಟ್ 2022 ರಲ್ಲಿ ತಿಳಿಸಿದ್ದು, ನವೆಂಬರ್ 2 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಫೇಸ್​ಬುಕ್ ಇನ್​ಸ್ಟಂಟ್​ ಆರ್ಟಿಕಲ್ ಫಾರ್ಮ್ಯಾಟ್ ನಿಲ್ಲಿಸಲು META ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.