ETV Bharat / science-and-technology

Pixel Fold: ಗೂಗಲ್​ನ ಮೊದಲ ಫೋಲ್ಡಬಲ್ ಫೋನ್ ಅನಾವರಣ, ಬೆಲೆ 1,799 ಡಾಲರ್

ಗೂಗಲ್ ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್​ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಇದು ಅಮೆರಿಕದ ಗ್ರಾಹಕರಿಗೆ ಪ್ರಿ ಆರ್ಡರ್​ ಆಧಾರದಲ್ಲಿ ಲಭ್ಯವಾಗಲಿದೆ.

Google enters foldable smartphone market with Pixel Fold

author img

By

Published : May 11, 2023, 1:21 PM IST

ನವದೆಹಲಿ : ಗೂಗಲ್ ತನ್ನ ಮೊಟ್ಟ ಮೊದಲ ಫೋಲ್ಡಬಲ್ ಫೋನ್​ ಅನ್ನು ಅನಾವರಣಗೊಳಿಸಿದೆ. ಪಿಕ್ಸೆಲ್ ಫೋಲ್ಡ್​ ಹೆಸರಿನ ಮಡಚಬಹುದಾದ ಈ ಫೋನ್ ಅನ್ನು ಸದ್ಯ ಅಮೆರಿಕದಲ್ಲಿ ಪ್ರಿ-ಆರ್ಡರ್ ಮಾಡಬಹುದು ಮತ್ತು ಮುಂದಿನ ತಿಂಗಳು ಅವರಿಗೆ ಫೋನ್ ರವಾನೆಯಾಗಲಿದೆ. ಅಮೆರಿಕದಲ್ಲಿ 1,799 ಡಾಲರ್ ಬೆಲೆಯ ಪಿಕ್ಸೆಲ್ ಪೋಲ್ಡ್​ Tensor G2 ಚಿಪ್ ಹೊಂದಿದೆ. ಪೋರ್ಸ್​ಲೇನ್ ಮತ್ತು ಆಬ್ಸಿಡಿಯನ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಆರಂಭದಲ್ಲಿ ಜರ್ಮನಿ, ಜಪಾನ್, ಯುಕೆ ಮತ್ತು ಯುಎಸ್​ನ ಗ್ರಾಹಕರಿಗೆ ಲಭ್ಯವಾಗಲಿದೆ.

ಅಮೆರಿಕದಲ್ಲಿ ಪಿಕ್ಸೆಲ್ ಫೋಲ್ಡ್ ಅನ್ನು ಪ್ರಿ ಆರ್ಡರ್ ಮಾಡಿದ ಗ್ರಾಹಕರಿಗೆ ಗೂಗಲ್ ಪಿಕ್ಸೆಲ್ ವಾಚ್ ಅನ್ನು ಫ್ರೀಯಾಗಿ ನೀಡುವುದಾಗಿ ಗೂಗಲ್ ಆಫರ್ ಘೋಷಿಸಿದೆ. ಪಿಕ್ಸೆಲ್ ಫೋಲ್ಡ್ ಮಡಚಿದ ಸ್ಥಿತಿಯಲ್ಲಿದ್ದಾಗ ಸಾಮಾನ್ಯ ಸ್ಮಾರ್ಟ್​ಫೋನ್​ನಷ್ಟೇ ಗಾತ್ರದಲ್ಲಿರುತ್ತದೆ ಮತ್ತು ಅಂಗೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದು ಹಾಗೂ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಇದನ್ನು ತೆರೆದಾಗ ಇದು 7.6 ಇಂಚಿನ ಸ್ಕ್ರೀನ್ ಅನ್ನು ನಿಮ್ಮ ಮುಂದೆ ತೆರೆದಿಡುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಾವುದೇ ಫೋಲ್ಡಬಲ್ ಫೋನ್​ಗಿಂತ ಇದು ತೆಳುವಾಗಿರುತ್ತದೆ.

ಫೋನ್ ಮುಚ್ಚಿದ ಸ್ಥಿತಿಯಲ್ಲಿರುವಾಗ ನೀವು ಮೆಸೇಜುಗಳಿಗೆ ರಿಪ್ಲೈ ಮಾಡುವುದು, ಕ್ರೋಮ್​ನಲ್ಲಿ ಬ್ರೌಸ್ ಮಾಡುವುದು ಅಥವಾ ಗೂಗಲ್​ನ ಕಾಲ್ ಅಸಿಸ್ಟ್ ಫೀಚರ್​ಗಳಾದ ಡೈರೆಕ್ಟ್ ಮೈ ಕಾಲ್, ಕಾಲ್ ಸ್ಕ್ರೀನ್, ಹೋಲ್ಡ್​ ಫಾರ್ ಮಿ ಮತ್ತು ಕ್ಲೀಯರ್ ಕಾಲಿಂಗ್ ಮುಂತಾದ ಎಲ್ಲ ಕಾರ್ಯಗಳನ್ನು ಇದರ ಮೂಲಕ ಮಾಡಬಹುದು. ಫೋನನ್ನು ಸಂಪೂರ್ಣವಾಗಿ ತೆರೆದಾಗ ಆಂತರಿಕ ಪರದೆಯು ಟ್ಯಾಬ್ಲೆಟ್‌ನ ಎಲ್ಲಾ ವೈಶಿಷ್ಟ್ಯಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ. ಸ್ಪ್ಲಿಟ್‌ ಸ್ಕ್ರೀನ್‌ನಲ್ಲಿರುವಾಗ, ನೀವು ಗೂಗಲ್ ಫೋಟೋಗಳು ಸಂದೇಶಗಳು ಮತ್ತು ಸ್ಲೈಡ್‌ಗಳಂತಹ ವಿವಿಧ ಅಪ್ಲಿಕೇಶನ್‌ಗಳಾದ್ಯಂತ ಫೈಲ್‌ಗಳನ್ನು ಸುಲಭವಾಗಿ ಎಳೆದು ಇಡಬಹುದು ಮತ್ತು ಬಿಡಬಹುದು ಎಂದು ಕಂಪನಿ ಹೇಳಿದೆ.

Pixel Fold 5x ಆಪ್ಟಿಕಲ್ ಜೂಮ್, ರಿಯಲ್ ಟೋನ್, ನೈಟ್ ಸೈಟ್ ಮತ್ತು ಪೋರ್ಟ್ರೇಟ್ ಫೋಟೋಗ್ರಫಿ ಮತ್ತು Pixel 7 Pro 10-ಬಿಟ್ HDR ವೀಡಿಯೊದಂತಹ ಪ್ರೊ-ಲೆವೆಲ್ ಮೋಡ್‌ಗಳೊಂದಿಗೆ ಸೂಪರ್ ರೆಸ್ ಜೂಮ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿವೆ. ಚಿತ್ರಗಳನ್ನು ಸರಿಯಾಗಿ ಕಾಣುವಂತೆ ಮಾಡಲು ಬಳಕೆದಾರರು ಗೂಗಲ್ ಫೋಟೋಗಳಲ್ಲಿ ಮ್ಯಾಜಿಕ್ ಎರೇಸರ್ ಮತ್ತು ಫೋಟೋ ಅನ್ ಬ್ಲರ್ ಅನ್ನು ಬಳಸಬಹುದು.

ಪಿಕ್ಸೆಲ್ ಫೋಲ್ಡ್‌ನಲ್ಲಿ ಹಿಂಬದಿಯ ಕ್ಯಾಮೆರಾ ಸೆಲ್ಫಿಯೊಂದಿಗೆ, ನೀವು ಪಿಕ್ಸೆಲ್‌ನಲ್ಲಿ ಅತ್ಯುನ್ನತ ಗುಣಮಟ್ಟದ ಸೆಲ್ಫಿಯನ್ನು ಪಡೆಯಬಹುದು. ನಿಮ್ಮ ವ್ಯೂಫೈಂಡರ್ ಆಗಿ ಬಾಹ್ಯ ಪರದೆಯನ್ನು ಮತ್ತು ಅದ್ಭುತ ಸೆಲ್ಫಿ ಪಡೆಯಲು 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಬಳಸಿ ಎಂದು ಕಂಪನಿ ಹೇಳಿದೆ. ಡ್ಯುಯಲ್ ಸ್ಕ್ರೀನ್ ಇಂಟರ್ ಪ್ರಿಟರ್ ಮೋಡ್ ನೇರ ಸಂಭಾಷಣೆಗಳನ್ನು ಭಾಷಾಂತರಿಸಲು ಒಳ ಮತ್ತು ಹೊರ ಪರದೆಗಳನ್ನು ಏಕಕಾಲದಲ್ಲಿ ಬಳಸುತ್ತದೆ. ಈ ವೈಶಿಷ್ಟ್ಯದೊಂದಿಗೆ, ನೀವು ಒಂದೇ ಪರದೆಯ ಸುತ್ತಲೂ ಚಲನೆ ಮಾಡದೆಯೇ ವಿಭಿನ್ನ ಭಾಷೆಗಳಲ್ಲಿ ಹೆಚ್ಚು ನೈಸರ್ಗಿಕ ಸಂಭಾಷಣೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಗೂಗಲ್ ಹೇಳಿದೆ.

ಇದನ್ನೂ ಓದಿ : Google Bard ಭಾರತದಲ್ಲಿ ಕಾರ್ಯಾರಂಭ: ChatGPT ಗೆ ಗೂಗಲ್ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.